ಶಾಂತ ಸಾಗರ.....

ನಾನು ಸಾಗರ್ ಮತ್ತು ಶಾಂತಿ ನನ್ನ ಗೆಳತಿ. ಅವಳ ಬಗ್ಗೆ ಹೇಳ್ ಬೇಕಂತ ಅಂದ್ರೆ ಅವಳು ನನ್ನ ದಿ ಬೆಸ್ಟ್ ಫ್ರೆಂಡ್. ನಾವು ಬಾಲ್ಯದಿಂದ ಸ್ನೇಹಿತರು, ವಿದ್ಯಾಭಾಸವನ್ನ ಒಟ್ಟಿಗೆ ಮುಗಿಸಿದ್ದೆವು. ನಾವು ಒಂದೇ ಪ್ಲಾಟಿನಲ್ಲಿ ಇರುವುದು. ಅವಳು ತುಂಬನೆ ಮುಗ್ದ ಹುಡುಗಿ ಆದ್ರೆ ನನಗೆ ಅವಳ ಕಾಲೆಳೆಯುದು ಅಂದ್ರೆ ತುಂಬನೆ ಕುಶಿ. ನಮ್ಮ ಗೆಳೆತನ ನೋಡಿ ನಮ್ಮ ಪ್ಲಾಟಿನಲ್ಲಿರುವರೆಲ್ಲ ನಮ್ಮಿಬ್ಬರನ್ನ ಶಾಂತ ಸಾಗರ ಅಂತನೆ ಕರೆಯುತ್ತಿದ್ದರು..
ಒಂದು ದಿನ...
" ಹಲಾವರು ದಿನದಿಂದ ಯೋಚಿಸುತ್ತಿದ್ದೆ ಸಾಗರ್ ನಿನ್ನಲ್ಲಿ ಒಂದು ವಿಷಯ ಹೇಳ್ ಬೇಕಂತ.. "
" ಎನಾದು. ತುಂಬ ಪರ್ಸನಲ.... ನಾನು ಮಿನಿ ತಂದೆ ಆಗುತಿದ್ದೆ ನಾ..... "
" ಪ್ರತಿ ಮಾತಿನಲ್ಲಿ ಜೊಕ್ಸ್ ???...... "
" ಜೊಕ್ಸ್ ಬೇಡವಾದರೆ ಹೇಳು ನಾನೆ ಜೋಕರ್ ಆಗುತ್ತೆನೆ.. ಅದೆ ತಾನೆ ಎಲ್ಲ ಹುಡುಗಿಯರಿಗೆ ಇಷ್ಟ "
" ಎಲ್ಲ ಹುಡುಗಿಯಂತೆ ಅಂತ ನನ್ನ ತಿಳಿದು ಕೊಳ್ಳ ಬೇಡ... "
" ಸಾಕಮ್ಮ ಈ ವಿಶ್ಯವನ್ನ ಇಲ್ಲಿಗೆ ನಿಲ್ಲಿಸು ಈ ಮಾಮುಲಿ ಡೈಲಾಗ್ ಪ್ರತಿ ಹುಡುಗಿಯರ ಬಾಯಿಯಲ್ಲಿ ಕೇಳಿ ಸಾಕಾಗಿದೆ ನನಗೆ.. "
" ಮಾತು ಎತ್ತಿದರೆ ಸಾಕು ಉದ್ದುದ್ದ ಭಾಷನ .... ಒಮ್ಮೆ ನೀನು ನಿಲ್ಲಿಸುತಿಯ... ಹುಡುಗಿಯರ ಮನಸ್ಸು ನಿನ್ನಂತವರಿಗೆಲ್ಲಿ ಅರ್ಥವಾಗತ್ತೆ ಬಿಡು... "
" ಓಕೆ. ಆಯಿತಮ್ಮ .... ಶಾಂತಿ ನನ್ನ ಒಮ್ಮೆ ಮದುವೆ ಯಾಗು, ಮೂರು ತಿಂಗಳಲ್ಲಿ ಮಾಡಿಸುತ್ತೆನೆ ನಿನ್ನಿಂದ ವಾಂತಿ...... ಹ್ಹ...ಹ್ಹ...ಹ್ಹ..."
