ಕುಮಾರಾಯಣ.....

" ಟ್ರೀನ್ ಟ್ರೀನ್...... ಟ್ರೀನ್ ಟ್ರೀನ್..... "
" ಹಲೋ, ಅಮ್ಮ ಹೇಳಿ "
" ಎಲ್ಲಿದ್ದಿಯ.. ವಿಷಯ ಗೊತ್ತಾಯಿತ "
" ಯಾವ ವಿಷಯ, ನಾ ಆಫೀಸಲ್ಲಿ ಇದ್ದೆನೆ. "
" ಕುಮಾರ ಆಸ್ಪತ್ರೆಯಲ್ಲಿ ಇದ್ದಾನೆ, ತುಂಬ ಸಿರಿಯಸ್ ಅಂತೆ "
" ಅವನಿಗೆ ಎನಾಯಿತು, ನಿನ್ನೆ ಸಂಜೆ ಸಿಕ್ಕಿದ್ದ.... ಸರಿಯಿದ್ದ "
" ಅದೇ ಗೊತ್ತಿಲ್ಲ, ಅವನ ತಾಯಿ ಕಾಲ್ ಮಾಡಿದ್ದರು, ನೀ ಒಮ್ಮೆ ಪ್ರೀ ಇದ್ದರೆ ಇಗನೇ ಆಸ್ಪತ್ರೆ ತನಕ ಹೋಗು "
" ಯಾವ ಆಸ್ಪತ್ರೆ "" ಉಳ್ಳಾಳ ನರ್ಸಿಂಗ್ ಹೋಮ್ "
" ಅಯಿತು "
ಕುಮಾರ ನನ್ನ ಹಳೇ ಗೆಳೆಯ, ಅದಲ್ಲದೆ ನಮ್ಮ ಸಂಬಧಿಕ ಅಂದರೆ ನನ್ನ ತಾಯಿಯ ತಮ್ಮನ (ನನ್ನ ಮಾವನ) ಹೆಂಡತಿಯ ತಮ್ಮ. ಕುಮಾರನದು ಪಿ.ಯು.ಸಿ ಆಗಿದೇ. ಮನೆ ಹತ್ತಿರಾನೆ ಇರುವ ಬ್ಯಾಟ್ರಿ ಶಾಪ್ ನಲ್ಲಿ ಕೆಲಸಕ್ಕಿರುವುದು. ನಮ್ಮ ಗೆಳೆಯರ ಬಳಗದಲ್ಲಿ ಇವನೆ ಎಲ್ಲರಿಗಿಂತ ಪ್ರಾಯದಲ್ಲಿ ಸಣ್ಣವ...
ನಾ ದಿನದ ಕೆಲಸ ಮುಗಿಸಿ ಆಸ್ಪತ್ರೆ ಮುಟ್ಟಿದೆ.. ಆಗ ಸುಮಾರು ೮.೦೦ ಗಂಟೆಯಾಗಿತ್ತು. ಆಸ್ಪತ್ರೆ ಬಾಗಿಲಲ್ಲೆ ಕುಮಾರನ ಅಣ್ಣ ವಿನ್ನು (ವಿನೋದ್) ಸಿಕ್ಕಿದ.. ಅವನಿಂದ ವಿಷಯ ತಿಳಿಯಿತು, ಕುಮಾರ ಪ್ರೀತಿಸುತ್ತಿದ್ದ ಹುಡುಗಿಯ ಮನೆಯಲ್ಲಿ, ಅವನ ಪ್ರೀತಿಯ ವಿಷಯ ಗೊತ್ತಾಯಿತು ಅದಕ್ಕೆ ಇವ ವಿಷ ತಕೊಂಡಿದ್ದಾನೆ ಅಂತ..
"ವಿನ್ನು ಈಗ ಕುಮಾರ ಹೇಗಿದ್ದಾನೆ " ಅಂತ ಕೇಳಿದೆ,
"ಇಗ ಒಕೆ, ಅದರೇ ಐ ಸಿ ಯ ನಲ್ಲಿ ಇದ್ದಾನೆ, ನೋಡಲು ಬಿಡುವುದಿಲ್ಲ."
ಅಷ್ಟೆ ಹೊತ್ತಿಗೆ ಸರಿಯಾಗಿ ನರ್ಸ್ ಐ ಸಿ ಯು ನಿಂದ ಹೊರ ಬಂದು ಯಾರಾದರು ಮಾತಾಡಲಿಕ್ಕೆ ಇಷ್ಟ ಇದ್ದಾವರು ಒಬ್ಬೊಬ್ಬರೆ ಹೋಗಿ ಮಾತಾಡಬಹುದು ಅಂತ ಹೇಳಿದಳು..
ಅವನ ತಾಯಿ ನನ್ನಲ್ಲಿ ಹೇಳಿದರು " ಭರತ, ನೀನು ಹೋಗಿ ಮಾತಾಡು, ಸ್ವಲ್ಪ ಅವನಿಗೆ ಬುದ್ದಿ ಹೇಳು, ಮನೆಯವರ ಮಾತು ಅವ ಕೇಳುವುದಿಲ್ಲ, ನೀವು ಗೆಳೆಯರು ಹೇಳಿದ್ದರೆ ಅವನು ಖಂಡಿತವಾಗಿಯು ಕೇಳುತ್ತಾನೆ.." ಕುಮಾರ ಮನೆಯಲ್ಲಿ ಕೊನೆಯ ಮಗ, ಅದರಿಂದ ಅವನ ಮೇಲೆ ಎಲ್ಲರಿಗೆ ಸ್ವಲ್ಪ ಪ್ರೀತಿ ಜಾಸ್ತಿ. ಅವನ ತಾಯಿ ಕಣ್ಣಿರಲ್ಲಿ ಹೇಳಿದ ಮಾತು ನನ್ನ ಹೃದಯಕ್ಕೆ ಮುಟ್ಟಿತ್ತು...
ಐ ಸಿ ಯು ನ ಓಳ ಹೋದ ಕೂಡಲೆ ನಾನಂದೆ " ಕುಮಾರ ನರ್ಸ್ ಎಲ್ಲ ಹೇಗಿದ್ದಾರೆ "
" ಯಾರು ಸರಿಯಿಲ್ಲ, ನನ್ನ ಸಾಯಲು ಸಹ ಬಿಡಲಿಲ್ಲ "
" ಸಾಯಲು ಈಗ ಎನಾಗಿದೆ."
" ಭರತ್ ನಿನಗೆ ವಿಷಯ ಗೊತ್ತಿಲ್ಲ "
ಅವನ ಪ್ರೀತಿ ವಿಷ್ಯ ನನಗೆ ಮೊದಲೆ ಗೊತ್ತಿತ್ತು ಆದರಿಂದ ನಾ ಕೇಳಿದೆ " ನಿಮ್ಮ ಮನೆಯಲ್ಲಿ ಪ್ರಾಬ್ಲಂ ಉಂಟಾ? Tension ಮಾಡ ಬೇಡ ನಾ ಹೇಳುತ್ತೆನೆ.. "
"ಅಲ್ಲ"
" ಮತ್ತೆ"
" ಅವಳು ನಿನ್ನೆ ಸಂಜೆ ಫೋನ್ ಮಾಡಿದ್ದಳು ಅವಳ ಮನೇಯಲ್ಲಿ ನಮ್ಮ ಪ್ರೀತಿ ಬಗ್ಗೆ ಗೊತ್ತಾಗಿದೆ, ಅವಳನ್ನ ಮನೇಯಲ್ಲಿ ಕೊಲ್ಲಾತ್ತರೆ ಅಂತೆ ಹೇಳಿದಳು "
"ಅದಕ್ಕೆ ನಿ ಎಕೆ ವಿಷ ತೆಕೊಂಡ್ಡದ್ದು"
" ಅವಳು ಸಾಯುವ ಮೊದಲೆ ನಾನು ಸಾಯ ಬೇಕಂತ "
ನನ್ನ ಬಿಪಿ ಸ್ವಲ್ಪ ಹೇಚ್ಚಾಯಿತು ನೋಡಿ "ನಿಂಗೆ ಎನು ಹುಚ್ಚ ??, ಈಗ ನಿ ಸತ್ತೆರೆ ಅವ್ಳು ನಿಂಗೆ ಸಿಕ್ಕುತ್ತಾಳೆಯ??, ನಿನ್ನ ಮನೆಯವರನ್ನು ನೊಡು ಹೇಗೆ ನಿನಗೊಸ್ಕರ ಅಳುತ್ತ ಇದ್ದರೆ, ಕುಮಾರ... ಬೇಕು ಅಂದ ಮೇಲೆ ಹೇಗಾದರು ಮಾಡಿ ಪಡಿ ಬೇಕು, ಅದು ಜೀವನ..... ಸತ್ತ ನಂತರ ಎನೂ ಇಲ್ಲ...... ಸ್ವಲ್ಪ ದಿನ ನೀ ಇಲ್ಲ ಅಂತ ಅಳುತ್ತರೆ ಮತ್ತೆ ಎನಿಲ್ಲಾ ಎಲ್ಲರು ಮರೆತು ಬಿಡುತ್ತಾರೆ ಅಷ್ಟೆ...."
" ನಿಂಗೆ ಗೊತ್ತಾಗಲ್ಲ ಭರತ್, ಪ್ರೀತಿ ಅಂತ ಹೇಳಿದರೆ ಎನಾಂತ, ಪ್ಲೀಸ್ ನನ್ನನ್ನು ನನ್ನ ಅಷ್ಟಕ್ಕೆ ಬಿಡು"
" ಕುಮಾರ ನಿ ಮದುವೆ ಯಾಗಲು ರೇಡಿ ಇದ್ರೆ, ನಾಳೆನೆ ಅವಳ ಮನೆಯಲ್ಲಿ ಹೋಗಿ ಮಾತಡಲು ಹೇಳುತ್ತೆನೆ ತಾಯಿಯತ್ರ."
" ಅವಳ ಮನೆಯಲ್ಲಿ ಒಪ್ಪುದಿಲ್ಲ.. ಅವಳ ಅತ್ತೆ ಒಪ್ಪುದಿಲ್ಲ.. "
" ಕುಮಾರ ಹೇದರ ಬೇಡ, ಮನೇಯವರು ಹೋಗಿ ಮಾತಡಿದರೆ ಅವರು ಖಂಡಿತಾವಾಗಿಯು ಒಪ್ಪುತ್ತಾರೆ.."
ನಿ ಎನು Tension ಮಾಡ್ ಬೇಡ ಎಲ್ಲ ಸರಿಯಾಗತ್ತೆ. "

