ಕನಸ್ಸು ನನಸಾಯಿತು...


ಹಲವು ವರ್ಷಗಳಿಂದ ಕಾಣುತ್ತ ಬಂದ ಕನಸ್ಸು ಇವತ್ತು ನನಸಾಯಿತು...
ಅವಳಿಗೆ ಮದುವೆಯಾಗುವ ಕನಸ್ಸು ಆದರೆ ನನಗೆ ಅವಳನ್ನ ಮದುಮಗಳನ್ನಾಗಿ ನೊಡುವ ಕನಸ್ಸು...
ಅಂತು ಇಂತು ಈ ಎಲ್ಲ ಕನಸ್ಸು ಇವತ್ತು ನನಸಾಯಿತು...

ಅವಳು ಮದುವೆ ಮುಂಚೆ ಯಾವಗಲು ನನ್ನ ಯಾವಗ ಮದುವೆಯಾಗುತ್ತಿರಿ ಅಂತ ನೂರು ಸಲ ಕೇಳಿದ್ದಳು...
ಅವಾಗ ನಾ ಎನಾದರು ಬೇರೆ ಮಾತಾಡಿ ಅವಳ ಮಾತು ಬದಾಲಾಯಿಸುತಿದ್ದೆ...
ಇನ್ನು ಮದುವೆಯಾದ ನಂತರ ಮಾತು ಬದಾಲಾಯಿಸುವ ಸಂದರ್ಭನೆ ಬರಕಿಲ್ಲ...
ಎಕೆಂದರೆ ಮದುವೆಯಾದ ನಂತರ ಹುಡಿಗಿಯರ ಜೀವಿಸುವ ರೀತಿಯೇ ಬದಲಾಗತ್ತೆ... (ಬದಾಲಾಗಬೇಕು)
ಮತ್ತೆ ಹುಡುಗರಿಗಂತು ಮೌನವೇ ಸಂಗಾತಿ...
ಮೊದಲ ಸಲ ನನ್ನವಳನ್ನ ಮಧುಮಗಳ ಡ್ರೆಸ್ ಮತ್ತು ಶ್ರಂಗಾರದಲ್ಲಿ ನೋಡಿದಾಗ ಯಾವುದೊ ದೇವತೆಯನ್ನ ನೋಡಿದಾಗೆ ಆಯಿತು....

ಅವಳ ಹಣೆಯ ಮೇಲೆ ಇದ್ದ ಕುಂಕುಮ (ಬಿಂದಿ) ನನ್ನ ನೊಡುವಾಗೆ ಇತ್ತು, ನನ್ನವಳು ಹಣೆಯ ಮೇಲೆ ಯಾವಗಲು ಕುಂಕುಮದ ಬಿಂದಿ ಇಟ್ಟವಳಲ್ಲ... ಇ ಕುಂಕುಮದ ಬಿಂದಿಗೆ ನಮ್ಮ ಸಂಪ್ರಾದಯದಲ್ಲಿ ತುಂಬ ಮಹತ್ವವಿದೆ.. ನಾ ಹಿಂದೆ ಎಲ್ಲೊ ಕೇಳಿದ್ದೆ ಕುಂಕುಮ ಇಟ್ಟ ಹೆಣ್ಣಿನ ಮುಖವನ್ನ ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಕುಂಕುಮದ ಮೇಲೆಯೇ ಕೇಂದ್ರೀಕ್ರತವಾಗತ್ತೆ ಮತ್ತು ಅವಳ ಬೇರೆ ಯಾವ ಸೌಂದರ್ಯವನ್ನು ನೋಡಿ ಚಂಚಲಚಿತ್ತರಾಗಲು ಅವಕಾಶವಿರುದಿಲ್ಲವಂತೆ... ಆದರೆ ನಾನಂತು ಪುರಾಣಗಳಲ್ಲಿ ಹೇಳಿದಂತೆ ಅವಳ ಎರುಡು ಹುಬ್ಬುಗಳ ನಡುವೆ (ಹಣೆಯ ಜಾಗ) ಇರುವ ಅಂಜನ ಚಕ್ರದಲ್ಲಿ ನಮ್ಮ ಆತ್ಮವು ಶರೀರವನ್ನ ಸೇರುವಂತೆ ಅವಳ ಕುಂಕುಮ ದಲ್ಲಿ ಸೇರಿಹೊಗಿದ್ದೆ... ನನ್ನವಳು ಅಂತು ಮದುವೆ ವಿಶಯದಲ್ಲಿ ತುಂಬನೆ ತಲೆಬಿಸಿ ಜಾಸ್ಥಿ ಮಾಡಿಕೊಂಡಿದ್ದಳು ಆದರೆ ಕುಂಕುಮವನ್ನ ಇಟ್ಟ ನಂತರ ಅದು ಕೂಡ ಕಮ್ಮಿಯಾಗಿರಬಹುದು ಎಕೆಂದರೆ ಕುಂಕುಮದಲ್ಲಿ ತಲೆನೋವಿಗೆ ಕಾರಣವಾದ ಹಣೆಯ ಎರಡು ಉಬ್ಬುಗಳ ನಡುವಿನ ಜಗದಲ್ಲಿ ಉಂಟಾಗುವ ಉಷ್ಣವನ್ನ ಶಮನ ಮಾಡುವ ಶಕ್ತಿ ಕೂಡ ಇದೆ ಅಂತ ನಾ ಕೇಳಿದ್ದೆ.

