ಆಸೆ.......

ನಿನ್ನ ಕ್ಷೇತ್ರಕ್ಕೆ ಬಂದ ನಂತರ
ಕನಕನಾಗುವ ಆಸೆ
ಬಂತೆಕೇ ನನಗೆ ಉಡುಪಿ ಶ್ರೀ ಕೃಷ್ಣ...
ನಿನ್ನ ಗೀತೆ ಕಲಿತೆ
ನಿನಾಗಾಗಿ ಬರೆದೆ ಒಂದು ಕವಿತೆ
ಮತ್ತೆ ನಾನೇಕೆ
ಕನಕನಾಗಲಿಲ್ಲ ಉಡುಪಿ ಶ್ರೀ ಕೃಷ್ಣ...

ಕನಕನಾಗುವ ಆಸೆ
ಬಂತೆಕೇ ನನಗೆ ಉಡುಪಿ ಶ್ರೀ ಕೃಷ್ಣ...
ನಿನ್ನ ಧ್ಯಾನದಿ ಕುಳಿತೆ
ನನ್ನ ನಾ ಅರಿತೆ
ಈಗ ಕನಕನ ಕಾಲ ಧೂಳಾಗುವ ಆಸೆ
ಬಂತೆಕೇ ನನಗೆ ಉಡುಪಿ ಶ್ರೀ ಕೃಷ್ಣ...

ಕನಕನ ಕಾಲ ಧೂಳಾಗುವ ಆಸೆ
ಬಂತೆಕೇ ನನಗೆ ಉಡುಪಿ ಶ್ರೀ ಕೃಷ್ಣ...
ನನ್ನ ನಾ ಮರೆತೆ
ನಿನ್ನಲಿ ನಾ ಬೆರೆತೆ
ಈಗ ನಾನು ನಾನಾಗುವ ಆಸೆ
ಬಂತೆಕೇ ನನಗೆ ಉಡುಪಿ ಶ್ರೀ ಕೃಷ್ಣ...

ನಾನು ನಾನಾಗುವ ಆಸೆಯಲಿ
ನಿ ನನ್ನ ಸಾರಥಿಯಾದೆ ಉಡುಪಿ ಶ್ರೀ ಕೃಷ್ಣ...
ಧರ್ಮಕ್ಕೆ ದೀಪವಾಗುವೆ
ಅಕರ್ಮದಲ್ಲಿ ನಾಯಿಯಾಗುವೆ
ನಾನು ನಾನಗುವೆ
ಎಲ್ಲರೊಳು ಒಂದಾಗುವೆ ಉಡುಪಿ ಶ್ರೀ ಕೃಷ್ಣ...

No comments:

Post a Comment