ಅಷ್ಟೆ ಹೊತ್ತಿಗೆ ಸರಿಯಾಗಿ ನರ್ಸ್ ಟೈಮು ಅಯಿತು ಸಾರ್, ನಿಮ್ಮಂತ ಗೇಳೆಯರಿಂದಲೆ ಎಲ್ಲ ಹಾಳಾಗುವುದು, ಪ್ರೀತಿ ಪ್ರೇಮ ಅಂತ ಎನೇನು ಕನಸ್ಸು ಹುಟ್ಟಿಸಿ ಸಾಯುವ ಪರಿಸ್ಥಿಗೆ ಬರುವ ವರೆಗೆ ಸುಮ್ಮ್ನೆ ಇರುತ್ತಿರ, ಒಮ್ಮೆ ತಾಯಿಯ ಮುಖ ನೊಡಿದರೆ ಗೊತ್ತಾಗತ್ತೆ ಪ್ರೀತಿ ಅಂತ ಹೇಳಿದರೆ ಎನು ಅಂತ, ಬೆಳಗ್ಗಿನಿಂದ ಎನು ತಿನ್ನದೆ ಬಾಗಿಲಲ್ಲಿ ಇದ್ದಾರೆ, ನಿಮ್ಗೆ ಅಂತವರ ನೆನಪು ಬರುದಿಲ್ಲ" ಅ ನರ್ಸ್ ನ ಮಾತು ಕೇಳಿದಗಾ ನನ್ನಿಂದ ಕುಮಾರ ಹಾಳದಗೆ ಇತ್ತು, ಅದ್ರು ಅವರ ಉಪದೇಶ ಅ ಕ್ಷಣದಲ್ಲಿ ಸರಿಯಾದ ಕಾರಣ ಏನು ಮಾತಾಡದೆ ಐ ಸಿ ಯು ನಿಂದ ಹೋರ ಬಂದೆ..

