ನಾ ವಾಲ್ಮೀಕಿಯಾಗಿದ್ದರೆ........

ಕರ್ನಾಟಕದ ಸಣ್ಣ ಊರಾದ ಮಂಗಳೂರುನ್ನ ಸ್ವರ್ಗದ ಇನೋಂದು ಭಾಗ ಅಂತ ಜನ ತಿಳಿದುಕೊಂಡಿದ್ದರು. ಅಂತ ಊರಲ್ಲಿ ಹುಟ್ಟಿ ಬೆಳೆದ ದಶರಥ ಗೌಡರು ಕರ್ನಾಟಕ ಮುಖ್ಯಮಂತಿಯಾಗಿದ್ದರು. ಅವರ ಕನಸ್ಸು ಇಡಿ ಕನ್ನಡ ನಾಡನ್ನು ಶಾಂತಿಯ ನಾಡನ್ನಾಗಿ ಮಾಡುವುದು. ಇಡೀ ನಾಡಲ್ಲಿ ಶಾಂತಿಯೋನೊ ನೆಲಸಿತ್ತು ಆದ್ರೆ ಗೌಡರ ಮನಸಿನಲ್ಲಿ ಮಾತ್ರ ಒಂದು ದುಃಖದ ವಿಷಯ ಮಾತ್ರ ಹಾಗೆನೆ ಉಳಿದಿತ್ತು. ಅವರಿಗೆ ಮಕ್ಕಳಿಲ್ಲದ ದುಃಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಬಂದಾಗ ಯಾರಿದಲೊ ಅವರಿಗೆ ತಿಳಿಯಿತು ದಕ್ಷಿಣ ಕರ್ನಾಟಕದ ಕುಂದಾಪುರ ಕೋಟದಲ್ಲಿರುವ ಹಲಾವು ಮಕ್ಕಳ ತಾಯಿ ಅಮ್ರತೇಶ್ವರಿ ದೇವಿಯಲ್ಲಿ ಪ್ರಾಥಿಸಿದರೆ ತನ್ನ ಎಲ್ಲ ತೊಂದರೆಗಳು ನಿವಾರಣೆಯಾಗ ಬಹುದೆಂದು....


ಗೌಡರು ಪ್ರಾಥಿಸಿದ ಒಂದು ವರ್ಷದಲ್ಲಿ ಅವರ ಮೂವರು ಹೆಂಡತಿಯಾರಿಗು ಮಕ್ಕಳಾಯಿತು. ಗೌಡರ ಮನಸ್ಸಿನಲ್ಲಿರುವ ದುಃಖವೆನು ಕಮ್ಮಿಯಾಯಿತ್ತು ಆದ್ರೆ ಈ ಹಿಂದೆ ನಡೆದ ಒಂದು ಆಕಸ್ಮಿಕ ಘಟನೆಯಿಂದ ಅವರು ಮತಷ್ಟು ತತ್ತರಿಸಿ ಹೋಗಿದ್ದರು. ಈ ಹಿಂದೆ ಕರ್ನಾಟಕ ರಾಜದಾನಿಯಿಂದ ಗೌಡರು ಮಂಗಳೂರಿಗೆ ಹಿಂದಿರುವಾಗ ದಾರಿಯಲ್ಲಿ ಸಾವನ್ ಕುಮಾರ ತನ್ನ ಅಂಧ ತಂದೆ ತಾಯಿಯವರೊಟ್ಟಿಗೆ ತಿರ್ಥಯಾತ್ರಗೆ ಹೋಗುತ್ತಿರುವ ಕಾರಿಗೆ ಗೌಡರ ಅಜುರುಕತೆಯಿಂದ ಕಾರು ಕಾರಿಗೆ ಡಿಕ್ಕಿ ಹೋಡೆದು ಸ್ಥಳದಲ್ಲಿಯೆ ಸಾವನ್ ಕುಮಾರು ಸಾವನ್ನಪ್ಪಿದ್ದ. ಗೌಡರು ತನ್ನ ತಪ್ಪನೆಲ್ಲ ಓಪ್ಪಿಕೊಂಡಿದ್ದರು ಈ ಕೇಸು ಕೋರ್ಟಿನಲ್ಲಿತು...


ಈಗ ಗೌಡರದ್ದು ದೊಡ್ಡ ಸಂಸಾರ ಮೂರು ಜನ ಹೆಂಡತಿಯರು. ಮೊದಲ ಹೆಂಡತಿಯ ಮಗನ ಹೆಸರು ರಾಮು, ಎರಡನೇ ಹೆಂಡತಿಗೆ ಇಬ್ಬರು ಮಕ್ಕಳು ಬೊಬಿ ಮತ್ತು ಶತ್ರು ಮತ್ತು ಮೂರನೆ ಹೆಂಡತಿಯ ಮಗನ ಹೆಸರು ಲಕ್ಕಿ...
ರಾಮು ಮತ್ತು ಲಕ್ಕಿ ವಿಶ್ವಮಿತ್ರ ಯುನಿವರ್ಸಿಟಿಯಲ್ಲಿ ಕಲಿತು ಸರಕಾರದ ಪೋಲಿಸ್ ಹುದ್ದೆಯಲ್ಲಿದ್ದರು. ಇವರಿಬ್ಬರು ನಿಷ್ಟವಂತ ಪೋಲಿಸರಲ್ಲಿ ಓಬ್ಬರು. ಇವರಿಗೆ ಕರ್ತವ್ಯವೆ ದೇವರು ಅವರ ಜೀವನದ ಗುರಿ ತನ್ನ ತಂದೆಯ ಕನಸ್ಸನ್ನ ನನಸುಮಾಡುವುದು. ಕನ್ನಡ ನಾಡನ್ನ ಒಂದು ಶಾಂತಿಯುತ ನಾಡನ್ನಾಗಿ ಮಾಡುವುದು. ಬಾಬಿ ಮತ್ತು ಶತ್ರು ಉನ್ನತ ವಿಧ್ಯಾಭ್ಯಾಸಕ್ಕಾಗಿ ರಾಜ್ಯಾದ ಹೋರ ಊರಲ್ಲಿ ಇದ್ದರು...


ರಾಮು ಕೆಲಸದ ವಿಷಯದಲ್ಲಿ ಒಮ್ಮೆ ಕೊಡಗಿಗೆ ಹೋದಾಗ ಅಲ್ಲಿಯ ಮೇಯರ್ ಜನಾರ್ಧನ ರಾವ್ ನ ಪರಿಚಾಯವಾಯಿತು. ರಾಮು ಈಗಾಗಲೆ ಇಡಿ ಕರ್ನಾಟಕದಲ್ಲಿಯೇ ಪೊಲಿಸ್ ಉದ್ಯೋಗದಲ್ಲಿ ಹೆಸರು ಮಾಡಿದ್ದ. ಅವಾಗ ಭುಗತ ದೊರೆಯಾಗಿದ್ದ ರೌಡಿ ತಟಕನ ಎನ್ಕೌಂಟರ್ ಮಾಡಿದ್ದು ರಾಮುನೇ. ಕೊಡಗಿನ ಮೇಯರಿಗೆ ಇಬ್ಬರು ಮಕ್ಕಳು ಗೀತಾ ಮತ್ತು ನೀತ (twins). ಅದರಲ್ಲಿ ಗೀತ ದೊಡ್ಡವಳು ಮತ್ತು ನೋಡಲು ಸುಂದರವಾದ ಹುಡುಗಿ, ಅದಲ್ಲದೆ ಬೆಂಗಳೂರಿನಲ್ಲಿ ನಡೆದ ಮಿಸ್ ಕರ್ನಾಟಕದ ವೀಜೆತ ಕೂಡ. ಅವಳ ಸೌಂದರ್ಯ ಕ್ಕೆ ಬಿಳಿದ ಹುಡಗಿರಿಲ್ಲ. ಆದ್ರೆ ಗೀತ ಬಾಕಿ ಹುಡಿಗಿಯರಂತೆಯಲ್ಲ ಎಷ್ಟು ಸೌಂದರ್ಯವತಿಯೊ ಅಷ್ಟೆ ಗುಣವಂತಿ. ಇವಳನ್ನ ಮದುವೆಯಾಗಲು ಹಲವು ಜನ ಬಂದಿದ್ದರು ಅದರಲ್ಲಿ ಶ್ರೀಲಂಕದ ಬಿಸಿನೆಸ್ ಮೆನ್ ಕೂಡ ಒಬ್ಬ. ಈ ಶ್ರೀಲಂಕದ ಬಿಸಿನೆಸ್ ಮೆನ್ ಹೆಸರು ರಾವಣಾಕರನ್. ಇವ ಸಾದಾರಣದ ವ್ಯಕ್ತಿಯಲ್ಲ, ಇವನಿಗೆ ೧೦ ಜನ ಪರ್ಸನಲ್ ಸೆಕ್ರೆಟರಿ ಇದ್ದರು ಆದರಿಂದ ಇವನನ್ನ ಜನ ಹತ್ತು ತಲೇಯ ರಾವಣಾಕರನ್ ಅಂತ ಜನ ಕರೆಯುತ್ತಿದ್ದರು. ಇವನ ಬಿಸಿನೆಸ್ ಇಡಿ ಭಾರತದಲ್ಲಿಯೆ ಇತ್ತು ಅದ್ರೆ ಇವನ್ನದ್ದು ಲೀಗಲ್ ಬಿಸಿನೆಸ್ ಗಿಂತ ಇಲ್ ಲೀಗಲು ಬುಸಿನೆಸ್ ಜಾಸ್ಥಿ. ಭಾರತದಲ್ಲಿ ಯಾರಿಗು ಇವನ ಇಲ್ ಲೀಗಲು ಬುಸಿನೆಸ್ ನಿಲ್ಲಿವಷ್ಟು ಧೈರವಿರಲಿಲ್ಲ. ಆದ್ರೆ ಯಾವಗ ಇವ ಬಿಸಿನೆಸ್ ಮಾಡಲು ಕರ್ನಾಟಕದ ಮೇಲೆ ಕಣ್ಣು ಹಾಕಿದನೋ ಅವತ್ತೆ ಅವನ ಶನಿದೇಸೆ ಶುರುವಾಯಿತು. ಇವನ ವಿರುದ್ದ ಕಾರ್ಯಾಚಾರಣೆ ಮಾಡಬೇಕೆಂದು ಕರ್ನಾಟಕ ಸರಕಾರ ತಿರ್ಮಾನಿಸಿತ್ತು ಮತ್ತು ಆ ಕೇಸನ್ನ ರಾಮುವಿನ ಕೈಗೆ ಓಪ್ಪಿಸಿದ್ದರು. ಆದ್ರೆ ರಾಮುವಿಗೆ ಇದೊಂದು ಚಾಲೇಜಿಂಗ್ ಕೆಲಸ ಅಷ್ಟೆ....