ನಿನ್ನೆ (ಮದುವೆ ಹಿಂದಿನ ದಿನ) ಮೂಗು ಚುಚ್ಚಿಸಿ ಕೊಳ್ಳುವಾಗ ಅವಳ ಮುಖದಲ್ಲಿದ್ದ ನೋವು ಇವತ್ತು ಮಾಯವಾಗಿತ್ತು... ನನ್ನವಳ ಮೂಗುತ್ತಿಯಂತು ಕನ್ಯಾಕುಮಾರಿ ದೇವಿಯ ಮೂಗುತ್ತಿಯಂತೆ ಇತ್ತು .. ಹಿರಿಯವರು ಹೇಳುವುದನ್ನ ಕೇಳಿದ್ದೆ ಮೂಗು ಚುಚ್ಚಿಸಿ ಕೊಳ್ಳುವುದರಿಂದ ಪ್ರಸವ ವೇದನೆಯು ಕಮ್ಮಿಯಾಗತ್ತೆ ಅಂತ ಅದರೆ ನನ್ನವಳಿಗಂತು ಮದುವೆಯಿಂದ ಜೀವನದಲ್ಲಿ ಬರುವ ಎಲ್ಲಾ ನೋವುಗಳು ಕಮ್ಮಿಯಾಗ ಬಹುದೆಂದು ನನ್ನ ನಂಬಿಕೆ......

ನಾ ಅವಳ ಹುಟ್ಟು ಹಬ್ಬಕ್ಕೆ ಉಡುಗರೆಯಾಗಿ ಕೊಟ್ಟ ಕಿವಿಯೋಲೆ ಯನ್ನೆ ಹಾಕಿದ್ದಳು.. ಅವಳ ಹುಟ್ಟು ಹಬ್ಬದ ದಿನದಂದು ತುಂಬ ಯೋಚಿಸಿದ್ದೆ ಎನನ್ನ ಉಡುಗರೆಯನ್ನಾಗಿ ಕೊಡುದು ಅಂತ ಮತ್ತೆ ಗೇಳೆಯನಿಂದ ತಿಳಿಯಿತು ಕಿವಿ ಚುಚ್ಚಿಸಿ ಕೊಳ್ಳುವುದು ಎಂದರೆ ಹಿಂದು ಸಾಪ್ರದಾಯದ ಪ್ರಕಾರ ಕಿವಿಯನ್ನ AUM ಅಂತ ಕರೆಯುತ್ತಾರೆ ಮತ್ತೆ ಅ AUM ಗೆ ಚುಕ್ಕೆ ಇಡುವುದು ಎಂದಾರ್ಥ.. ಆ ಚುಕ್ಕೆಯನ್ನ ನನ್ನ ಪ್ರೀತಿಯಿಂದ ತುಂಬಲು ನನ್ನವಳಿಗೆ ಕಿವಿಯೋಲೆಯನ್ನ ಉಡುಗರೆಯಾಗಿ ಕೊಟ್ಟಿದ್ದೆ... ನನಗು ಸಹ ಹುಟ್ಟಿದ ೧ ವರ್ಷದಲ್ಲಿ ಕಿವಿಚುಚ್ಚಿದ್ದಾರೆ, ಮಕ್ಕಳ ಕಿವಿ ಚುಚ್ಚುದರಿಂದ ಬುದ್ದಿಶಕ್ತಿ ಬೆಳವಣಿಗೆ ಹೇಚ್ಚಾಗತ್ತೆ ಅಂತ ಅಮ್ಮ ಯಾವಗಲು ಹೇಳುತಿದ್ದರು ಆದ್ರು ಎಷ್ಟು ಬುದ್ದಿ ಬೆಳೆದರು ಪ್ರೀತಿಗೆ ಬಿದ್ದ ನಂತರ ನನ್ನ ಬುದ್ದಿ ಸ್ವಲ್ಪ ಕಮ್ಮಿನೆ ಅದಂತೆ ಹಾಗಿದೆ....