ಅವನ ತಾಯಿಯಲ್ಲಿ ವಿಷಯ ಎಲ್ಲ ತಿಳಿಸಿದೆ, ಆದರೆ ಮನೆಯಲ್ಲಿ ಅವನ ಪ್ರೇಮದ ವಿಷಯ ಮೊದಲೆ ಗೊತ್ತಿತ್ತು. ಅವನ ತಾಯಿ ನನ್ನಲ್ಲಿ ಹೇಳಿದರು" ನಾವು ಇವತ್ತು ಅವಳ ಕಾಲೇಜುಗೆ ಹೊಗಿದ್ದೆ , ಅವಳ ಹತ್ತಿರ ಮಾತಾಡಿದೆ ಅವಳು ಈಗ ಇಷ್ಟ ಇಲ್ಲ ಅಂತ ಹೇಳಿದಳು "
"ಇಲ್ಲ ಆಂಟಿ, ಕುಮಾರ ಹೇಳಿದ ಅವಳ ಮನೆಯಲ್ಲಿ ಮಾತ್ರ ಇಷ್ಟ ಇಲ್ಲ ಅಂತ"
" ಇಲ್ಲ ಭರತ್, ಇ ಹಿಂದೆ ಅವಳು ಮನೆಗೆಲ್ಲ ಸುಮಾರು ಸಲ ಬಂದಿದ್ದಳು.. ಆಗ ಸರಿ ಇದ್ದಳು, ಇವತ್ತು ಅವಳ ಕಾಲೇಜುಗೆ ಹೊಗಿದ್ದೆ , ಅವಳ ಹತ್ತಿರ ಮಾತಾಡಿದೆ ಅವಳು ಇಷ್ಟವೇ ಇಲ್ಲ ಅಂತ ಹೇಳಿದಳು. "
ನಮ್ಮ ಮಾತುಗಳನ್ನೆ ಕೇಳುತಿದ್ದ ಕುಮಾರ ಅಣ್ಣ ವಿನ್ನು ನನ್ನಲ್ಲಿ ಅಂದ
" ನಾನು ನಾಳೆ ಹೋಗಿ ಅವಳ ತಂದೆ ಯಲ್ಲಿ ಮಾತಾಡುತ್ತೆನೆ. ಅವಳ ತಂದೆ ಓಪ್ಪಿದರೆ ಮದುವೆ ಮಾಡಿ ಬಿಡುವ.."
ವಿನ್ನುವಿಗೆ ಮದುವೆ ಯಾಗಿರಲಿಲ್ಲ.. ಅದ್ರು ತಮ್ಮನ ಮೇಲೆ ಇದ್ದ ಪ್ರೀತಿ ನೋಡಿದಾಗ ನಂಗೆ ಅನಿಸುತಿತ್ತು ನಂಗು ಸಹ ವಿನ್ನು ನಂತ ಅಣ್ಣನನ್ನು ದೇವರು ಕೊಡಬೇಕಿತ್ತು ಅಂತ...
-----------------------------

ಮರು ದಿನ ನಾ ಕೆಲಸ ಮುಗಿಸಿ ಆಸ್ಪತ್ರೆಗೆ ಬಂದೆ.. ಕುಮಾರನನ್ನು ಐ ಸಿ ಯು ನಿಂದ ವಾರ್ಡ್ ಗೆ ತಂದಿದ್ದರು ..
ನನನ್ನು ನೋಡಿದ ಕೂಡಲೆ ಕುಮಾರ "ಅವಳ ಮನೆಗೆ ಹೊಗಿದ್ದಿಯ" ಅಂತ
ಕೇಳಿದನಾನಂದೆ "ಇಲ್ಲ ವಿನ್ನು ಮಾತಾಡುತ್ತೆನೆ ಅಂತ
ಹೇಳಿದ್ದ"ಅವನ ತಾಯಿ ಸಹ ಇದ್ದರು " ಆಂಟಿ.. ವಿನ್ನು ಬಂದನ್ನ. ಎನಾದರು ಹೇಳಿದನಾ "
"ಇಲ್ಲ ಭರತ.. ವಿನ್ನು ಬರಲಿಲ್ಲ ನಾವು ಸಹ ಅವನನ್ನೆ ಕಾಯುವುದು"
ಅಷ್ಟೆ ಹೊತ್ತಿಗೆ ನರ್ಸ್ ಬಂದಳು, ಎಲ್ಲ ಹೋರಗೆ ಹೋಗಿ ಇಜೆಕ್ಷನ್ ಕೊಡಲು ಉಂಟು, ನಾವೆಲ್ಲ ರೊಮ್ ನ ಬಾಗಿಲಲ್ಲಿ ಬಂದು ನಿಂತ್ತೆವು ಆಗ ಆಂಟಿ ಅದ್ದರು.. " ವಿನ್ನು ಅವಳ ತಂದೆಯಲ್ಲಿ ಮಾತಾಡಿದ, ಅದಕ್ಕೆ ಅವರು ಮನೆಯವರಿಗೆಲ್ಲ ಒಪ್ಪಿಗೆ ಇಲ್ಲ ಮತ್ತೆ ಹುಡುಗಿಗೆ ಸಹ ಇಷ್ಟ ಇಲ್ಲ " ಅಂತ ತಿಳಿಸಿದರು.