" ನೀವು ಹುಡುಗರು ಎಷ್ಟೇ ಡಿಸೆಂಟ್ ತರ ನಟಿಸಿದರು ನಿಮ್ಮ ಬುದ್ದಿ ಮಾತ್ರ ಬಿಡಲ್ಲ... ಯಾವಾಗಲಾದರು ಒಮ್ಮೆ ಆ ಬುದ್ದಿ ಹೋರ ಬರತ್ತೆ... "
" ಎಲ್ಲ ಹುಡಿಗಿಯರಿಗಷ್ಟೆ ಮೈಗೆ ಸೆಂಟ್ ಹಾಕಿದ ಡಿಸೆಂಟ್ ಹುಡುಗರೆ ಇಷ್ಟ... ಅದಗೊಸ್ಕರನಾದರು ನಾವು ಕೆಲವೊಮ್ಮೆ ಗುಬ್ಬಿವೀರಣ್ಣರಾಗಬೇಕತ್ತೆ... "
" ನನ್ನ ಗುಬ್ಬಿ ವೀರಣ್ಣರೆ ನಿಮ್ಮ ಹತ್ತಿರ ಸ್ವಲ್ಪ ಎನೊ ಮಾತಾಡಲು ಇತ್ತು... "
" ಅಯಿತಮ್ಮ ನೀನು ಶುರುಮಾಡು... "
" ಯಾವಾಗಲು ನನ್ನ ಜನುಮದ ಗೆಳತಿ ಅಂತಿದ್ದಿಯಲ್ಲ, ಈ ಜನುಮದ ಗೆಳತಿಯನ್ನ ನಿನಿಂದ ಮರೆತು ಬಿಡಲು ಸಾಧ್ಯಾನ... "
" ಇಷ್ಟೆನಾ ವಿಷ್ಯ..... "
" ಓಕೆ ನಾಳೆಂದ ನಿನ್ನ ಹತ್ತಿರ ಮಾತಾಡುವುದೆ ಇಲ್ಲ, ನಿನ್ನ ನೋಡಲು ಬರುವುದೆ ಇಲ್ಲ.. ನೀನು ಮಿಸ್ಡ್ ಕಾಲ್ ಕೊಟ್ಟಗ ನಾ ತಿರುಗಿ ಕಾಲ್ ಮಾಡುವುದೆ ಇಲ್ಲ.. ಇಗ ಸಮಾದನ ಅಯಿತ ಅಮ್ಮವರಿಗೆ... "
ನನ್ನ ನಗು ಮುಖ ನೋಡಿ ಅವಳೆಂದಳು " ಸಾಗರ್ ಈಗಾನಾದರು ಸ್ವಲ್ಪ ಸಿರಿಯಸ್ ಹಾಗು "
" ಸಿರಿಯಸ್ ಅಂದ್ರೆ ಆಸ್ಪತ್ರೆಯ ಐಸಿಯು ನಲ್ಲಿ ಮಲಗಿದ ಪೆಶೆಂಟು ತರನ, ಅಲ್ಲ ಶಾವಗಾರದಲ್ಲಿ ಐಸಿನಲ್ಲಿಟ್ಟ ಹೆಣದ ತರನ " ಈಗ ಶಾಂತಿಗೆ ಕೋಪ ಬಂದಂತೆ ಇತ್ತು.. ಅದಕ್ಕೆ ನಾನಂದೆ
" ಆಯಿತಮ್ಮ.. ನಾಳೆಯಿಂದ ನಾ ನಿನ್ನ ನೋಡಲು ಬರುದಿಲ್ಲ ಅದ್ರ ಬದಲು ನೀನೆ ನನ್ನನು ನೋಡಲು ಬಾ, ನಾ ನಿನ್ನ ಹತ್ತಿರ ಎನೂ ಮಾತಡುವುದು ಕೂಡ ಇಲ್ಲ ಆದ್ರ ಬದಲು ನೀನೆ ನನ್ನಲ್ಲಿ ಮಾತಾಡುತ್ತ ಇರು, ಮತ್ತೆ ಇನೊಂದು ವಿಶ್ಯ ಮಿಸ್ಡ್ ಕಾಲ್ ಕೊಡುವುದನ್ನ ಮಾತ್ರ ನಿಲ್ಲಿಸ ಬೇಡ ಎಕೆಂದರೆ ಹುಡಿಗರಂತು ಕಾಲ್ ಮಾಡಿದ್ದು ನಮ್ಮ ಚರಿತ್ರೆಯಲ್ಲಿಯೆ ಇಲ್ಲ ಮತ್ತೆ ನೀ ನಮ್ಮ ಇತಿಹಾಸವನ್ನ ಹಾಳು ಮಾಡ ಬೇಡ. "