ರಾಮುವಿನ ಬಗ್ಗೆ ಹೇಳ ಬೇಕಾದರೆ ಅವನೊಬ್ಬ ನೇರ ನಡೆ ನುಡಿಯ ಜನ, ಅಷ್ಟೆ Handsome ಹಾಂಡಸಂಮೆ ಕೂಡ. ಯಾವ ಹುಡಿಗಿಯು ಒಮ್ಮೆ ನೋಡಿದರೆ ಇನೊಮ್ಮೆ ಹಿಂದಿರುಗಿ ನೋಡಬೇಕೆನಿವಷ್ಟು cute. ಆದ್ರೆ ರಾಮು ಯಾವ ಹುಡಿಗಿನು ಕಣ್ಣೆತ್ತಿ ನೋಡಲ್ಲ. ಆವನಿಗೆ ಪ್ರತಿಯೊಂದು ಸ್ತ್ರಿಯು ತಾಯಿ ಸಮಾನ...


ಒಂದು ದಿನ ಕೊಡಗು ತಿರುಗಬೇಕೆಂದು ರಾಮು ಜನಾರ್ಧನ ರಾವ್ ಕುಟುಂಬದೊಟ್ಟಿಗೆ ಶಿವ ಮಂದಿರಕ್ಕೆ ಹೋಗಿದ್ದ. ಆಗ ಶಿವಮಂದಿರದ ಬಾಗಿಲಲ್ಲಿದ್ದ ಹುಡುಗರ ಗುಂಪು ಗೀತಳನ್ನ ಚುಡಯಿಸಲು ಶುರುಮಾಡಿದರು. ಎಷ್ಟಾದರು ನಮ್ಮ ರಾಮು Black Belt ಕಲಿತವ ಈ ಸಣ್ಣಪುಟ್ಟ ಚಿಲ್ಲರೆ ರೋಡ್ ರೊಮಿಯರ ಹುಚ್ಚು ನಿಲ್ಲಿಸುವುದು ಅವನಿಗೆನು ದೊಡ್ಡ ವಿಶ್ಯವಲ್ಲ ಅದರು ಸುಮ್ಮನಿದ್ದ. ಯಾವಗ ಶ್ರಿಮಂತ ಅಪ್ಪಂದಿರ ಮದ್ದು ಮಕ್ಕಳ ಕಿಟಲೆ ಹೇಚ್ಚಾಗ ಶುರುವಾಯಿತು ಆಗ ರಾಮು ಆ ಹುಡುಗರ ಗುಂಪಿನ ನಾಯಕನದ ಧನುಷುನ ಕಪಳಕ್ಕೆ ಒಂದು ಬಿಗಿದ. ಒಂದೇ ಪೆಟ್ಟಿನಲ್ಲಿ ರಕ್ತ ಬರೊ ಶುರುವಾಯಿತು. ಅಲ್ಲಿದ್ದ ಬಾಕಿ ಹುಡುಗರೆಲ್ಲರು ಓಡಿದರು. ಆಗ ಧನುಷುಗು ತನ್ನ ತಪ್ಪಿನ ಅರಿವಾಯಿತೊ ಎನೊ, ಧನುಷು ರಾಮುವಿನಲ್ಲಿ ಸಾರಿ ಕೇಳಿದ. ಪಾಪ ರಾಮುವಿಗು ಧನುಷುನ ಅಹಂಕಾರ ಮುರಿದಂತೆ ಕಂಡಿತು, ಕೋನೆಗೆ ರಾಮು ಅವನಿಗೆ ಪ್ರಥಮ ಚಿಕಿಸ್ಥೆ ಕೊಟ್ಟು ಅವನನ್ನ ಮನೆ ತನಕ ಬಿಟ್ಟು ಬಂದ. ಗೀತಳಿಗಂತು ನಮ್ಮ ರಾಮುವಿನ Styleಗೆ ಮನಸೋತು ಹೋಗಿದ್ದಳು. ಮುಂದೆ ಮನೆಯವರ ಓಪ್ಪಿಗೆಯಿಂದ ರಾಮುವಿಗು ಗೀತಳಿಗು ಮದುವೆಯಾಯಿತು.....


ಗೌಡರದ್ದು ಈಗ ಮಲಗಿ ಆಕಾಶ ನೋಡುವ ಪ್ರಾಯ ಆದ್ರೆ ತನ್ನ ಮುಂದಿನ ರಾಜಕೀಯ ವ್ಯಾವಹರವನ್ನ ತನ್ನ ಹಿರಿಯ ಮಗ ರಾಮು ಮುಂದುವರೆಸಿ ಕೊಂಡು ಹೋಗ ಬೇಕೆನ್ನುವ ಆಸೆ ಬೇರೆ. ಆದರೆ ಇದು ಮನೆಯ ಕೆಲಸದಕೆ ಮುನಿಯಜ್ಜಿಗೆ ಇಷ್ಟವಿರಲಿಲ್ಲ. ತನ್ನ ಎರಡನೇ ಹೆಂಡತಿಯ ಮಗನನ್ನು (ಬಾಬಿ) ಸಾಕಿ ಬೆಳೆಸಿದವಳು ಈ ಮುನಿಯಜ್ಜಿ. ಇ ಮುನಿಯಜ್ಜಿಯ ಕನಸ್ಸು ಮುಂದಿನ ಚುನಾವಣೆಯಲ್ಲಿ ಬಾಬಿಯೇ ನಿಲ್ಲಬೇಕೆಂದು. ಆದಕ್ಕಾಗಿ ಮುನಿಯಜ್ಜಿ ಗೌಡರ ಎರಡನೇ ಹೆಂಡ್ತಿ ಕಮಲಳ ತಲೆ ತಿರಿಗಿಸಿದಳು. ಪಾಪ ಕಮಲ ಮುನಿಯಜ್ಜಿಯ ಮಾತಿಗೆ ಮರುಳಾಗಿ ಈ ಹಿಂದೆ ಗೌಡರು ಯಾವುದೆ ಕಾರಣಕ್ಕೊ ತನಗೆ ಸಹಿ ಹಾಕಿ ಕೊಟ್ಟಿರುವ ಖಾಲಿ ಸ್ಟಾಂಪ್ ಪೆಪರನಲ್ಲಿ ಗೌಡರ ಅಸ್ತಿಯನೆಲ್ಲ ಬರೆದು ಬಿಟ್ಟಳು. ಕಮಲ ಗೌಡರ ಮುದ್ದಿನ ಹೆಂಡ್ತಿ ಅದಲ್ಲದೆ ತನ್ನ ಎಲ್ಲ ವ್ಯಾವಾಹಾರಿಕ ಲೆಕ್ಕವನ್ನ ನೋಡುತ್ತಿದ್ದವಳು ಬೇರೆ ಅದರಿಂದ ಗೌಡರಿಗೆ ಬೇರೆ ಮಾತಾಡುವ ಅವಕಾಶನೆ ಇರಲಿಲ್ಲ...


ರಾಮುವಿಗೆ ಯಾವ ಅಸ್ತಿ ಮೇಲು ಅಸೆ ಇರಲಿಲ್ಲ, ಸಾಯುವರೆಗು ದುಡಿದು ತಿನ್ನ ಬೇಕೆಂಬ ಆಸೆ ಅವನದ್ದು. ತಾನು ಈ ಉರಲ್ಲೆ ಇದ್ದರೆ ತಂದೆಯ ಅನುನಾಯಿಗಳು ತನ್ನನ್ನು ಮುಂದಿನ ಚುನಾವಣೆಯಲ್ಲಿ ನಿಲ್ಲಿಸುವರು ಮತ್ತು ಇದು ತನ್ನ ತಂದೆ ಮತ್ತು ತಮ್ಮನಿಗೆ ಇಷ್ಟವಾಗಲ್ಲ ಅಂತ ರಾಮು ಬಾವಿಸಿ ಗೀತಳೊಟ್ಟಿಗೆ ಮನೆ ಬಿಟ್ಟು ಹೋಗಲು ನಿರ್ಧರಿಸಿದನು. ಅಣ್ಣ ರಾಮುವಿನ ನೆರಳಲ್ಲಿ ಬೆಳೆದ ಲಕ್ಕಿ ಕೂಡ ಇವರೊದ್ದಿಗೆ ಬರುದಾಗಿ ತಿಳಿಸಿದನು. ಹೀಗೆ ರಾಮು, ಗೀತ, ತಮ್ಮ ಲಕ್ಕಿ ಮನೇ ಬಿಟ್ಟು ಹೋರಟರು.. ಈಗ ಮನೆ ಬಿಟ್ಟು ಹೋಗಬೇಡವೆಂದು ಹೇಳುವ ಅಧಿಕಾರ ಕೂಡ ಗೌಡರಗೆ ಇರಲಿಲ್ಲ ಎಕೆಂದರೆ ಈಗಾಗಲೆ ಎಲ್ಲ ಅಸ್ತಿಯನ್ನ ಗೌಡರ ಮುದ್ದಿನ ಹೆಂಡ್ತಿ ತನ್ನ ಹೆಸರಿಗೆ ಬರೆದಿಟ್ಟಿದ್ದಳು...