ಆಗ ಕುಮಾರನ ಪ್ರೇಮ ಕಥೆ ಯಲ್ಲಿ ಸ್ವಲ್ಪ ಟ್ವಿಸ್ಟ್ ಇದ್ದ ಹಾಗೆ ಕಾಣಿಸಿತು, ಅಂದರೆ ಕುಮಾರ ಪ್ರೀತಿ ಈಗ ಒನ್ ವಯ್ ಲವ್ ತರ !!,ಎಲ್ಲಿಯಾದರು ಅವಳು ಇಷ್ಟ ಇಲ್ಲ ಅಂತ ಹೇಳಿದಕ್ಕೆ ಮಿನಿ ಇವ ವಿಷ ತೆಕೊಂಡದ್ದ !!

ಸ್ವಲ್ಪ ಹೊತ್ತಿನ ನಂತರ ನಾ ಕುಮಾರನಲ್ಲಿ ಹೇಳಿದೆ " ಕುಮಾರ ನನ್ನ ಒಬ್ಬಳು ಗೇಳತಿ ಇದ್ದಳು ೫ ವರ್ಷ ಪ್ರೀತಿಸಿದೆ ನಂತರ ನಾ ಇಷ್ಟ ಅಲ್ಲ ಅಂತ ಅವಳು ಬಿಟ್ಟು ಹೋದಳು, ಕುಮಾರ ಈ ಹುಡಿಗಿರನ್ನೆ ನಂಬುದು ಕಷ್ಟ, ಅವರನ್ನ ಅರ್ಥ ಮಾಡಿಕೊಳ್ಳಕ್ಕೆ ಹಾಗಲ್ಲ, ಒಂದು ವೇಳೆ ನಿನ್ನವಳು ನೀನು ಎಷ್ಟ ಇಲ್ಲ ಅಂತ ಹೇಳಿದರೆ ಎನು ಮಾಡುತ್ತಿ ??"
" ಇಲ್ಲ ಭರತ್ ನನ್ನವಳು ಹಾಗೆ ಹೇಳೊ ಛಾನ್ಸೆ ಇಲ್ಲ.. ಒಂದು ವೇಳೆ ಹೇಳಿದರೆ ಅವಳು ನನ್ನ ಮುಂದೆ ನಿಂತು ಹೇಳಲಿ ಮತ್ತೆ ನಾ ಅವಳ ಸುದ್ದಿ ಹೊಗಲ್ಲ.. "
ನನ್ನ ಇನೊಬ್ಬ ಗೇಳೆಯ ಅಂದ " ಮತ್ತೆ ವಿಷನೊ ಇಲ್ಲದಿದ್ದರೆ ಹಗ್ಗವೇ ಗತಿ "
ನಾನಂದೆ " ಹುಚ್ಚ ಎನೊ ನಮಗೆ... ಈ ಪ್ರಪಂಚದಲ್ಲಿ ಎಷ್ಟೊ ಹುಡಿಗಿಯರು ಇದ್ದಾರೆ ನಮಗೊಸ್ಕರ, ಮತ್ತೆ ನನ್ನ ಮತ್ತು ಕುಮಾರನಂದು ಹೊಸ ಪ್ರೇಮ ಕಥೆ, ಮರಲಿ ಯತ್ನವ ಮಾಡು, ಅಲ್ಲ ಕುಮಾರ"

ಅಷ್ತೆ ಹೊತ್ತಿಗೆ ವಿನ್ನು ಉಟ ಹಿಡಿದು ಕೊಂಡು ಬಂದ.. ವಿನ್ನು ನನ್ನಲ್ಲಿ ಎಲ್ಲ ವಿಷಯ ತಿಳಿಸಿದ..
ವಿನ್ನು ನಲ್ಲಿ ನಾನಂದೆ "ನಾವು ಅವಳ ಮನೆಯಲ್ಲಿ ಹೋಗಿ ಮಾತಾಡುವ, ಒಂದು ವೇಳೆ ಮನೇಯವರಿಗೆ ಕುಮಾರನ ಇಗಿನ ಪರಿಸ್ಥಿತಿ ಗೊತ್ತಿರಲು ಸಾಧ್ಯವಿಲ್ಲ, ಅದನ್ನು ತಿಳಿಸಿದರೆ ಅವರು ಮದುವೆಗೆ ಒಪ್ಪ ಬಹುದು ಮತ್ತೆ ಒಂದು ವೇಳೆ ಅವರು ಒಪ್ಪಲಿಲ್ಲದೆ ಇದ್ದರೆ ಮತ್ತೆ ನೊಡುವ... "

ಹಾಗೆ ನಾನು ವಿನ್ನು ಮತೊಬ್ಬ ಗೇಳೆಯ ಮತ್ತು ಕುಮಾರನ ಬಾವ ಹುಡುಗಿ ಮನೆಗೆ ಹೋರೆಟೆವು..
ಹುಡುಗಿ ಮನೆ ಹೋರಡುವ ಮುಂಚೆ ನಾ ಅಲ್ಲಿಯ, ಅ ನಗರದ ಕೇಸರಿದಳದ (ಹಿಂದು ಸಂಘ) ನಾಯಕನೋಡನೆ ಮಾತಾಡಿದೆ, ಅವರು ನಮ್ಮ ಸಹಾಯಕ್ಕೆ ಬರುವರೆಂದು ತಿಳಿಸಿದರು ....