" ನೀನೆ ಹೇಳಿದಲ್ಲ ನೀ ಮಿಸ್ಡ್ ಕಾಲ್ ಕೊಡು ನಾನೆ ನಿನಗೆ ಕಾಲ್ ಮಾತಡುತ್ತೆನೆ ಅಂತ "
" ನಾನೆ ಹೇಳಿದ್ದ !! .. ಮರೆತು ಬಿಟ್ಟಿದ್ದೆ, ನಾನು ಅಂದುಕೊಂಡಿದ್ದೆ ಮಿಸ್ಡು ಕಾಲ್ ಕೊಡುವುದು ಹುಡುಗಿರ ಜನ್ಮಸಿದ್ದ ಹಕ್ಕು ಮತ್ತು ಈ ಮಿಸ್ ಗಳೆ (ಹುಡುಗಿ) ಕಾಲ್ ಕೋಟ್ಟು ಕಟ್ ಮಾಡುತಿದ್ದನ್ನ ಜನ ಮಿಸ್ಡ್ ಕಾಲ್ ಅಂತ ಕರೆಯುತ್ತಿದ್ದರು ಅಂತ "
ನನ್ನ ಮಾತು ಕೇಳಿ ಅವಳು ಅಳುವುದಕ್ಕೆ ಶುರುಮಾಡಿದಳು... ಇದು ಹುಡುಗಿಯರ ಕೋನೆಯ ಬ್ರಮ್ಮಾಸ್ತ್ರ.. ಇನ್ನು ನಾನು ಮೌನವಾಗುವುದೆ ಲೇಸು ಅಂತ ಅವಳಲ್ಲಿ ಹೇಳಿದೆ.. " ನಿಂಗೆ ಎನನ್ನ ಹೇಳಕ್ಕೆ ಉಂಟು ಅದನೆಲ್ಲ ಇವತ್ತೆ ಹೇಳಿ ಬಿಡು.. ನಾಳೆ ನಾ ಇರುತ್ತೆನೆ ಅಂತ ಗೊತ್ತಿಲ್ಲ ನನಗೆ.."
" ನಾಳೆ ನಿಂಗೆ ಎಲ್ಲಿ ಹೋಗಕ್ಕೆ ಊಂಟ ???"
" ಎಲ್ಲಿಗು ಇಲ್ಲ... ಆದ್ರೆ ನಿನ್ನ ಕಣ್ಣೀರು ನಿಲ್ಲದಿದ್ದರೆ ನಾ ಅದರಲ್ಲಿ ಕೊಚ್ಚಿಕೊಂಡು ಹೋಗುವ ಛಾನ್ಸ್ ಮಾತ್ರ ಉಂಟು "
" ನಿ ಕೊಚ್ಚಿಕೊಂಡು ಹೋಗುತ್ತಿಯ ಅಂತ ಗೊತ್ತಿಲ್ಲ, ಅದ್ರೆ ನಾನು ಮಾತ್ರ ಮುಂದಿನ ವಾರ ಕೊಚ್ಚಿನ್ಗೆ (ಕೇರಳ) ಹೋಗುವುದು "
" ಕೊಚ್ಚಿನ್ಗ ???........ "
" ಹೌದು.. ತಂದೆಗೆ Transfer ಆಗಿದೆ.. "
" ಇದು electric Transformer ಗಿಂತಲು ಹೆಚ್ಚು ಶಾಕ್ ಕೋಡುವ ವಿಷ್ಯ ... ಅದ್ರು ನಿನಗೆ ನನ್ನ ಬಿಟ್ಟು ಹೋಗಲು ಮನಸ್ಸು ಬರಬಹುದ.. "
" ಮನಸ್ಸು ಬರಬಹುದು ಅಂತ ಗೊತ್ತಿಲ್ಲ ಅದ್ರೆ ನಾ ಮನೆಯವರೊಂದಿಗೆ ಹೊಗುವುದೆ ಸರಿ ಅಂತ ಅನಿಸುತ್ತದೆ ನನಗೆ "

ಎಲ್ಲೊ ಮಲಗಿದ್ದ ನನ್ನ ಮನಸ್ಸು ಎಚ್ಚರ ಕೊಂಡಿತೊ ಎನೊ ನಾ ಅವಳಲ್ಲಿ ಹೇಳಿದೆ