ರಾಮು ಮತ್ತು ಲಕ್ಕಿ ಮನೆ ಬಿಟ್ಟು ಕರ್ನಾಟಕದ ಬೊಡರು ಆದ ಮಹದೇಶ್ವರ ಬೆಟ್ಟದಲ್ಲಿ ತಮ್ಮ ನೆಲೆ ಬಿಟ್ಟರು. ಮುಂದಿನ ಜೀವನ ಮಣ್ಣಿನ ಮಗನಾಗಿ ಬೇಸಾಯ ಮಾಡಿ ರೈತರ ಸೇವೆ ಮಾಡ ಬೇಕಂತೆ ಇತ್ತು ಇವರ ಕನಸು...


ಪರ ಊರಲ್ಲಿರು ಬಾಬಿಗೆ ಇದ್ಯಾವ ವಿಷಯವು ಗೊತ್ತಿರಲಿಲ್ಲಿ. ತನ್ನ ಎಮ್. ಬಿ. ಯೆ ಮುಗಿಸಿ ಬಂದ ಬಾಬಿಗೆ ಮನೆಮುಟ್ಟಿದಾಗ ಮನೆಯಲ್ಲಿ ಶ್ಮಾಶನ ಮೌನ, ಅಣ್ಣನ ಮದುವೆಗೆ ಪರಿಕ್ಷೇ ಇದ್ದ ಕಾರಣ ಬಾಬಿ ಬಂದಿರಲಿಲ್ಲ, ಅಣ್ಣ ಅತ್ತಿಗೆಯನ್ನ ನೋಡಲು ಬಂದ ಬಾಬಿಗೆ ಮನೆಯಲ್ಲಿ ನಡೆದ ಎಲ್ಲ ವಿಶ್ಯವನ್ನ ತಿಳಿದಾಗ ದುಃಖವಾಯಿತು. ಬಾಬಿ ಕೂಡ ಮನೆ ಬಿಟ್ಟು ಹೋಗುವುದು ಎಂದು ನಿರ್ಧರಿಸಿದನು. ಆದೆ ಸಂಧರ್ಭದಲ್ಲಿ ಗೌಡರಿಗೆ ಹ್ರದಯ ಅಘಾತವಾಗಿ ಆಸ್ಪತ್ರೆ ಸೇರಿದ್ದರು...


ಹುಟ್ಟೊ ಸುರ್ಯ ಮುಳಗಲೆ ಬೇಕೆಂಬುವುದು ಲೋಕ ನಿಯಮ ಹಾಗೆಯೆ ಗೌಡರ ಆತ್ಮ ಶರಿರ ಬಿಟ್ಟು ಪರಮಾತ್ಮನಲ್ಲಿ ಸೇರಿ ಕೊಂಡಿತು. ಮನೆಯ ಜಾವಾಬ್ದಾರಿಯೆಲ್ಲ ಬಾಬಿಯ ಮೇಲೆ ಬಿದ್ದಿತ್ತು. ಅಣ್ಣನ ನೆರಳಿನಲ್ಲಿ ಬದುಕಬೇಕೆಂಬುದು ಬಾಬಿಯ ಆಸೆ. ತನ್ನ ತಂದೆಯ ಕನಸ್ಸು ನನಸು ಮಾಡಲು ತನ್ನ ಅಣ್ಣನಿಗಿಂತ ಈ ಪ್ರಪಂಚದಲ್ಲಿ ಬೇರೆ ಯಾರು ಇಲ್ಲ ವೆಂಬ ಅವನ ನಂಬಿಕೆ. ಅಂತು ಇಂತು ಅಣ್ಣ ಮತ್ತು ಅತ್ತಿಗೆಯನ್ನ ಮನೆಗೆ ಹಿಂದಿರುಗಿ ಕರೆದು ಕೋಂಡು ಬರಲು ನಿರ್ಧರಿಸಿ ಬಾಬಿ ಮಹದೇಶ್ವರ ಬೆಟ್ಟಕ್ಕೆ ಹೋರಟನು...


ಮಹದೇಶ್ವರ ಬೆಟ್ಟ ದಲ್ಲಿ ಅಣ್ಣ ರಾಮುವಿನನ್ನು ಬೇಟಿಯಾದ ನಂತರ ಬಾಬಿ ಅಣ್ಣನನ್ನು ಮನೆಬರಲು ಹೇಳಿದನು. ರಾಮು ಮಹದೇಶ್ವರ ಬೆಟ್ಟದಲ್ಲಿ ಬಂದು ನೆಲೆ ನಿಲ್ಲಲು ಕಾರಣ ತನ್ನ ತಾಯಿ ಮಾಡಿದ ಮೋಸ ಅಲ್ಲ ಮತ್ತು ಅದರ ಉದ್ದೇಶ ಬೇರೆನೆ ಇದೆ ಎಂದು ತಿಳಿಸಿದನು. ತನ್ನ ಕರ್ತವ್ಯದ ಕರೆ ಮುಗಿದ ನಂತರ ಮನೆಗೆ ಹಿಂದಿರುಗ ಬೆಕೇಂದು ಬಾಬಿ ಅಣ್ಣನಲ್ಲಿ ಮಾತು ತೆಕೊಂಡು ಮತ್ತು ಅಣ್ಣ ಮನೆಗೆ ಹಿಂದುರುವರೆಗು ಅಣ್ಣನ ಹೆಸರಿನಲ್ಲಿಯೆ ತನ್ನ ತಂದೆಯ ಎಲ್ಲ ಬಿಸಿನೆಸ್ ನೋಡಿ ಕೊಳ್ಳುವುದಾಗಿ ತಿಳಿಸಿ ಬಾಬಿ ಮನೆಗೆ ಹಿಂದಿರುಗಿದನು...


ಮಹದೇಶ್ವರ ಬೆಟ್ಟ ಹಲಾವರು ಕ್ರಷಿಕರ ಜನ್ಮಭೂಮಿ.. ಅಲ್ಲಿಯ ಜನರ ಬೇಸಾಯಕ್ಕೆ ಬೇಕಾದ ಬೀಜ ಮತ್ತು ಗೊಬ್ಬರವನ್ನ ಮಾರುತಿದ್ದವನು ರಾವಣಾಕರನ್. ಅವಿಧ್ಯಾವಂತ ಜನರನ್ನು ಮೋಸ ಮಾಡಿ ಜೀವನ ನಡೆಸುವುದು ರಾವಣಾಕರನ್ ಅಂತ ರಕ್ಷಸರ ಕೆಲಸ. ತಿನ್ನುವ ಅನ್ನ ಬೆಳೆಸುವ ರೈತರಲ್ಲಿ ಗಾಂಜಾ ಬೆಳೆಸಲು ಮಾರ್ಗ ದರ್ಶನ ನಿಡಿ ಜನರ ಜೀವನವನ್ನ ಹಾಳು ಮಾಡುವಂತ ಕೆಲಸ ಮಾಡುತಿದ್ದ ರಾವಣಾಕರನ್ನ ತಡೆಯವರು ಯಾರು ಇರಲಿಲ್ಲ. ಅದ್ರೆ ಯಾವಗ ರಾಮು ಕ್ರಷಿ ಕೆಲಸ್ಕೆ ಇಳಿದನೋ ಅವತ್ತೆ ಎಲ್ಲ ರೈತರಿಗೆ ಅಧುನಿಕ ರೀತಿಯಲ್ಲಿ ಬೇಸಾಯ ಮಾಡಲು ತಿಳಿಸಿಕೋಡಲು ಶುರುಮಾಡಿದ. ರೈತರ ಸಂಘ ಮಾಡಿದ ಮತ್ತು ರೈತರಿಗೆ ತನ್ನ ಮತ್ತು ಇನೊಬ್ಬರ ಬಗ್ಗೆ ಸ್ವತಂತ್ರವಾಗಿ ಯೋಚಿಸುವಷ್ಟು ಅವರಿಗೆ ಸಾಮನ್ಯ ತಿಳುವಳಿಕೆಯನ್ನ ಕಲಿಸಿ ಕೊಟ್ಟ. ದಿನದಿಂದ ದಿನಕ್ಕೆ ರಾವಣಾಕರನ್ ನ ಬಿಸಿನೆಸ್ ಕಮ್ಮಿಯಾಗ ಶುರುವಾದ ಕಾರಣ ಸರ್ವೆಗಂತ ರಾವಣಾಕರನ್ ನ ತಂಗಿ ಶುಭ ಅಲ್ಲಿಗೆ ಬಂದಳು...