ಇವತ್ತು ಅಂತು ನನ್ನವಳಿಗಂತು ನನ್ನ ಕಣ್ಣ ದ್ರಿಷ್ಟಿ ಬಿಳುವಂತೆ ಇತ್ತು.. ಆದ್ರೆ ನನ್ನಾವಳಂತು ನನಗಿಂತ ಹೇಚ್ಚು ಬುದ್ದಿವಂತಳು ಕಣ್ಣಿಗೆ ಕಾಡಿಗೆ ಮೊದಲೆ ಹಾಕಿದ್ದಳು. ಕಣ್ಣ ಸುತ್ತಲು ಕಾಡಿಗೆ ಹಾಕುವುದರಿಂದ ಕಣ್ಣಿನ ದ್ರಿಷ್ಟಿಯು ಹೆಚ್ಚಾಗುವುದು ಮತ್ತು ದುಷ್ಟ ಶಕ್ತಿಗಳ ವಕ್ರ ದ್ರಿಷ್ಟಿಯಿಂದ ಬಚಾವಗಬುಹುದೆಂದು ಅವಳಿಗೆ ಮೊದಲೆ ಗೊತಿತ್ತು......

ನನ್ನವಳ ತಲೆ ಮೇಲೆ ಇದ್ದ ಹೂವಿನ ಅಲಂಕಾರದಲ್ಲಿ ತಾಯಿ ಅಮ್ರತೇಶ್ವರಿ ದೇವಿಗೆ ಅರ್ಪಿಸಿದ ಹೂವು ಸಹ ಇತ್ತು.. ಹೂವನಂತು ಹೇಚ್ಚಾಗಿ ಎಲ್ಲರು ಅಲಂಕಾರಕ್ಕಾಗಿಯೆ ಇಟ್ಟುಕೊಳ್ಳುವುದು ಆದರೆ ನನ್ನವಳಂತು ಹೂವನ್ನ ದೇವರಿಗೆ ಅರ್ಪಿಸಿ ನಂತರ ಅ ಹೂವನ್ನ ಕಣ್ಣಿಗೆ ಒತ್ತಿ ಕೊಂಡು ತಲೆ ಮೇಲೆ ಇಟ್ಟು ಕೊಳ್ಳುತ್ತಿದ್ದಳು.. ದೇವರಿಗೆ ಅರ್ಪಿಸಿದ ಹೂವಲ್ಲಿ ದೇವರ ಪೊಸಿಟಿವ್ ಎನರ್ಜಿ ಹೂವನ್ನ ಸಂಸ್ಕರಿಸುತ್ತದೆ ಮತ್ತು ಅ ಪೊಸಿಟಿವ್ ಎನರ್ಜಿ ಹೂವಿನ ಮೂಲಕ ನಮ್ಮ ದೇಹಕ್ಕೆ ವರ್ಗಾವಣೆಯಾಗತ್ತೆ ಅಂತ ನನ್ನಾವಳ ನಂಬಿಕೆ.....

ಹುಡಿಗಿಯರ ಕೈ ಬಳೆ ನಾದಕ್ಕೆ ಸೋಲದ ಹುಡಗರಿಲ್ಲ ಅಂತ ಕೇಳಿದ್ದೆ ಆದ್ರೆ ನನಂತು ನನ್ನವಳ ಕೈ ಬಳೆ ನಾದಕ್ಕೆ ಯಾವಗನೊ ಸೊತು ಸುಣ್ಣವಾಗಿದ್ದೆ.. ಯಾವಗಲು ಒಂದು ಕೈಗೆ ಬಳೆ ಇನೋಂದು ಕೈಗೆ ವಾಚ್ ಕಟ್ಟುವ ನನ್ನವಳು ಇವತ್ತು ಎರಡು ಕೈಗೆ ಗಾಜಿನ ಬಳೆಗಳನ್ನು ಹಾಕಿದ್ದಳು ... ಬಳೆಗಳು ಗಂಡನ ಅದ್ರಷ್ಟದ ಸಂಕೇತ ಅನ್ನುತ್ತಾರೆ ನಮ್ಮ ದೆಶದಲ್ಲಿ, ಅದ್ರೆ ನನಂತು ಎಲ್ಲಾದರಲ್ಲಿ ನತದ್ರಷ್ಟ, ಇನ್ನು ಬಳೆಗಳು ನನ್ನ ಜೀವನದ ಅದ್ರಷ್ಟ ಯಾವಗ ಬದಲಾಯಿಸುತ್ತದೆ ಅಂತ ನೋಡಬೇಕು..........