" ಎಲ್ಲರನ್ನ ಬಿಟ್ಟು ನನ್ನೊಟ್ಟಿಗೆ ಓಡಿ ಹೋಗಲು ರೆಡಿ ಇದ್ದಿಯ "
ಅವಳು ನಗುತ್ತ ಅಂದ್ಳು " ಓಡಿ ಕೊಂಡು ಹೋಗಲು ನನ್ನಿಂದ ಅಗದು, ನೀ ಮಿನಿ ಕಾರಲ್ಲಿಯ, ಬೈಕಲ್ಲಿಯ ಕರೆದು ಕೊಂಡು ಹೋದರೆ ನಾನು ರೆಡಿ "
" ಎಯ್, ಜೊಕ್ಸ್ ಅಲ್ಲ.. ನಾ ತುಂಬ ಸಿರಿಯಸ್ ಹಾಗಿ ಹೇಳುತ್ತಿದ್ದೆನೆ "
" ನಾನು ಕೂಡ ಸಿರಿಯಸ್ ಹಾಗಿ ಹೇಳುತ್ತಿದ್ದೆನೆ... ಓಡಿ ಕೊಂಡು ಹೋಗಲು ನಾನೇನು ಪಿ ಟಿ ಉಷ ಎನಾಲ್ಲ.. "
" ಆಯಿತ್ತಮ್ಮ ...... ನಿ ಎನೋ ಹೇಳ್ ಬೇಕಂತೆ ಇದ್ದಿಯಲ್ಲ ಅ ವಿಷಯವಾದರು ಹೇಳು "
" ಹೇಳೊ ವಿಷ್ಯ ಎನಿಲ್ಲ.. ನಾವು ಮುಂದಿನ ವಾರ ಊರು ಬಿಟ್ಟು ಹೋಗುವುದು "
" ನಾವು ಅಂದ್ರೆ ನಾವಿಬ್ಬರ "
" ಅಲ್ಲ ಕಣೊ, ನಾ ಮತ್ತು ನನ್ನ family "
ನಾನ್ನ ಕನಸ್ಸೆಲ್ಲ ಇಲ್ಲಿಗೆ ಮುಗಿದು ಹೋದಾಗೆ ಕಾಣುತ್ತ ಇತ್ತು ಅದ್ರು ನಾನಂದೆ "ನಾವಿಬ್ಬರು ಈಗ ಒಳ್ಳೆ ಫ್ರೆಂಡ್ಸ್... ಮುಂದೆ ಜೀವನ ಸಂಗಾತಿ ಯಾಗ ಬಹುದೆಂದು ಅಂದು ಕೊಂಡ್ಡಿದ್ದೆ... "
" ಸಾಗರ್ ಬೇಜಾರೇಕೆ ನಾವಿಬ್ಬರು ಓಳ್ಳೆ ಫ್ರೆಂಡ್ಸ್ ಹಾಗಿದ್ದೆವು... ಇನ್ನು ಮುಂದು ಕೂಡ ಓಳ್ಳೆ ಫ್ರೆಂಡ್ಸ್ ಹಾಗಿರುತ್ತೆವೆ ಬೀಡು... "
" ಶಾಂತಿ ನಿಂಗೆ ಯಾರೊ ಒಬ್ಬ ಮಹಾನ್ ವ್ಯಕ್ತಿ ಹೇಳಿದ್ದ ಮಾತು ನೆನಪುಂಟ ನಿಮ್ಮ ಒಳ್ಳೆ ಗೆಳತಿನೆ ನಿಮಗೆ ಓಳ್ಳೆ ಜೀವನ ಸಂಗಾತಿ ಅಂತ "
" ನನ್ನತ್ತಿರ ಹಾಗೆ ಯಾರು ಮಹಾನ್ ವ್ಯಕ್ತಿ ಹೇಳಿಲ್ಲ "
" ಹಾಗದರೆ ನನಗೆನೆ ಎಲ್ಲೊ ಕೇಳಿದಾಗೆ ಅದದ್ದು ಆಗಿರಬೇಕು ಅದ್ರೆ ಎಲ್ಲಿ ಅಂತ ನೆನಪಾಗುತ್ತಿಲ್ಲ...... "
ಅವಳು ದೂರ ಹೋಗುತ್ತಾಳೆ ಅಂದ ಮೇಲೆ ಮನಸ್ಸಲ್ಲಿ ಎನೊ ಒಂದು ತರವಾಯಿತು.. ನನ್ನ ಬಾಯಿಂದ ಒಂದು ಕ್ಷಣಕ್ಕೆ ಮಾತೆ ಬರಲಿಲ್ಲಿ......