ರಾಮು ಮತ್ತು ಲಕ್ಕಿ ರೈತರಿಗಾಗಿ ಒಂದು ಸಭೆಯನ್ನ ಎರ್ಪಡಿಸಿದ್ದರು ಮತ್ತು ಆದರಲ್ಲಿ ಎಲ್ಲ ರೈತರನ್ನ ಮತ್ತು ರೈತರ ಸಾಹಾಯಕ್ಕೆ ಬೇಕಾದ ಸರಕಾರಿ ಅಧಿಕಾರಿಗಳನ್ನ, ಬೆಸಾಯಕ್ಕೆ ಸಾಹಾಯವಾಗಿರುವ ಮದ್ಯವರ್ತಿಗಳನ್ನ ಮತ್ತು ಕ್ರಷಿಗೆ ಸಂಬಂದಪಟ್ಟ ಎಲ್ಲ ರೀತಿಯ ಜನರನ್ನ ಕರಿದಿದ್ದರು. ಅಲ್ಲಿಗೆ ಶುಭಳು ಕೂಡ ಬಂದಿದ್ದಳು. ಸಬೆಯಲ್ಲಿ ಬೀಜ ಮತ್ತು ಗೊಬ್ಬರದ ವಿಶಯ ಬಗ್ಗೆ ಚರ್ಚೆ ಮಾಡುತ್ತಿರುವಾಗ ಶುಭ ತನ್ನ ಕಂಪೆನಿಯ ಬಗ್ಗೆ ಸ್ವಲ್ಪ ಹೇಚ್ಚಾಗಿಯೆ ಮಾತಾಡಿದಳು. ಆದ್ರೆ ಅಲ್ಲಿ ರಾಮುವಿನ ತಮ್ಮ ಲಕ್ಕಿ ಗೊಬ್ಬರವನ್ನ ಪರಿಕ್ಷೆ ಮಾಡಿಸಿ ಅದರ ಕಳಪೆ ಗುಣಮಟ್ಟ ಅಂತ ಸಾಬಿತಾಗಿರುವ ರಿಪೋರ್ಟು ತಂದಿದ್ದ. ಯಾವಗ ಸಭೆಯಲ್ಲಿ ಲಕ್ಕಿ ಇ ರಿಪೋರ್ಟನ್ನ ಸಬೆಯ ಮುಂದಿಟ್ಟನೊ ಆಗ ರೈತರೆಲ್ಲ ಶುಭನೊಟ್ಟಿಗೆ ಬಂದಿದ್ದ ಇಬ್ಬರು ಸಹಚಾರನನ್ನು ಸಭೆಯಿಂದ ಓಡಿಸಿ ಬಿಟ್ಟರು. ತನ್ನ ಕಂಪೆನಿಯ ಬಗ್ಗೆ ಸ್ವಲ್ಪ ಹೇಚ್ಚಾಗಿಯೆ ಹೇಳಿದ ಶುಭನ ಎರಡು ಕೈಯನ್ನ ರೈತರು ಕತ್ತರಿಸಿದಂತೆಯಾಯಿತು...


ಶುಭನಿಗೆ ಇದೊಂದು ದೊಡ್ಡ ಅವಮಾನವೆ ಹಾಗಿತ್ತು. ತನ್ನ ಕಂಪೆನಿಯ ವಿರುದ್ದ ರೈತರನ್ನ ಎತಿಕಟ್ಟುವ ರಾಮು ಮತ್ತು ಲಕ್ಕಿಯ ಮೇಲೆ ಪ್ರತಿಕಾರ ತಿರಿಸಲು ಶುಭ ಅಣ್ಣನಲ್ಲಿ ಇಲ್ಲಸಲ್ಲದನ್ನ ಹೇಳಿದಳು. ಶುಭ ಅಣ್ಣನ ಮುದ್ದು ತಂಗಿ, ತನ್ನ ತಂಗಿಗೆ ಅವಮಾನ ಮಾಡಿದ ರಾಮಿವಿನ ಮೇಲೆ ಪ್ರತಿಕಾರ ತಿರಸಲು ರಾವಣಾಕರನ್ ರಾಮುವಿನ ಹೆಂಡ್ತಿನ ಕಿಡ್ನಾಪ್ ಮಾಡಲು ಪ್ಲಾನ್ ಹಾಕಿದ...


ಒಂದು ದಿನ ರಾಮು ಮತ್ತು ಲಕ್ಕಿ ಕೆಲಸಕ್ಕೆ ಹೋದಾಗ ರಾವಣಾಕರನ್ ಸ್ಟೀಲ್ ಪಾತ್ರೆ ಮಾರುವವನ ವೆಶದಲ್ಲಿ ರಾಮುವಿನ ಮನೆಯ ಹತ್ತಿರ ಬಂದ.

ರಾವಣಾಕರನ್ " ಹಳೆ ಬಟ್ಟೆ ಕೊಟ್ಟು ಹೊಸ ಪಾತ್ರೆ ತೆಕೊಳ್ಳಿ, ಹಳೆ ಬಟ್ಟೆ ಕೊಟ್ಟು ಹೋಸ ಪಾತ್ರೆ ತೆಕೊಳ್ಳಿ " ಅಂತ ಬೊಬ್ಬಿಡತೊಡಗಿದ...

ಗೀತ ಮನೆಯ ಕಿಡಿಕಿಯಿಂದ ರಾವಣಾಕರನ್ ನಲ್ಲಿ ಕೇಳಿದಳು " ಅಣ್ಣ, ಹೆಂಗಪ್ಪ ರೇಟು " " ಅಮ್ಮವರೆ ಒಮ್ಮೆ ಪಾತ್ರೆ ನೋಡಿ ಮತ್ತೆ ರೇಟಿನ ಬಗ್ಗೆ ಮಾತಾಡುವ "

" ಅಣ್ಣ... ನನ್ನ ಗಂಡ ಮತ್ತು ತಮ್ಮ ಲಕ್ಕಿ ಮನೆಯ ಹೋರಗಡೆಯಿಂದ ಬೀಗ ಹಾಕಿ, ಬೀಗವನ್ನ ಹೀಡಿದು ಕೋಂಡು ಹೋಗಿದ್ದರೆ "

ಮನೆಯ ಬೀಗ ಮುರಿಯುದು ಅಷ್ಟು ಸುಲಭದ ಕೆಲಸವಲ್ಲ ಅಂತ ರಾವಣಾಕರನ್ ಗೆ ಗೊತ್ತಿತ್ತು ಅದಕ್ಕೆ ಅವನಂದ " ಅಮ್ಮವರ‍ೆ ಹಾಗದರೆ ನೀವು ಸುಮ್ನೆ ನಮ್ಮ ಟೈಮ್ ಹಾಳು ಮಾಡುತ್ತಿದ್ದರ "

" ಇಲ್ಲ ಅಣ್ಣ ಒಂದು ನಿಮಿಷ " ಹಳೆ ಬಟ್ಟೆ ಕೊಟ್ಟು ಹೋಸ ಪಾತ್ರೆ ತೆಕೊಳ್ಳಿ ಸ್ಕಿಮ್ ಗೆ ಮನಸೊಲದ ಯಾವ ಹುಡುಗಿಯರಿಲ್ಲ, ಗೀತ ಮನೆಯ ಹಿಂಬಾಗಿಲಿನಿಂದ ಹೋರಕ್ಕೆ ಬಂದಳು...

ಗೀತ ಮನೆಯಿಂದ ಹೋರಬಂದದೆ ತಡ ರಾವಣಾಕರನ್ ಗೀತಾಳನ್ನು ಬಲವಂತವಾಗಿ ಎತ್ತಿಕೊಂಡು ತನ್ನ ಕಾರಿನಲ್ಲಿ ಹಾಕಿದ..


ಜಾಟಾಕ ಬಂಡಿ ಓಡಿಸುತಿದ್ದ ರಾಮುವಿನ ಗೆಳೆಯ ಜಕಣ್ಣ ದಾರಿಯಲ್ಲಿ ಹೋಗುತಿದ್ದ ರಾವಣಾಕರನ್ ನ ಕಾರಿನಲ್ಲಿ ಗೀತಾ ಬೊಬ್ಬಿಡುದನ್ನ ನೋಡಿದ. ಕಾರನ್ನ ಹಿಂಬಾಲಿಸಿ ಜಕ್ಕಣ್ಣ ಕಾರಿನ ಮುಂದೆ ತನ್ನ ಬಂಡಿಯನ್ನ ತಂದು ನಿಲ್ಲಿಸಿದ. ರಾವಣಾಕರನ್ ತನ್ನ ಕಾರಿನ ಚಕ್ರದಡಿಗೆ ಜಕ್ಕಣ್ಣನನ್ನು ಹಾಕಿ ಕಾರುನ್ನ ಮುಂದೆ ಓಡಿಸಿದ...


ಸಂಜೆ ಹೋತ್ತು ರಾಮು ಮನೆಗೆ ಬಂದಾಗ ಮನೆಯಲ್ಲಿ ಯಾರು ಇಲ್ಲದಿರುವುದ್ದನ್ನ ನೋಡಿ ಗೀತಳನ್ನ ಹುಡುಕ ಶುರುಮಾಡಿದ. ಅಷ್ಟು ಹೋತ್ತಿಗೆ ಆಸ್ಪತ್ರೆಯಲ್ಲಿದ್ದ ಜಕ್ಕಣ್ಣನ್ನಿಂದ ಗೀತಳನ್ನು ರಾವಣಾಕರನ್ ಕಿಡ್ನಾಪ್ ಮಾಡಿದ ವಿಶ್ಯ ರಾಮುವಿಗೆ ತಿಳಿಯಿತು...