ಹುಡುಗಿ ಮನೇ ಹತ್ತಿರವೆ ಕುಮಾರನ ಚಿಕ್ಕಪ್ಪನೆ ಮನೇ ಇರುವುದು..
ಕುಮಾರ ಪ್ರೇಮ ಕತೆ ಇಲ್ಲಿಂದಲೆ ಶುರುವಾದದ್ದು ...
ಕುಮಾರ ಪ್ರತಿ ಅದಿತ್ಯವಾರ ಚಿಕ್ಕಪ್ಪನ ಮನೆಗೆ ಹೊಗುತಿದ್ದ ಅಲ್ಲಿ ಅವಳ ಪರಿಚಾಯವಾಯ್ತು, ಪರಿಚಯ ದಿನಕಳೆದಂತೆ ಪ್ರೇಮಕ್ಕೆ ತಿರುಗಿತು.. ಅವಳು ಆಗ ದ್ವೀತಿಯ ಪಿ ಯು ಸಿ ಓದುತಿದ್ದಳು, ಸೋಮವಾರ ಬೆಳಿಗ್ಗೆ ಕುಮಾರ ಚಿಕ್ಕಪ್ಪನ ಮನೇಯಿಂದ ಕೆಲಸಕ್ಕೆ ಬರುತಿದ್ದ, ಅವಳು ಸಹ ಕಾಲೇಜಿಗೆ ಬರುತಿದ್ದಳು, ನಂತರ ಪ್ರತಿ ಸೋಮವಾರ ದೇವಸ್ಥಾನಕ್ಕೆ ಇಬ್ಬರು ಒಟ್ಟಿಗೆ ಹೊಗೊ ಶುರುಮಾಡಿದ್ದರು, ನಂತರ ಜಾತ್ರೆ , ಬಯಲಾಟ, ಯಕ್ಷಗಾನ ಅಂತ ಮುಂದುವರೆಯಿತು .....

ಮೊದಲು ನಾವು ಚಿಕಪ್ಪನ ಮನೆಗೆ ಹೊದೆವು. ಅಲ್ಲಿ ಅವರೊಡನೆ ಮಾತಾಡಿ ಹುಡುಗಿ ಕುಟುಂದ ಬಗ್ಗೆ ಹೆಚ್ಚಿನಾ ವಿವರ ತೆಕೊಂಡ್ಡೆವು. ಅಷ್ತೆ ಹೊತ್ತಿಗೆ ಸರಿಯಾಗಿ ಕೇಸರಿ ದಳದ ೨೦ ಜನ ಬಂದಿದ್ದರು. ಎಲ್ಲ ಅವಳ ಮನೆಯೊಳೆಗೆ ಹೋದೆವು .. ಆಗ ರಾತ್ರಿ ಸುಮಾರು ೧೧ ಗಂಟೆಯಾಗಿತ್ತು. ಮನೆ ಒಳಗೆ ಹೊದ ಕೂಡಲೆ ನಮಗೆ ಕುಳಿತು ಕೊಳ್ಳಲು ಹೇಳಿದರು... ನಾವು ಬರುವ ವಿಷ್ಯ್ ಅವರಿಗೆ ಮೊದಲೆ ಗೊತ್ತಿದ್ದ ಕಾರಣ ಹುಡುಗಿಯ ಮನೆಯ ವಾತವರಣ ನಮ್ಮ ಸ್ವಾಗತಕ್ಕೆ ಸಿದ್ದರದಂತ್ತೆ ಇತ್ತು.. ಮನೆಯ ಯಜಮನ ಹುಡಿಗಿಯ ಮಾಮಿ (ಅತ್ತೆ), ಅದಕ್ಕೆ ಅವರಲ್ಲಿ ನಮ್ಮ ಹುಡುಗನ ಪರಿಸ್ಥಿತಿ ಎಲ್ಲ ತಿಳಿಸಿದೆವು, ಅದಕ್ಕೆ ಅ ಹೆಂಗಸು " ನಮ್ಮ ಹುಡಿಗಿದ್ದು ಎನು ತಪ್ಪಿಲ್ಲ, ಎಲ್ಲ ನಿಮ್ಮ ಹುಡುಗನೆ ಬೇಕಂತೆ ಮಾಡಿಕೊಂಡ್ಡದ್ದು, ನಿಮ್ಮ ಹುಡುಗನೆ ನಮ್ಮ ಹುಡಿಗಿಯ ಹಿಂದೆ ತಿರುಗುತಿದ್ದ, ಇಗ ಇಷ್ಟೆಲ್ಲ ಅಗಿರುದಕ್ಕೆ ಕಾರಣ ನಿಮ್ಮವನೆ, ನೀವು ಸುಮ್ನೆ ನಮ್ಮ ಹುಡಿಗಿಯ ಹೆಸರನ್ನ ಹಾಳು ಮಾಡುತಿದ್ದಿರಿ " ಅಂತ ಹೇಳಿದರು..
ಅದಕ್ಕೆ ನಾ ಅಂದೆ " ಅಯಿತು ಎಲ್ಲ ತಪ್ಪು ನಮ್ಮದೆ ಆದರೆ ಹುಡುಗನ ಇಗೀನ ಸ್ಥಿತಿ ಸರಿಯಿಲ್ಲ, ನೀವು ನಿಮ್ಮ ಹುಡಿಗಿನ ಸಾಯಿಸುತ್ತಿರ ಅಂತ ತಿಳಿದು ನಮ್ಮಾವ್ನು ವಿಷತೊಗೊಡಿದ್ದಾನೆ.. ನನ್ನ ಪ್ರಾಕರ ತಪ್ಪು ಎರಡು ಕಡೆಯಿಂದಲು ಆಗಿದೆ ಅದನ್ನ ನಾವು ಸರಿಮಾಡ ಬೇಕು.."
" ನಮ್ಮ ಹುಡುಗಿಗಂತು ಪ್ರಾಯ ಬೇರೆ ಯಾಗಿಲ್ಲ, ಎಲ್ಲ ನಿಮ್ಮ ಹುಡುಗನದೆ ಕೆಲಸ, ನಮ್ಮ ಹುಡಿಗಿಗೆ ಎನೊ ಮದ್ದು ಹಾಕಿ, ಮಂತ್ರ ಮಾಡಿ ಅವನ ಹಿಂದೆ ಬರೊ ಹಾಗೆ ಮಾಡಿದ್ದು"
ಅಷ್ಟರವರೆಗೆ ಸುಮ್ಮನೆ ಇದ್ದ ನಾನು ಕುಮಾರಯಾಣ ಪುಸ್ತಕದ ಹಳೆ ಪುಟಗಳನ್ನ ತಿರಿಗಿಸಿದೆ..." ನಿಮ್ಮ ಮನೆಗೆ ಇ ಹಿಂದೆ ಮಗಳು ಡಿವಿಡಿ, ಮೊಬೈಲ್ ಫೋನ್, ಡ್ರೆಸ್ ತಂದಗ ಯಾರದ್ದು ಅಂತ ಕೇಳಿದ್ದರ ?? "
ಅದಕ್ಕೆ ಅವಳ ಅತ್ತೆ ಅಂದರು " ಅದು ಕೇಳಿದಕ್ಕೆ ಅವಳ ಗೇಳತಿ ಮನೆಯಿಂದ ಅಂತ ಹೇಳಿದ್ದಳು "
ಆಗ ಕೇಸರಿ ದಳ ನಾಯಕ " ನಿಜವಾಗಿ ನೊಡಬೇಕದಾರೆ ತಪ್ಪು ಎರಡು ಕಡೆಯಿಂದ ಆಗಿದೆ, ಆದರೆ ಇಗ ಅ ತಪ್ಪನು ಸರಿಮಾಡ ಬೇಕಾದದ್ದು ನಮ್ಮ ಕರ್ತವ್ಯ.."
ಅವಳ ಅತ್ತೆ ಅಂದರು "ಅಯಿತು, ಹುಡಿಗಿಯಲ್ಲಿ ಕೇಳಿ ನೀವು ಅವಳಿಗೆ ಇಷ್ಟ ಇದ್ದಾರೆ ನಾವು ಮುಂದೆ ಮಾತಾಡುವ.."
ಹುಡಿಗಿಯನ್ನ ಕರೆದರು..... ಹುಡುಗಿ ನಮ್ಮಾ ಎದುರು ಗಡೆ ಬಂದು ನಿಂತಳು ..
ಅವಳನ್ನು ನೋಡಿ ನಾನಂದೆ, "ನಾನು ಕುಮಾರನಾ ಗೇಳೆಯ, ಅವ ಇಗ ತುಂಬ ಸಿರಿಯಸ್ ಕಂಡಿಶನಲ್ಲಿ ಇದ್ದಾನೆ... ನಿನಗೆ ಅವನ ಮೇಲೆ ಇಷ್ಟ ಇದ್ದರೆ ನಾವು ಮದುವೆ ಮಾಡಿ ಕೊಡುತ್ತೆವೆ.. "ಅವಳು ನನ್ನ ಮುಖ ನೋಡಿ " ಅವನು ಯಾರು ಅಂತ ಸರಿಯಾಗಿ ಗೊತ್ತೆ ಇಲ್ಲ. ಯವಾಗಲು ನಾ ನಿನ್ನ ಪ್ರಿತಿಸುತ್ತೆನೆ ಅಂತ ನನ್ನ ಹಿಂದೆ ಬರುತಿದ್ದ."
ಇಷ್ಟಾಗುವಾಗ ಕುಮಾರನ ಅಣ್ಣ ವಿನ್ನು ಅಳಾಳು ಶುರುಮಾಡಿದ....
" ವಿನ್ನು, ಅಳು ಬೇಡ, ನಮ್ಮ ಕುಮಾರನಿಗೆ ಇದಕಿಂತ ಒಳ್ಳೆ ಹುಡುಗಿ ಸಿಕ್ಕುತ್ತಾಳೆ "
ವಿನ್ನು ಎದ್ದು ಮನೆಯ ಹೋರಗೆ ಹೋದ.....

