" ವಯಸ್ಸಾ ದಂತೆಯೇ ತಾಯಿಗೆ ಗಂಡನಿಗಿಂತ ಮಗನ ಮೇಲೆ ತುಂಬಾ ಪ್ರೀತಿ....
ವಯಸ್ಸಾ ದಂತೆಯೇ ಮಗನಿಗೆ ತಾಯಿಗಿಂತ ಹೆಂಡತಿ ಮೇಲೆ ತುಂಬಾ ಪ್ರೀತಿ.... "
ನಾಡ ಗೀತೆ...
ಜೈ ಜೈ ಕನ್ನಡಮ್ಮನಿಗೆ,
ಜಯವಾಗಲಿ ಎಂದು ಕನ್ನಡ ರಮಣಿಗೆ..
ಜೈ ಜೈ ಭಾರತಮಾತೆಯ ಕಂದನಿಗೆ,
ಜಯವಾಗಲಿ ಎಂದು ಭೂದೇವಿಯ ಕಣ್ಮಣಿಗೆ..
ಮಂಡ್ಯದ ಸಿಹಿ ಕೊಡಗಿನ ಸಿರಿ ಕೊರಳಲಿ ಮಂಗಳೂರ ಮುತ್ತಿನ ಮಾಲೆ,
ಬಳ್ಳಾರಿಯ ಬೆಳೆ ಜೊಗಿನ ಝರಿ ನಿನ್ನ ಮಡಿಲೆ ಪರಶುರಾಮನ ನೆಲೆ..
ಒಂದೇ ಜಾತಿ ಒಂದೇ ಧರ್ಮ ಒಂದೇ ಮಾತ ವೆಂಬ ಗುರುಗಳ ನುಡಿ,
ಇಲ್ಲಿ ಎಲ್ಲ ಜಾತಿ ಧರ್ಮ ಮಾತದ ಜನರ ಪ್ರೀತಿಗಿಲ್ಲ ಗಡಿ..
ಬಾದಾಮಿ ಐಹೊಳೆ ಪಟ್ಟದಕಲ್ಲಿನ ಶಿಲೆ,
ಇಲ್ಲಿ ಕನಕ ಪುರಂದರ ಮಧ್ವ ಬಸವಣ್ಣನ ಮಾತಿಗಿದೆ ಬೆಲೆ..
ನಾನ್ಯದೇವ ಕಲ್ಲಿನಾಥ ಪಂಡರೀಕ ವಿಠ್ಠಲ ಶಾರ್ಙ್ಗದೇವ ಹಾಡಿದ ಹಾಡು,
ಪಂಪ ರನ್ನ ಜನ್ನ ಕುಮಾರವ್ಯಾಸರಂತಹ ಕವಿಗಳಿಗೆ ಜನ್ಮ ಕೊಟ್ಟ ನಾಡು..
ಸಂತ ಮೇರಿ ಬೆಸಿಲಿಕಾ ಬೈತಡ್ಕದ ಪಳ್ಳಿ ಉಡುಪಿ ಶ್ರೀಕೃಷ್ಣನ ಲೀಲೆ
ಇದುವೆ ಗೌತಮ ವಿವೇಕ ಪರಮಹಂಸರ ಶಾಂತಿ ಮಂತ್ರದ ಶಾಲೆ..
ತುಂಬಿ ಹರಿಯುವ ಕೃಷ್ಣಾ ಶರಾವತಿ ಕಾವೇರಿ ಗೋದಾವರಿಯ ನೋಡು
ಇದುವೆ ತಂಪೆರೆಯುವ ಹಚ್ಚ ಹಸಿರ ಮಲೆನಾಡ ವನದೇವಿಯ ಕರುನಾಡು..
ಹಂಪೆ ಹಳೇಬೀಡು ಬೇಲೂರು ದೇವಾಲಯದ ಕಲೆ
ಇಲ್ಲಿ ಎಲ್ಲ ಭಾಷೆಯವ ಜನರಿಗಿದೆ ನೆಲೆ..
ತೇಗ ಶ್ರೀಗಂಧ ಬೆಳೆಯುವ ನಾಡು, ಕೋಲಾರದ ಹೊನ್ನಿನ ಗಣಿಯ ಗೂಡು
ಇದುವೆ ಹಿಂದೂ ಜೈನ ಕ್ರೈಸ್ತ ಬೌದ ಮುಸಲ್ಮಾನರ ದೇವರ ಬೀಡು..
ವೆಂಕಟ ಸದಾಶಿವ ಶ್ರೀನಿವಾಸ ವಿಶ್ವೇಶ್ವರಯ್ಯ ಸಾಧನೆಯ ಮೇಲೆ
ಸಂಸ್ಕೃತಿ ತ್ಯಾಗ ಸ್ವಾಭಿಮಾನಗಳ ಸೌಂದರ್ಯದ ನೆಲೆ..
ಮೌರ್ಯ ಗಂಗ ಕದಂಬ ಹೊಯ್ಸಳ ಚಾಲುಕ್ಯರಾಳಿದ ನಾಡು
ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣರ ಶೌರ್ಯದ ಬೀಡು..

Subscribe to:
Posts (Atom)