ರಾಮು ಮತ್ತು ಲಕ್ಕಿ ರಾವಣಾಕರನ ಎಲ್ಲ ಅಡ್ಡೆಯಲ್ಲಿ ಗೀತಳನ್ನ ಹುಡುಕಲು ಶುರುಮಾಡಿದರು. ಹಾಗೆ ಹುಡುಕುವ ಸಂದರ್ಭದಲ್ಲಿ ರಾಮುವಿನಿಗೆ ಶ್ರೀ ಮರುತಿ ಜಿಮ್ ಮಾಲಿಕನಾದ ಅಂಜನೇಯಪ್ಪನ ಬೇಟಿಯಾಯಿತು. ಈ ಹಿಂದೆ ಅಂಜನೇಯಪ್ಪನ ಇಬ್ಬರು ಅಣ್ಣಂದಿರ ಜಾಗದ ವಿಷಯದ ಗಾಲಾಟೆಯಲ್ಲಿ ರಾಮು ಅಂಜನೇಯಪ್ಪನಿಗೆ ಸಹಾಯ ಮಾಡಿದ್ದನು, ಅವತಿನಿಂದ ಅಂಜನೇಯಪ್ಪನಿಗೆ ರಾಮು ಒಬ್ಬ ರಿಯಾಲ್ ಹಿರೊ ತರ ಅಗಿದ್ದ. ರಾಮು ಕೂಡ ಪೋಲಿಸ್ ಅಧಿಕಾರಿಯಾಗಿರುವಾಗ ಒಬ್ಬ ರಿಯಲ್ ಹೀರೊ ತರನೆ ಇದ್ದ. ಅಂಜನೇಯಪ್ಪನ ಬಗ್ಗೆ ಹೇಳಬೇಕಾದರ ಅವನೊಬ್ಬ ಬ್ರಹ್ಮಚಾರಿ ಹುಡುಗ ಮತ್ತು ಒಬ್ಬ ಒಳ್ಳೆ ಸಮಾಜ ಸೇವಕ. ಅಂಜನೇಯಪ್ಪ ರಾಮುವಿಗೆ ಗೀತಾಳನ್ನು ಹುಡುಕಲು ಸಹಾಯ ಮಾಡುವುದಾಗಿ ತಿಳಿಸಿದನು. ಅಂಜನೇಯಪ್ಪ ತನ್ನ ಜಿಮ್ಮಿನ ಸದಸ್ಯರನೆಲ್ಲ ಒಂದೊಂದು ಭಾಗವನ್ನಾಗಿ ಮಾಡಿ ರಾವಣಾಕರನ್ ನ ಅಡ್ದೆ ಇರುವ ಜಾಗಕ್ಕೆ ಕಳುಹಿಸಿದನು. ಅಲ್ಲಿಂದ ಬಂದ ಮಾಹಿತಿ ಪ್ರಾಕಾರ ಗೀತಳನ್ನು ರಾವಣಾಕರನ್ ಶ್ರೀ ಲಂಕೆಗೆ ಕರೆದು ಕೊಂಡು ಹೋಗಿದ್ದನೆಂದು...


ಅದ್ರೆ ಶ್ರೀ ಲಂಕೆಗೆ ಹೋಗುವುದು ಅಷ್ಟು ಸುಲಭದ ಕೆಲಸವಲ್ಲ ಎಕೆಂದರೆ ಮುಕ್ಕಾಲು ವಾಸಿಯಷ್ಟು ಲಂಕೆಯ ಆಡಳಿತ ರಾವಣಾಕರನ್ ನ ಕೈಯಲ್ಲಿತು.. ಇನ್ನು ಕಾಲು ವಾಸಿಯಷ್ಟು ಲಂಕೆಯನ್ನ ರಾವಣಾಕರನ್ ತಮ್ಮ ಭೂಶನಾಕಾರನ್ ನೋಡಿಕೊಳ್ಳುತಿದ್ದ. ಅವನು ಸಂಪುರ್ಣವಾಗಿಯು ಅಣ್ಣನ ವಿರುದ್ದವಾಗಿದ್ದ. ಅವನ ದಾರಿ ಸತ್ಯ, ನಾಯ್ಯ, ನೀತಿ ಮತ್ತು ಧರ್ಮದಾಗಿತ್ತು...


ಅಂಜನೇಯಪ್ಪ ತಾನೊಬ್ಬನೆ ಭಾರತದಿಂದ ಲಂಕೆಗೆ ಜಲಮಾರ್ಗವಾಗಿ ಹೊಗುವ ಹಡಗಿನಲ್ಲಿ ಲಂಕೆಗೆ ಬಂದ. ಲಂಕದಲ್ಲಿ ಮೊದಲು ಹೋಗಿ ಭೂಶನಾಕಾರನ್ ನ ಪರಿಚಯ ಮಾಡಿಕೊಂಡ ಮತ್ತೆ ತಾನು ಲಂಕೆಗೆ ಬಂದ ಕಾರಣ ತಿಳಿಸಿದ. ಭೂಶನಾಕಾರನ್ ಗೆ ಬೇಕಾದದ್ದು ತನ್ನ ರಾಜ್ಯವನ್ನ ಶಾಂತಿಯನ್ನಗಿ ಮಾಡುವುದು ಮತ್ತು ಅದಕ್ಕಾಗಿ ಭಾರತ ಸರಕಾರ ಎಲ್ಲ ರೀತಿಯ ಸಹಾಯಕ್ಕೆ ಸಿದ್ದರಿದ್ದರೆ ಎಂದು ಅಂಜನೇಯಪ್ಪ ತಿಳಿಸಿದ. ಓಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದು ನಾಶವಾಗಲೇ ಬೇಕು" ಎಂಬ ಅಂಜನೇಯಪ್ಪನವರ ಮಾತು ಭೂಶನಾಕಾರನ್ ನ ಮನಸ್ಸಿನ ಒಳ ಹೊಕ್ಕಿತ್ತು. ಅವನು ಅಂಜನೇಯಪ್ಪನಿಗೆ ಸಾಹಾಯ ಮಾಡುವುದಕ್ಕೆ ಒಪ್ಪಿಕೊಂಡ...


ರಾವಣಾಕರನ್ ಗೀತಾಳನ್ನು ಲಂಕೆಗೆ ಕರೆದುಕೊಂಡು ಬಂದ ನಂತರ ಅವಳ ಸೌಂದರ್ಯಕ್ಕೆ ಮನಸೊತಿದ್ದ.. ಅವಳನ್ನು ಮದುವೆ ಮಾಡಿಕೊಳ್ಳ ಬೇಕೆಂಬ ಅಸೆ ಅವನ ಮನಸ್ಸಿನಲ್ಲಿ ಹುಟ್ಟಿತ್ತು. ರಾವಣಾಕರನ್ ಗೆ ಮೊದಲೆ ಮದುವೆಯಾಗಿ ಒಬ್ಬ ಮಗನಿದ್ದ, ಅದ್ರೆ "ದುಡ್ಡಿದ್ದವನಿಗೆ ಸಾವಿರ ಹೆಂಡ್ತಿಯ ಆಸೆ" ಎಂಬಂತೆ ರಾವಣಾಕರನ್ ಗೀತಳನ್ನು ಮದುವೆಗೆ ಒತ್ತಯ ಮಾಡಲು ಶುರುಮಾಡಿದ..


ಅಂಜನೇಯಪ್ಪ ಮೊದಲು ಭೂಶನಾಕಾರನ್ ನ ಸೈನದೊಡನೆ ಸೇರಿ ರಾವಣಾಕಾರನ ಮನೆಗೆ ಒಳ ಹೊಕ್ಕಿ ಗೀತಳನ್ನ ಎಲ್ಲಿ ಬಚ್ಚಿಟ್ಟಿದ್ದರೆಂದು ಹುಡುಕ ತೊಡಗಿದ. ಮನೆಯ ಮುಲೆಯಲ್ಲಿರುವ ಅಡುಗೆ ಕೋಣೆಯಲ್ಲಿ ರಾವಣಾಕಾರನ್ ಗೀತಳನ್ನ ಕಟ್ಟಿ ಹಾಕಿದ್ದ. ಅಂಜನೇಯಪ್ಪ ಗೀತಳಲ್ಲಿ ಎಲ್ಲ ವಿಶ್ಯ ತಿಳಿಸಿ ಗೀತಳನ್ನು ರಾಮುವಿನತ್ತಿರ ತನ್ನ ಮೊಬೈಲ್ ಫೊನಿನ ಮುಲಕ ಮಾತಾಡಿಸಿದ. ಅವಳನ್ನ ಅಲ್ಲಿಂದ ಕರೆದು ಕೊಂಡು ಹೋಗುವ ಹೋತ್ತಿಗೆ ಸಾರಿಯಾಗಿ ಅಂಜನೇಯಪ್ಪ ಮನೆಯ ಕೆಲಸದವರ ಕೈ ಗೆ ಸಿಕ್ಕಿ ಬಿದ್ದ...


ರಾವಣಾಕರನ್ ಗೆ ಅಂಜನೇಯಪ್ಪನ ಬಗ್ಗೆ ತಿಳಿದಾಗ ಅಂಜನೇಯಪ್ಪನ ಮೈಗೆ ಬೆಂಕಿ ಕೊಟ್ಟು ಅವನನ್ನು ಜೀವಂತ ಸುಟ್ಟು ಹಾಕಲು ತನ್ನ ಸೆಕುರಿಟಿ ಗಾರ್ಡ್ ನಲ್ಲಿ ಹೇಳಿದ. ಅಂಜನೇಯಪ್ಪನದು ಜಿಮ್ ಬೊಡಿ ಐದಾರು ಜನರನ್ನು ಒಬ್ಬನೆ ನೋಡಿಕೊಳ್ಳುವಂತಹ ಜೀವ, ಅವ ಮನೆಯ ಕೆಲಸದವರ ಕೈಗೆ ಸಿಕ್ಕಿ ಬಿಳಲು ಕಾರಣ ಅ ಹೊತ್ತಿನಲ್ಲಿ ಗೀತಳಿಗೆ ಎನು ಹಾಗಬರದೆಂಬ ಕಾರಣದಿಂದ ಆದ್ರೆ ಯಾವಗ ಅಂಜನೇಯಪ್ಪನ ಮೈಗೆ ಬೆಂಕಿ ಹಚ್ಚ ಶುರುಮಾಡಿದರೊ ಅವಗ ಅಂಜನೇಯಪ್ಪ ಇದುವೆ ತಪ್ಪಿಸಲು ಸರಿಯಾದ ಸಮಯವೆಂದು ಓಡ ಶುರು ಮಾಡಿದ. ಮೈಯೆಲ್ಲ ಬೆಂಕಿ ಇದ್ದ ಕಾರಣ ಅವನನ್ನ ಯಾರು ಹಿಡಿಯಲು ಬರಲಿಲ್ಲ. ಅಂಜನೇಯಪ್ಪನ ಮೈಯೆಲ್ಲ ಸುಟ್ಟು ಹೋದರು ರಾವಣಾಕರನ್ ನ ಕೈಯಿಂದ ತಪ್ಪಿಸಿಕೊಂಡ...