ಅಮ್ಮನ ಹಳೆ ಸೀರೆಯಲ್ಲಿ ಚುಡಿದಾರನ್ನಾಗಿ ಮಾಡಿ ಧರಿಸುತಿದ್ದವಳು ಇವತ್ತು ಸೀರೆ ಉಟ್ಟಗ ಅಂತು ನಮ್ಮ ಮನೆಯ ದೇವರ ಕೋಣೆಯ ಫೊಟೊದಲ್ಲಿರುವ ಮಹಾಲಕ್ಷ್ಮೀ ತರನೇ ಕಾಣುತಿದ್ದಳು. ಸೀರೆಯನ್ನ ಭಾರತಿ ಸಂಸ್ಕ್ರತಿಯ ಸಂಕೇತ ಅನ್ನುತ್ತಾರೆ.. ನನ್ನಮ್ಮನ ಸೀರಯಂತು ನನಗೆ ಅಲ್ ಇನ್ ಒನ್ ಅಗಿತ್ತು.. ಅಂದರೆ ಸಾನ ಮಾಡಿ ತಲೆ ಒರಸಲು, ಉಟ ಮಾಡಿ ಕೈ ಒರ‍ೆಸಲು, ಅತ್ತಾಗ ಕಣ್ಣು ಒರೆಸಿ ಕೊಳ್ಳಳು, ಅಪ್ಪ ಬೈದಾಗ ಅಮ್ಮನ ಸೀರಯ ಸೆರಗಲ್ಲಿ ಅವಿತುಕೊಂಡು ಅಳಳು, ಚಳಿಯಾದಗ ಬೆಚ್ಚನೆ ಹೋದ್ದು ಕೊಳ್ಳಲು, ಕರೆಂಟು ಹೋದಾಗ ಅಮ್ಮನ ಮಡಿಲಲ್ಲಿ ಮಲಗಿ ಸೀರೆಯ ಸೆರಗಲ್ಲಿ ಗಾಳಿ ಬಿಸಿಸಿ ಕೊಳ್ಳಳು .. ಎಲ್ಲದಕ್ಕೊ...

ಇವತ್ತು ಅಂತು ನನ್ನವಳು ನಡೆದು ಕೊಂಡು ಬರುವಾಗ ನನ್ನವಳ ಕಾಲ್ಗೆಜ್ಜೆಯ ಶಬ್ದ ನನ್ನ ಹ್ರದಯ ಬಡಿತಕ್ಕೆ ತಾಳ ಹಾಕುವಂತೆ ಇತ್ತು ... ಹೇಗೆ ಹುಟ್ಟಿದ ಮಗು ನಡೆಯುದನ್ನ ಕಲಿಯುವಾಗ ಅದರ ಕಾಲಿಗೆ ಗೆಜ್ಜೆ ಹಾಕಿ ಮನೆಯವರೆಲ್ಲ ಅ ಗೆಜ್ಜೆ ಯ ಸದ್ದಿಗೆ ಸಂತೊಷವನ್ನ ಪಡೆಯುವ ಹಾಗೆ ನನ್ನವಳ ಕಾಲಲ್ಲಿರುವ ಗೆಜ್ಜೆ ಸದ್ದು ಕೇಳಿ ನಾನು ಕೂಡ ಖುಷಿ ಪಟ್ಟೆ..