" ಸರಿ.. ಹಾಗದರೆ ನಾವು ಬರುತ್ತೆವೆ ಅದರೆ "ನೀ ಈಗ ಹೇಳಿದ ಮಾತನ್ನ ಕುಮಾರನ ಮುಂದೆ ನಿಂತು ಹೇಳು " ಮತ್ತೆ ಅವ ನಿನ್ನ ಸುದ್ದಿಗೆನೆ ಬರಲ್ಲ.."
ಅದಕ್ಕೆ ಅವಳೇಂದಳು "ನಾನೇಕೆ ಬರಬೇಕು"
ಮತ್ತೆ ಹಳೆ ವಿಷಯ ಹೇಳ ಬೇಕಾಯಿತು "ಅವತ್ತು ಧರ್ಮಸ್ಥಳ ಪಿಕನಿಕ್ ಅಂತ ಮನೆಯಲ್ಲಿ ಹೇಳಿ ಕುಮಾರ ಮನೆಯಲ್ಲಿ ನಿಂತದ್ದು ನೆನಪಿಲ್ಲ ಹಾಗಿರಬೇಕು "
ಇನ್ನು ಹೆಚ್ಚು ಹೇಳುವಷ್ಟರಲ್ಲಿ ಕೇಸರಿ ದಳದ ನಾಯಕ "ಅಯಿತು... ನಾವು ಕರೆದುಕೊಂಡು ಬರುತ್ತೆವೆ ಆದರೆ ನಿಮ್ಮ ನಂಬಿಕೆ ಮೇಲೆ, ಮತ್ತೆ ಅವಳು ಅವನ ಮುಂದೆ ಇಷ್ಟ ಇಲ್ಲ ಅಂತ ಹೇಳಿದ ನಂತರ ನೀವು ಯಾರು ಇವರ ಸುದ್ದಿಗೆ ಬರಬರದು.."
ಅದಕ್ಕೆ ನಾವು ಒಪ್ಪಿ ಅಲ್ಲಿಂದ ಹೊರೆಟೆವು..