ಅಷ್ಟು ಹೋತ್ತಿಗೆ ಸರಿಯಾಗಿ ಲಂಕ ಮತ್ತು ಭಾರತದ ಮಧ್ಯ ನಿರ್ಮಾಣವಾದ ಹೊಸ ಸೇತುವೆ ಮಾರ್ಗದ ಮೂಲಕ ರಾಮು, ಲಕ್ಕಿ ಮತ್ತು ಅಂಜನೇಯಪ್ಪನ ಇಡಿ ಜಿಮ್ ತಂಡ ಲಂಕೆಗೆ ಬಂದು ಮುಟ್ಟಿತ್ತು...


ಭೂಶನಾಕಾರನ್ ಮತ್ತು ರಾವಣಕರನ್ ಮದ್ಯ ಸಮರ ಶುರುವಾಯಿತು. ರಾಮು ಭಾರತ ಸರಕಾರದಿಂದ ಸೈನೆವನ್ನೆ ತರಿಸಿದ. ಭೂಶನಾಕಾರನ್ ನ ಸಮರ ಪ್ರಾರಂಭವಾದಾಗ ಸೆಣಸಾಡುವುದು ರಾವಣಾಕರನ್ ಗೆ ಅನಿವಾರ್ಯವಾಯಿತು. ಭೂಶನಾಕಾರನ್ ಸೇನೆ ರಾವಣಾಕರನ್ ನ ಬಹುತೇಕ ಪ್ರಂತ್ಯಗಳನ್ನು ಆಕ್ರಮಿಸಿತು. ಈಗ ಗೀತಳನ್ನು ಬಿಟ್ಟು ಕೊಡುವುದಕ್ಕೆ ರಾವಣಾಕರನ್ ಒಪ್ಪಿಕೊಂಡ ಮತ್ತು ಕದನವಿರಾಮವನ್ನ ಘೋಷಿದ ಆದ್ರೆ ಭೂಶನಾಕಾರನ್ ಅವನ ಮಾತನ್ನ ಉಲ್ಲಂಘಿಸಿ ಅವನ ರಾಜಾದಾನಿಯಾಗಿದ್ದ ಕಿಳಿನೋಚಿಯನ್ನು ಆಕ್ರಮಿಸಿ ಕೊಂಡ. ರಾವಣಾಕರನ್ ಅಲ್ಲಿಂದ ತಪ್ಪಿಸಿ ಕೊಂಡಿದ್ದ ಆದ್ರೆ ಅಲ್ಲಿ ಅವರಿಗೆ ಗೀತಾ ಸುರಕ್ಷಿತವಾಗಿ ಸಿಕ್ಕಿದಳು. ರಾವಣಾಕರನ್ ಪ್ರತಿಧಾಳಿಯಾಗಿ ಭೂಶನಾಕಾರನ್ ನ ಪ್ರಂತ್ಯದ ಅನೇಕ ಕಡೆ ಬಾಂಬ್ ದಾಳಿ ನಡೆಸಿದ. ಈ ದಾಳಿಯಲ್ಲಿ ಲಕ್ಕಿ ಗಾಯಗೊಂಡ ಆದ್ರೆ ಅಂಜನೇಯಪ್ಪನ ಸಹಾಯದಿಂದ ಅವ ಸಾವಿನಿಂದ ಪಾರಾದ. ಸುಮಾರು ೩೦ ದಿನಗಳಷ್ಟು ದಿನ ಕದನ ಮುಂದುವರೆಯಿತು. ಈ ಯುದ್ದದ್ದಲಿ ರಾವನಕಾರನ ಮಗ, ಇನೋಬ್ಬ ತಮ್ಮ, ತಂಗಿ ಮಡಿದರು.


ರಾವಣಾಕರನ್ ತನ್ನ ಸಹಚರರ ಜತೆ ಬೆಂಗಾವಲಿಗಿದ್ದ ವ್ಯಾನ್ ಮತ್ತು ಆಂಬ್ಯುಲೆನ್ನಾನಲ್ಲಿ ಯದ್ದವಲಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ. ರಾಮು ಮತ್ತು ಅಂಜನೇಯಪ್ಪ ಅವನಿದ್ದ ವಾಹನದ ಮೇಲೆ ದಾಳಿ ನಡೆಸಿದರು. ವಾಹನದಲ್ಲಿದ್ದ ಇನಿಬ್ಬರ ಜತೆ ರಾವಣಾಕರನ್ ಕೂಡ ಹತನಾದ...


ರಾವಣಾಕರನ್ ನ ಅಂತ್ಯದೊಂದಿಗೆ ಲಂಕ ಸಮರ ಮುಕ್ತಾಯವಾಯಿತು. ಭೂಶನಾಕಾರನ್ ಲಂಕೆಯ ದೊರೆಯಾದ ಮತ್ತು ರಾಮು, ಲಕ್ಕಿ ಮತ್ತು ಅಂಜನೆಯಪ್ಪನಲ್ಲಿ ಲಂಕೆಯಲ್ಲಿ ನಿಲ್ಲಲು ಹೇಳಿದನು. ಇದು ಲಕ್ಕಿಗು ಸರಿಯೆಂದು ಅನಿಸಿತು. ಆದ್ರೆ ರಾಮು ತಮ್ಮ ಲಕ್ಕಿಯಲ್ಲಿ ಹೇಳಿದ " ನಾನು ಹುಟ್ಟಿದ್ದು ದಕ್ಷಿನ ಕನ್ನಡದಲ್ಲಿ, ಬೆಳೆದದ್ದು ಮಂಗಳೂರಲ್ಲಿ, ನನ್ನ ತಾಯಿ ನಾಡು ನನಗೆ ಎಲ್ಲದಗಿಂತ ಶ್ರೇಷ್ಟ.... ನಾವು ಎನಾನ್ನ ಮರೆತರು ತಾಯಿ ಮತ್ತು ತಾಯ್ನಾಡನ್ನ ಮರೆಯಬರದು.. ನಮ್ಮ ಮಂಗಳೂರನ್ನ ಜನ ಸ್ವರ್ಗದ ಇನೊಂದು ಬಾಗ ಎಂದು ತಿಳಿದುಕೊಂಡಿದ್ದಾರೆ ಆದ್ರೆ ಈಗಾಗಲೆ ಸ್ವರ್ಗವನ್ನ ನರಕವನ್ನಾಗಿ ಮಾಡಲು ಹಲಾವರು ಜನ ಹುಟ್ಟಿದ್ದಾರೆ.. ಅಂತವರಿಂದ ನಮ್ಮ ನಾಡನ್ನು ಉಳಿಸಲು ನಾವು ನಮ್ಮ ತಾಯ್ನಾಡಿಗೆ ಹೋಗಲೆ ಬೇಕು.. ನಮ್ಮ ಸರ್ಕಾರದವರು ಕೊಟ್ಟ ಕೆಲಸ ಈಗಾಗಲೆ ಮುಗಿದು ಹೋಗಿದೆ... ಇನ್ನು ಕನ್ನಡ ನಾಡನ್ನ ಒಂದು ಮಾದರಿ ನಾಡನ್ನಾಗಿ ಮಾಡುವ ನನ್ನ ತಂದೆಯ ಕನಸ್ಸನ್ನ ಕಾರ್ಯರೂಪಕ್ಕೆ ತರಬೇಕಾಗಿದೆ ಮತ್ತು ಅದಲ್ಲದೆ ಇಷ್ಟವರೆಗೆ ಗೀತ ಅಂತ ನಮ್ಮ ಜೊತೆಗಿದ್ದ ಗೀತಾಳ ತಂಗಿ ನೀತಳನ್ನು ಮನೆಗೆ ಬಿಟ್ಟು ಬರಬೇಕು................... "

ಕನಸ್ಸು ನನಸಾಯಿತು...


ಹಲವು ವರ್ಷಗಳಿಂದ ಕಾಣುತ್ತ ಬಂದ ಕನಸ್ಸು ಇವತ್ತು ನನಸಾಯಿತು...
ಅವಳಿಗೆ ಮದುವೆಯಾಗುವ ಕನಸ್ಸು ಆದರೆ ನನಗೆ ಅವಳನ್ನ ಮದುಮಗಳನ್ನಾಗಿ ನೊಡುವ ಕನಸ್ಸು...
ಅಂತು ಇಂತು ಈ ಎಲ್ಲ ಕನಸ್ಸು ಇವತ್ತು ನನಸಾಯಿತು...

ಅವಳು ಮದುವೆ ಮುಂಚೆ ಯಾವಗಲು ನನ್ನ ಯಾವಗ ಮದುವೆಯಾಗುತ್ತಿರಿ ಅಂತ ನೂರು ಸಲ ಕೇಳಿದ್ದಳು...
ಅವಾಗ ನಾ ಎನಾದರು ಬೇರೆ ಮಾತಾಡಿ ಅವಳ ಮಾತು ಬದಾಲಾಯಿಸುತಿದ್ದೆ...
ಇನ್ನು ಮದುವೆಯಾದ ನಂತರ ಮಾತು ಬದಾಲಾಯಿಸುವ ಸಂದರ್ಭನೆ ಬರಕಿಲ್ಲ...
ಎಕೆಂದರೆ ಮದುವೆಯಾದ ನಂತರ ಹುಡಿಗಿಯರ ಜೀವಿಸುವ ರೀತಿಯೇ ಬದಲಾಗತ್ತೆ... (ಬದಾಲಾಗಬೇಕು)
ಮತ್ತೆ ಹುಡುಗರಿಗಂತು ಮೌನವೇ ಸಂಗಾತಿ...
ಮೊದಲ ಸಲ ನನ್ನವಳನ್ನ ಮಧುಮಗಳ ಡ್ರೆಸ್ ಮತ್ತು ಶ್ರಂಗಾರದಲ್ಲಿ ನೋಡಿದಾಗ ಯಾವುದೊ ದೇವತೆಯನ್ನ ನೋಡಿದಾಗೆ ಆಯಿತು....