ಈ ಹಿಂದೆ ನನ್ನವಳ ಮತ್ತು ನನ್ನ ಮನೆಯಲ್ಲಿ ನಮ್ಮಿಬ್ಬರ ಮದುವೆಗೆ ಒಪ್ಪಿಗೆ ಇಲ್ಲ ಅಂತ ಹೇಳಿದಾಗ ನಾ ನನ್ನವಳಲ್ಲಿ ಹೇಳಿದ್ದೆ ಎಲ್ಲರನ್ನ ಒಪ್ಪಿಸಿ ನಿನ್ನ ಮದುವೆಯಾಗುತ್ತೆನೆ, ನಿನ್ನ ಕಾಲಿಗೆ ಕಾಲುಂಗರ ತೊಡಿಸುವ ಒತ್ತಿನಲ್ಲಿ ಎಲ್ಲರ ಮುಖದಲ್ಲಿ ಸಂತೊಷ ಇರತ್ತೆ ... ಮತ್ತೆ ಅದಕ್ಕಾಗಿ ವರ್ಷದ ಹಿಂದೆನೆ ಬೆಳ್ಳಿ ಕಾಲುಂಗುರ ವನ್ನ ತೆಗೆದಿಟ್ಟು ಕೊಂಡಿದ್ದೆ......
ಈ ಹಿಂದೆ ಚಿನ್ನದ ಕಾಲುಂಗರಕ್ಕಾಗಿ ಉರು ಇಡಿ ಹುಡುಕಿದ್ದೆ ಆಗ ವಿಶ್ವಕರ್ಮರಿಂದ ತಿಳಿಯಿತು ನಮ್ಮಲ್ಲಿ ಸೋಂಟದ ಕಳಗೆ ಬಂಗಾರದ ತೊಡುಗೆಯನ್ನ ಹೆಚ್ಚಾಗಿ ಯಾರು ಧರಿಸುವುದಿಲ್ಲ ಅಂತ, ಎಕೆಂದರೆ ಬಂಗಾರವನ್ನ ನಾವು ಲಕ್ಸ್ಮೀ ದೇವಿ ಅಂತ ಕರೆಯುತ್ತೆವೆ ಮತ್ತೆ ಕಾಲಿಗೆ ಚಿನ್ನವನ್ನ ಧರಿಸುವುಸು ನಾವು ಲಕ್ಶ್ಮೀ ದೇವಿಗೆ ಮಾಡುವ ಅಪಮಾನ ಅಂತ .......

ಇವತ್ತಿನಿಂದ ಇಬ್ಬರು ಹೋಸ ಜೀವನ ಪ್ರರಂಬಿಸುವುದು ಅಂತ ಅಂದು ಕೊಂಡಿದ್ದೆವು ಈ ಹೊಸ ಜೀವನದ ಹೆಜ್ಜೆ ನಮ್ಮಿಬ್ಬರ ಮನೆಯಲ್ಲಿರುವವರ ಮಖದಲ್ಲಿ ಸಂತೊಷ ತರುವಾಗೆ ಇತ್ತು...

ಇವತ್ತು ಅಂತು ನಾ ಕೂಡ ತುಂಬ ಖುಷಿಯಲ್ಲಿ ಇದ್ದೆನೆ...ಕಣ್ಣಲ್ಲಿ ಸಂತೋಷದ ಕಣ್ಣೀರು ಬೇರೆ ...
ಅಂತು ಇಂತು ನನ್ನವಳ ಮದುವೆಯಂತು ಅಯಿತು...
ಇವತ್ತು ಅಂತು ಓಡಾಡಿ ತುಂಬ ಸಾಕಾಗಿದೆ...
ಒಮ್ಮೆ ಶಾಶ್ವತವಾಗಿ ಮಲಗುವ ಅಂತ ಅಂದು ಬಿಟ್ಟಿದೆ...
ನನ್ನವಳಿಗೊಸ್ಕರ ತೆಗೆದಿಟ್ಟ ಬೆಳ್ಳಿ ಕಾಲುಂಗುರ ಈಗಲು ಸಹ ನನ್ನ ಜೇಬಿನಲ್ಲಿಯೇ ಹಾಗೆಯೆ ಉಳಿದಿದೆ...
ಅದ್ರೆ ಮನೆಯವರೆಲ್ಲ ಸಂತೋಷದ ಮುಂದೆ ಈ ನನ್ನ ಹ್ರದಯವು ಹಾಗೆ ಸುಮ್ಮನೆ ಮಲಗಿ ಬಿಟ್ಟಿದೆ ಬೇರೆ...
ನನ್ನವಳ ಮದುವೆ ಕನಸ್ಸು ಅಂತು ನನಸಾಗಿದೆ...
ಅದ್ರೆ ನನಗಂತು ಅವಳನ್ನ ಮದುವೆ ಯಾಗಲು ಇನ್ನೊಂದು ಜನ್ಮತನಕ ಕಾಯಬೇಕಾಗಿದೆ...No comments:

Post a Comment