ಅಸ್ಪತ್ರೆ ಮುಟ್ಟುವಾಗ ಸುಮಾರು ೧೨.೩೦ ಗಂತೆ ಯಾಗಿತ್ತು. ಕುಮಾರನಲ್ಲಿ ನಡೆದ ವಿಶಯ ಎಲ್ಲ ತಿಳಿಸಿದೆವು ಅದರೆ ಅವ ನಂಬಲು ಸಿದ್ದನಿರಲಿಲ್ಲ.. ಅದಕ್ಕೆ ರಾತ್ರಿ ಆಸ್ಪತ್ರೆಯಲ್ಲಿಯೆ ನಿಂತೆವು, ನಾವೆಲ್ಲ ಅವನಿಗೆ ಧೈರ ತುಂಬಲು ಕೆಲವರ love Story ಹೇಳಿದೆವು. ಸುಮರು ೫.೦೦ ಗಂಟೆಯವರೆಗೆ ಜಾಗರಣೆ..
ಅಂತು ಬೆಳಿಗ್ಗೆ ಅಸ್ಪತ್ರೆಯಿಂದ ಹೊರಾಡುವ ಹೊತ್ತಿಗೆ ಕುಮಾರನನ್ನು ಸರಿಮಾಡಿದ್ದೆವು .. ಅಂದರೆ ಒಂದು ವೇಳೆ ಅವಳು ಬಂದು ಇಷ್ಟವಿಲ್ಲ ಅಂತ ಹೇಳಿದರೆ ಮತ್ತೆ ಅವಳ ಸುದ್ದಿಗೆ ಹೋಗಲಿಕ್ಕೆ ಇಲ್ಲದಷ್ಟು..

ಅವತ್ತು ಎಪ್ರಿಲ್ ೨ ತಾರಿಕು (Bank year end) ಅದ ಕಾರಾಣ ನನಗೆ ಸಂಜೆ ಅಸ್ಪತ್ರೆ ಗೆ ಹೊಗಲು ಅಗಲಿಲ್ಲ.. ಮರುದಿನ ಆಸ್ಪತ್ರೆ ಹೋದೆ ಅಗ ತಿಳಿಯಿತು ಕೇಸರಿ ದಳದ ಕುತಂತ್ರದಿಂದ (ಹುಡುಗಿ ಅವರ ನಗರದವಳಾದ ಕಾರಣ) ಅವಳನ್ನ ಅವರು ಕರೆದು ಕೊಂಡು ಬರಲಿಲ್ಲ ಅಂತ, ಅದ್ಗೊಸ್ಕರ ಆ ದಿನ ರಾತ್ರಿ ಕುಮಾರ ನರ್ಸೆ ಗೆ ಹೊಡೆದು, ರಾತ್ರಿ ಮಲಗಿದ್ದ ಗೇಳಯನಿಗೆ ಹೊಡೆದು ಆಸ್ಪತ್ರೆಂದ ಓಡಲು ಪ್ರಯತ್ನ ಮಾಡಿದ್ದ ಅಂತ ...

ನಾ ಆಸ್ಪತ್ರೆ ಹೋದ ದಿನ ಕುಮಾರನ ಜ್ವಾರ ತಲೆಗೆ ಎರಿತ್ತು ಮತ್ತು ಅದ್ರೊಟ್ಟಿಗೆ ಅವನಿಗೆ ಹಳದಿ ಕಾಯಿಲೆ ಉಂಟು ಅಂತ ಗೊತ್ತಾಗಿತ್ತು.. ಆಸ್ಪತ್ರೆಯಲ್ಲಿ ಹುಚ್ಚನಾಗೆ ಮಾಡೊ ಶುರುಮಾಡಿದ, ಅದರಿಂದ ಅವನನ್ನು ಬೇರೆ ಆಸ್ಪತ್ರೆ ಬದಲಾಯಿಸಿದೆವು.. ಸುಮಾರು ೫೦ ಸಾವಿರ (ಪೋಲಿಸ್ ಕೇಸ್ ಅಗದ ಕಾರಣ) ತನಕ ಖರ್ಚಯಾಯಿತು, ಎಲ್ಲ ಖರ್ಚು ಅಣ್ಣದ್ದೆ, ಮನೆಯರಿಗೆಲ್ಲ ಅವನು ಗುಣವಾಗುವುದೆ ಮುಕ್ಯಾವಾಗಿತ್ತು. ಹೀಗೆ ವಾರಗಳು ಕಳೆದವು... ಸುಮರು ಮೂರು ವಾರಗಳು ಕಳೆದಂತೆ ಕುಮಾರನ ಪ್ರೀತಿ ಹುಚ್ಚು ಸ್ವಲ್ಪ ಇಳಿದಿತ್ತು...
-----------------------------

ಆಸ್ಪತ್ರೆಯಿಂದ ಡಿಸ್ ಚಾರ್ಜ್ ಅದ ಮರುದಿನ ಸಂಜೆ ಕುಮಾರ ನಮ್ಮ ಆಫೀಸ್ ಗೆ ಬಂದಿದ್ದ...
" ನಾ ನಾಳೆ ಶಿವಮೊಗ್ಗ ಹೋಗುವುದು, ಅಲ್ಲಿ ಯಾವುದೊ ಒಂದು ಒಳ್ಳೆ ಕೆಲಸ ಉಂಟತೆ... ಇಗಂತ್ತು ಆಸ್ಪತ್ರೆಗೆ ತುಂಬ ಖರ್ಚಾಗಿದೆ, ಅಲ್ಲ ಮತ್ತೆ ಉರಲ್ಲೆ ಇದ್ದರೆ ಅವಳ ನೆನಪು ಅಗತ್ತೆ ದೂರಹೋದರೆ ಮಾತ್ರ ಎಲ್ಲ ವಿಷಯ ಮರೆಯಬಹುದು ಮತೊಂದು ವಿಷಯ ನಾನಗೆ ಸ್ವಲ್ಪ ಹಣ ಬೇಕಿತ್ತು.." ಅಂತ ಕುಮಾರ ಹೇಳಿದ.
ನನ್ನಲ್ಲಿ ಇದ್ದ ಸ್ವಲ್ಪ ಹಣವನ್ನ ಕೊಟ್ಟೆ
"ಮತ್ತೆ ಮುಟ್ಟಿದ ಮೇಲೆ ಫೊನ್ ಮಾಡುತ್ತೆನೆ" ಅಂತ ಕುಮಾರ ಹೊರಟ...
-----------------------------