ಅವಳ ಹಣೆಯ ಮೇಲೆ ಇದ್ದ ಕುಂಕುಮ (ಬಿಂದಿ) ನನ್ನ ನೊಡುವಾಗೆ ಇತ್ತು, ನನ್ನವಳು ಹಣೆಯ ಮೇಲೆ ಯಾವಗಲು ಕುಂಕುಮದ ಬಿಂದಿ ಇಟ್ಟವಳಲ್ಲ... ಇ ಕುಂಕುಮದ ಬಿಂದಿಗೆ ನಮ್ಮ ಸಂಪ್ರಾದಯದಲ್ಲಿ ತುಂಬ ಮಹತ್ವವಿದೆ.. ನಾ ಹಿಂದೆ ಎಲ್ಲೊ ಕೇಳಿದ್ದೆ ಕುಂಕುಮ ಇಟ್ಟ ಹೆಣ್ಣಿನ ಮುಖವನ್ನ ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಕುಂಕುಮದ ಮೇಲೆಯೇ ಕೇಂದ್ರೀಕ್ರತವಾಗತ್ತೆ ಮತ್ತು ಅವಳ ಬೇರೆ ಯಾವ ಸೌಂದರ್ಯವನ್ನು ನೋಡಿ ಚಂಚಲಚಿತ್ತರಾಗಲು ಅವಕಾಶವಿರುದಿಲ್ಲವಂತೆ... ಆದರೆ ನಾನಂತು ಪುರಾಣಗಳಲ್ಲಿ ಹೇಳಿದಂತೆ ಅವಳ ಎರುಡು ಹುಬ್ಬುಗಳ ನಡುವೆ (ಹಣೆಯ ಜಾಗ) ಇರುವ ಅಂಜನ ಚಕ್ರದಲ್ಲಿ ನಮ್ಮ ಆತ್ಮವು ಶರೀರವನ್ನ ಸೇರುವಂತೆ ಅವಳ ಕುಂಕುಮ ದಲ್ಲಿ ಸೇರಿಹೊಗಿದ್ದೆ... ನನ್ನವಳು ಅಂತು ಮದುವೆ ವಿಶಯದಲ್ಲಿ ತುಂಬನೆ ತಲೆಬಿಸಿ ಜಾಸ್ಥಿ ಮಾಡಿಕೊಂಡಿದ್ದಳು ಆದರೆ ಕುಂಕುಮವನ್ನ ಇಟ್ಟ ನಂತರ ಅದು ಕೂಡ ಕಮ್ಮಿಯಾಗಿರಬಹುದು ಎಕೆಂದರೆ ಕುಂಕುಮದಲ್ಲಿ ತಲೆನೋವಿಗೆ ಕಾರಣವಾದ ಹಣೆಯ ಎರಡು ಉಬ್ಬುಗಳ ನಡುವಿನ ಜಗದಲ್ಲಿ ಉಂಟಾಗುವ ಉಷ್ಣವನ್ನ ಶಮನ ಮಾಡುವ ಶಕ್ತಿ ಕೂಡ ಇದೆ ಅಂತ ನಾ ಕೇಳಿದ್ದೆ.

ನಿನ್ನೆ (ಮದುವೆ ಹಿಂದಿನ ದಿನ) ಮೂಗು ಚುಚ್ಚಿಸಿ ಕೊಳ್ಳುವಾಗ ಅವಳ ಮುಖದಲ್ಲಿದ್ದ ನೋವು ಇವತ್ತು ಮಾಯವಾಗಿತ್ತು... ನನ್ನವಳ ಮೂಗುತ್ತಿಯಂತು ಕನ್ಯಾಕುಮಾರಿ ದೇವಿಯ ಮೂಗುತ್ತಿಯಂತೆ ಇತ್ತು .. ಹಿರಿಯವರು ಹೇಳುವುದನ್ನ ಕೇಳಿದ್ದೆ ಮೂಗು ಚುಚ್ಚಿಸಿ ಕೊಳ್ಳುವುದರಿಂದ ಪ್ರಸವ ವೇದನೆಯು ಕಮ್ಮಿಯಾಗತ್ತೆ ಅಂತ ಅದರೆ ನನ್ನವಳಿಗಂತು ಮದುವೆಯಿಂದ ಜೀವನದಲ್ಲಿ ಬರುವ ಎಲ್ಲಾ ನೋವುಗಳು ಕಮ್ಮಿಯಾಗ ಬಹುದೆಂದು ನನ್ನ ನಂಬಿಕೆ......

ನಾ ಅವಳ ಹುಟ್ಟು ಹಬ್ಬಕ್ಕೆ ಉಡುಗರೆಯಾಗಿ ಕೊಟ್ಟ ಕಿವಿಯೋಲೆ ಯನ್ನೆ ಹಾಕಿದ್ದಳು.. ಅವಳ ಹುಟ್ಟು ಹಬ್ಬದ ದಿನದಂದು ತುಂಬ ಯೋಚಿಸಿದ್ದೆ ಎನನ್ನ ಉಡುಗರೆಯನ್ನಾಗಿ ಕೊಡುದು ಅಂತ ಮತ್ತೆ ಗೇಳೆಯನಿಂದ ತಿಳಿಯಿತು ಕಿವಿ ಚುಚ್ಚಿಸಿ ಕೊಳ್ಳುವುದು ಎಂದರೆ ಹಿಂದು ಸಾಪ್ರದಾಯದ ಪ್ರಕಾರ ಕಿವಿಯನ್ನ AUM ಅಂತ ಕರೆಯುತ್ತಾರೆ ಮತ್ತೆ ಅ AUM ಗೆ ಚುಕ್ಕೆ ಇಡುವುದು ಎಂದಾರ್ಥ.. ಆ ಚುಕ್ಕೆಯನ್ನ ನನ್ನ ಪ್ರೀತಿಯಿಂದ ತುಂಬಲು ನನ್ನವಳಿಗೆ ಕಿವಿಯೋಲೆಯನ್ನ ಉಡುಗರೆಯಾಗಿ ಕೊಟ್ಟಿದ್ದೆ... ನನಗು ಸಹ ಹುಟ್ಟಿದ ೧ ವರ್ಷದಲ್ಲಿ ಕಿವಿಚುಚ್ಚಿದ್ದಾರೆ, ಮಕ್ಕಳ ಕಿವಿ ಚುಚ್ಚುದರಿಂದ ಬುದ್ದಿಶಕ್ತಿ ಬೆಳವಣಿಗೆ ಹೇಚ್ಚಾಗತ್ತೆ ಅಂತ ಅಮ್ಮ ಯಾವಗಲು ಹೇಳುತಿದ್ದರು ಆದ್ರು ಎಷ್ಟು ಬುದ್ದಿ ಬೆಳೆದರು ಪ್ರೀತಿಗೆ ಬಿದ್ದ ನಂತರ ನನ್ನ ಬುದ್ದಿ ಸ್ವಲ್ಪ ಕಮ್ಮಿನೆ ಅದಂತೆ ಹಾಗಿದೆ....

ಇವತ್ತು ಅಂತು ನನ್ನವಳಿಗಂತು ನನ್ನ ಕಣ್ಣ ದ್ರಿಷ್ಟಿ ಬಿಳುವಂತೆ ಇತ್ತು.. ಆದ್ರೆ ನನ್ನಾವಳಂತು ನನಗಿಂತ ಹೇಚ್ಚು ಬುದ್ದಿವಂತಳು ಕಣ್ಣಿಗೆ ಕಾಡಿಗೆ ಮೊದಲೆ ಹಾಕಿದ್ದಳು. ಕಣ್ಣ ಸುತ್ತಲು ಕಾಡಿಗೆ ಹಾಕುವುದರಿಂದ ಕಣ್ಣಿನ ದ್ರಿಷ್ಟಿಯು ಹೆಚ್ಚಾಗುವುದು ಮತ್ತು ದುಷ್ಟ ಶಕ್ತಿಗಳ ವಕ್ರ ದ್ರಿಷ್ಟಿಯಿಂದ ಬಚಾವಗಬುಹುದೆಂದು ಅವಳಿಗೆ ಮೊದಲೆ ಗೊತಿತ್ತು......

ನನ್ನವಳ ತಲೆ ಮೇಲೆ ಇದ್ದ ಹೂವಿನ ಅಲಂಕಾರದಲ್ಲಿ ತಾಯಿ ಅಮ್ರತೇಶ್ವರಿ ದೇವಿಗೆ ಅರ್ಪಿಸಿದ ಹೂವು ಸಹ ಇತ್ತು.. ಹೂವನಂತು ಹೇಚ್ಚಾಗಿ ಎಲ್ಲರು ಅಲಂಕಾರಕ್ಕಾಗಿಯೆ ಇಟ್ಟುಕೊಳ್ಳುವುದು ಆದರೆ ನನ್ನವಳಂತು ಹೂವನ್ನ ದೇವರಿಗೆ ಅರ್ಪಿಸಿ ನಂತರ ಅ ಹೂವನ್ನ ಕಣ್ಣಿಗೆ ಒತ್ತಿ ಕೊಂಡು ತಲೆ ಮೇಲೆ ಇಟ್ಟು ಕೊಳ್ಳುತ್ತಿದ್ದಳು.. ದೇವರಿಗೆ ಅರ್ಪಿಸಿದ ಹೂವಲ್ಲಿ ದೇವರ ಪೊಸಿಟಿವ್ ಎನರ್ಜಿ ಹೂವನ್ನ ಸಂಸ್ಕರಿಸುತ್ತದೆ ಮತ್ತು ಅ ಪೊಸಿಟಿವ್ ಎನರ್ಜಿ ಹೂವಿನ ಮೂಲಕ ನಮ್ಮ ದೇಹಕ್ಕೆ ವರ್ಗಾವಣೆಯಾಗತ್ತೆ ಅಂತ ನನ್ನಾವಳ ನಂಬಿಕೆ.....

ಹುಡಿಗಿಯರ ಕೈ ಬಳೆ ನಾದಕ್ಕೆ ಸೋಲದ ಹುಡಗರಿಲ್ಲ ಅಂತ ಕೇಳಿದ್ದೆ ಆದ್ರೆ ನನಂತು ನನ್ನವಳ ಕೈ ಬಳೆ ನಾದಕ್ಕೆ ಯಾವಗನೊ ಸೊತು ಸುಣ್ಣವಾಗಿದ್ದೆ.. ಯಾವಗಲು ಒಂದು ಕೈಗೆ ಬಳೆ ಇನೋಂದು ಕೈಗೆ ವಾಚ್ ಕಟ್ಟುವ ನನ್ನವಳು ಇವತ್ತು ಎರಡು ಕೈಗೆ ಗಾಜಿನ ಬಳೆಗಳನ್ನು ಹಾಕಿದ್ದಳು ... ಬಳೆಗಳು ಗಂಡನ ಅದ್ರಷ್ಟದ ಸಂಕೇತ ಅನ್ನುತ್ತಾರೆ ನಮ್ಮ ದೆಶದಲ್ಲಿ, ಅದ್ರೆ ನನಂತು ಎಲ್ಲಾದರಲ್ಲಿ ನತದ್ರಷ್ಟ, ಇನ್ನು ಬಳೆಗಳು ನನ್ನ ಜೀವನದ ಅದ್ರಷ್ಟ ಯಾವಗ ಬದಲಾಯಿಸುತ್ತದೆ ಅಂತ ನೋಡಬೇಕು..........

ಅಮ್ಮನ ಹಳೆ ಸೀರೆಯಲ್ಲಿ ಚುಡಿದಾರನ್ನಾಗಿ ಮಾಡಿ ಧರಿಸುತಿದ್ದವಳು ಇವತ್ತು ಸೀರೆ ಉಟ್ಟಗ ಅಂತು ನಮ್ಮ ಮನೆಯ ದೇವರ ಕೋಣೆಯ ಫೊಟೊದಲ್ಲಿರುವ ಮಹಾಲಕ್ಷ್ಮೀ ತರನೇ ಕಾಣುತಿದ್ದಳು. ಸೀರೆಯನ್ನ ಭಾರತಿ ಸಂಸ್ಕ್ರತಿಯ ಸಂಕೇತ ಅನ್ನುತ್ತಾರೆ.. ನನ್ನಮ್ಮನ ಸೀರಯಂತು ನನಗೆ ಅಲ್ ಇನ್ ಒನ್ ಅಗಿತ್ತು.. ಅಂದರೆ ಸಾನ ಮಾಡಿ ತಲೆ ಒರಸಲು, ಉಟ ಮಾಡಿ ಕೈ ಒರ‍ೆಸಲು, ಅತ್ತಾಗ ಕಣ್ಣು ಒರೆಸಿ ಕೊಳ್ಳಳು, ಅಪ್ಪ ಬೈದಾಗ ಅಮ್ಮನ ಸೀರಯ ಸೆರಗಲ್ಲಿ ಅವಿತುಕೊಂಡು ಅಳಳು, ಚಳಿಯಾದಗ ಬೆಚ್ಚನೆ ಹೋದ್ದು ಕೊಳ್ಳಲು, ಕರೆಂಟು ಹೋದಾಗ ಅಮ್ಮನ ಮಡಿಲಲ್ಲಿ ಮಲಗಿ ಸೀರೆಯ ಸೆರಗಲ್ಲಿ ಗಾಳಿ ಬಿಸಿಸಿ ಕೊಳ್ಳಳು .. ಎಲ್ಲದಕ್ಕೊ...

ಇವತ್ತು ಅಂತು ನನ್ನವಳು ನಡೆದು ಕೊಂಡು ಬರುವಾಗ ನನ್ನವಳ ಕಾಲ್ಗೆಜ್ಜೆಯ ಶಬ್ದ ನನ್ನ ಹ್ರದಯ ಬಡಿತಕ್ಕೆ ತಾಳ ಹಾಕುವಂತೆ ಇತ್ತು ... ಹೇಗೆ ಹುಟ್ಟಿದ ಮಗು ನಡೆಯುದನ್ನ ಕಲಿಯುವಾಗ ಅದರ ಕಾಲಿಗೆ ಗೆಜ್ಜೆ ಹಾಕಿ ಮನೆಯವರೆಲ್ಲ ಅ ಗೆಜ್ಜೆ ಯ ಸದ್ದಿಗೆ ಸಂತೊಷವನ್ನ ಪಡೆಯುವ ಹಾಗೆ ನನ್ನವಳ ಕಾಲಲ್ಲಿರುವ ಗೆಜ್ಜೆ ಸದ್ದು ಕೇಳಿ ನಾನು ಕೂಡ ಖುಷಿ ಪಟ್ಟೆ..

ಈ ಹಿಂದೆ ನನ್ನವಳ ಮತ್ತು ನನ್ನ ಮನೆಯಲ್ಲಿ ನಮ್ಮಿಬ್ಬರ ಮದುವೆಗೆ ಒಪ್ಪಿಗೆ ಇಲ್ಲ ಅಂತ ಹೇಳಿದಾಗ ನಾ ನನ್ನವಳಲ್ಲಿ ಹೇಳಿದ್ದೆ ಎಲ್ಲರನ್ನ ಒಪ್ಪಿಸಿ ನಿನ್ನ ಮದುವೆಯಾಗುತ್ತೆನೆ, ನಿನ್ನ ಕಾಲಿಗೆ ಕಾಲುಂಗರ ತೊಡಿಸುವ ಒತ್ತಿನಲ್ಲಿ ಎಲ್ಲರ ಮುಖದಲ್ಲಿ ಸಂತೊಷ ಇರತ್ತೆ ... ಮತ್ತೆ ಅದಕ್ಕಾಗಿ ವರ್ಷದ ಹಿಂದೆನೆ ಬೆಳ್ಳಿ ಕಾಲುಂಗುರ ವನ್ನ ತೆಗೆದಿಟ್ಟು ಕೊಂಡಿದ್ದೆ......
ಈ ಹಿಂದೆ ಚಿನ್ನದ ಕಾಲುಂಗರಕ್ಕಾಗಿ ಉರು ಇಡಿ ಹುಡುಕಿದ್ದೆ ಆಗ ವಿಶ್ವಕರ್ಮರಿಂದ ತಿಳಿಯಿತು ನಮ್ಮಲ್ಲಿ ಸೋಂಟದ ಕಳಗೆ ಬಂಗಾರದ ತೊಡುಗೆಯನ್ನ ಹೆಚ್ಚಾಗಿ ಯಾರು ಧರಿಸುವುದಿಲ್ಲ ಅಂತ, ಎಕೆಂದರೆ ಬಂಗಾರವನ್ನ ನಾವು ಲಕ್ಸ್ಮೀ ದೇವಿ ಅಂತ ಕರೆಯುತ್ತೆವೆ ಮತ್ತೆ ಕಾಲಿಗೆ ಚಿನ್ನವನ್ನ ಧರಿಸುವುಸು ನಾವು ಲಕ್ಶ್ಮೀ ದೇವಿಗೆ ಮಾಡುವ ಅಪಮಾನ ಅಂತ .......

ಇವತ್ತಿನಿಂದ ಇಬ್ಬರು ಹೋಸ ಜೀವನ ಪ್ರರಂಬಿಸುವುದು ಅಂತ ಅಂದು ಕೊಂಡಿದ್ದೆವು ಈ ಹೊಸ ಜೀವನದ ಹೆಜ್ಜೆ ನಮ್ಮಿಬ್ಬರ ಮನೆಯಲ್ಲಿರುವವರ ಮಖದಲ್ಲಿ ಸಂತೊಷ ತರುವಾಗೆ ಇತ್ತು...

ಇವತ್ತು ಅಂತು ನಾ ಕೂಡ ತುಂಬ ಖುಷಿಯಲ್ಲಿ ಇದ್ದೆನೆ...ಕಣ್ಣಲ್ಲಿ ಸಂತೋಷದ ಕಣ್ಣೀರು ಬೇರೆ ...
ಅಂತು ಇಂತು ನನ್ನವಳ ಮದುವೆಯಂತು ಅಯಿತು...
ಇವತ್ತು ಅಂತು ಓಡಾಡಿ ತುಂಬ ಸಾಕಾಗಿದೆ...
ಒಮ್ಮೆ ಶಾಶ್ವತವಾಗಿ ಮಲಗುವ ಅಂತ ಅಂದು ಬಿಟ್ಟಿದೆ...
ನನ್ನವಳಿಗೊಸ್ಕರ ತೆಗೆದಿಟ್ಟ ಬೆಳ್ಳಿ ಕಾಲುಂಗುರ ಈಗಲು ಸಹ ನನ್ನ ಜೇಬಿನಲ್ಲಿಯೇ ಹಾಗೆಯೆ ಉಳಿದಿದೆ...
ಅದ್ರೆ ಮನೆಯವರೆಲ್ಲ ಸಂತೋಷದ ಮುಂದೆ ಈ ನನ್ನ ಹ್ರದಯವು ಹಾಗೆ ಸುಮ್ಮನೆ ಮಲಗಿ ಬಿಟ್ಟಿದೆ ಬೇರೆ...
ನನ್ನವಳ ಮದುವೆ ಕನಸ್ಸು ಅಂತು ನನಸಾಗಿದೆ...
ಅದ್ರೆ ನನಗಂತು ಅವಳನ್ನ ಮದುವೆ ಯಾಗಲು ಇನ್ನೊಂದು ಜನ್ಮತನಕ ಕಾಯಬೇಕಾಗಿದೆ...