ಮರುದಿನ ಸಂಜೆ ನನ್ನ ಮೊಬೈಲ್ ಗೆ ಕರೆ ಬಂತು...
" ಹಲೋ.. ಯಾರು ಮಾತಾಡುವುದು"
" ನಾ ಕುಮಾರ "
" ಹೇಳು ಕುಮಾರ, ಶಿವಮೊಗ್ಗ ಮುಟ್ಟಿದ್ದಿಯ ??"
"ಇಲ್ಲ ಭರತ್ ನಾ ಶಿವಮೊಗ್ಗ ಹೊಗಲಿಲ್ಲ.."
" ಮತೆಲ್ಲಿದ್ದಿಯ....."
" ಪೋಲಿಸ್ ಟೇಶನಲ್ಲಿ"
"ಎನಾಯಿತು"
" ಮುದುವೆಯಾಯಿತು"
" ಹೌದ, ಅಲ್ಲ ಸುಮ್ಮನೆ ಹೇಳಿತಿಯ ??"
" ಇಲ್ಲ ಭರತ್ ನಿಜವಾಗಿಯು"
" ನಿಲ್ಲು.. ಒಂದು ನಿಮಿಶ "
" ಹಲೋ. ನಾನು ++++ ಮಾತಾಡುವುದು... ಇವತ್ತು ಬೆಳಿಗ್ಗೆ ನಮ್ಮ ಮದುವೆಯಾಯಿತು...."
" ನಿಜವಾಗಿಯು ನನಗೆ ನಂಬೊಕಾಗಲ್ಲ "
" ಮತ್ತೆ ನಿಮ್ಮಲ್ಲಿ ಸಾರಿ ಹೇಳಬೇಕಿತ್ತು"
"ಎಕೆ"
"ಅವತ್ತು ನೀವು ಮನೆಗೆ ಬಂದಗ ನನ್ನ ಅತ್ತೆ, ತಾಯಿ ಮತ್ತು ತಂದೆ ಅತ್ಮ ಆತ್ಯ ಮಾಡುತ್ತಾರೆ ಎಂದು ನನ್ನ ಹೇದರಿಸಿದ್ದರು. ಅದಕ್ಕೆ ನನಗೆ ಸರಿಯಾಗಿ ಮಾತಾಡಲಿಕ್ಕೆ ಅಗಲಿಲ್ಲ"
"ಸಾರಿ ನಿಜವಾಗಿಯು ನಾನೇ ಕೇಳ್ ಬೇಕಾದದ್ದು ಎಕೆಂದರೆ ನಿಮ್ಮ ಮನೆಂದ ಬಂದ ಮೇಲೆ ನಾನು ನಿಮಗೆ ಸರಿಯಾಗಿ ಬೈದಿದ್ದೆ.."
ನಂತರ ಅವಳು ಕುಮಾರನಿಗೆ ಫೊನ್ ಕೊಟ್ಟ್ಳು....." ಭರತ್ ನಾ ನಿನ್ನಲ್ಲಿ ಹೇಳಲಿಲ್ಲವ ನಾ ಕರೆದರೆ ಅವಳು ಬರುತ್ತಾಳೆ ಅಂತ ""ಹೌದು.. ಕುಮಾರ ನಿನು ಹೇಳಿದಾಗನೆ ಅಯಿತು.."
"ಮತ್ತೆ ಮನೆಯವರಿಗೆಲ್ಲ ಗೊತುಂಟ"
"ನನ್ನ ಮನೆಯವರೆಲ್ಲ ಇಲ್ಲೆ ಇದ್ದಾರೆ ಮತ್ತು ಅವಳ ಮನೇಯವರಿಗೆಲ್ಲ ಈಗ ಗೊತ್ತಾಗಿರಬಹುದು.. ನಾವೀಗ ಪೋಲಿಸ್ ಟೇಶನಲ್ಲಿ ಸಂತೊಷ್ ನೊಟ್ಟಿಗೆ (ನಮ್ಮ ರಾಜಕೀಯ ಗೇಳೆಯ) ಇದ್ದೆವೆ.. ಅವಳ ಮನೆಯವರು ಈಗ ಬರತಾರೆ ಅಂತೆ ಹೇಳಿದ್ದಾರೆ.. "
" ಆಯಿತು ಕುಮಾರ.. ನಾ ಸಂಜೆ ಸಿಕ್ಕುತ್ತೆನೆ.... "
-----------------------------

ಇದೊಂದು ೩ ವರ್ಷದ ಹಿಂದೆ ನಡೆದ ಸತ್ಯ ಘಟನೆ..ಮತ್ತು ಇದೊಂದು ನನ್ನ ಗೇಳೆಯರ ಬಳಗದಲ್ಲಿ ಅದ ಮೊದಲ ಯಶ್ವಸಿ ಪ್ರೇಮ ಘಟನೆ....
ಕುಮಾರನಿಗೆ ಈಗ ಒಂದು ಮಗುವಾಗಿದೆ ಮತ್ತು ಯಶ್ವಸಿ ಪ್ರೇಮ ಜೀವನ ನಡೆಸುತ್ತಿದ್ದನೆ...
ಅವನ ಅಣ್ಣನಿಗೆ ಕಳೆದ ತಿಂಗಳು ಮದುವೆಯಾಯಿತು...
ಕುಮಾರನಿಗೆ ಹೆಂಡತಿ ಮನೆಯವರೊಟ್ಟಿಗೆ ಒಂದು ವರ್ಷದ ತನಕ ಮಾತಿರಲಿಲ್ಲಿ, ಒಂದು ಮಗು ಅದ ನಂತರ ಎಲ್ಲ ಈಗ ಒಟ್ಟಿಗೆ ಇದ್ದಾರೆ......

No comments:

Post a Comment