" ಎನು ಸಾಗರ್ ಸಾರ್... ಎನೊ ಯೋಚನೆ ಮಾಡುವಂತೆ ಇದೆ, ಹುಡುಗಿ ಮಿಸ್ ಆದ್ಳು ಅಂತನ "
" ಹುಡುಗಿ ಮಿಸ್ ಆದ್ಳು ಅಂತ ಅಲ್ಲ.. ಮಿಸಸ್ ಮಾಡಿಕೊಳ್ಳ ಬೇಕಂತೆ ಇದ್ದ ಹುಡುಗಿ ಮಿಸ್ ಅದ್ಳು ಅಂತ ಯೋಚಿಸುತ್ತ ಇದ್ದೆನೆ.. "
" ಮಿಸಸ್ ಹಾಗ ಬಹುದಾಗಿತ್ತು ಆದ್ರೆ ನಿನ್ನ ಒಂದು ಗುಣ ಮಾತ್ರ ಇಷ್ಟವಾಗಿಲ್ಲ "
" ಅಂತ ಯಾವ ನನ್ನ ಓಳ್ಳೇ ಗುಣ ನಿನಗೆ ಇಷ್ಟವಾಗಿಲ್ಲ ಅಂತ ತಿಳಿದು ಕೊಳ್ಳಬಹುದ... "
" ನೀನು ಪ್ರೀತಿಸುವ ರೀತಿನೆ ಸರಿ ಇಲ್ಲ ಬಿಡು "
" ಅಂದ್ರೆ "
" ನೀನು ಎಲ್ಲರನ್ನ ನಿನ್ನ ಹತೋಟಿಯಲ್ಲಿ ಇಡಲು ಪ್ರಯತ್ನ ಪಡುತಿದ್ದಿಯ "
" ನೀ ಎನು ಹೇಳುತಿದ್ದಿಯ ಅಂತ ನಂಗೆ ಅರ್ಥವಾಗಿಲ್ಲ.. ಸ್ವಲ್ಪ ಬಿಡಿಸಿ ಹೇಳ್ತಿಯ.. "
" ಅಂದ್ರೆ ಒಂದು ಹಿಡೀ ಮರಳನ್ನ ಕೈಲ್ಲಿ ಹುಗುರವಾಗಿ ಹಿಡಿದೊಕೋ, ಆ ಮರಳನ್ನ ತನ್ನಷ್ಟಕ್ಕೆ ಇರಲು ಬಿಟ್ಟರೆ ಅದು ಹೆಚ್ಚು ಹೊತ್ತು ಕೈಯಲ್ಲಿಯೆ ಉಳಿದು ಕೊಳ್ಳತ್ತೆ. ಅದೇ ಮರಳನ್ನ ಎಷ್ಟು ಬಿಗಿಯಾಗಿ ಹಿಡಿಯಲು ನೀನು ಪ್ರಯತ್ನಿಸುತ್ತೆವೆಯೊ ಅಷ್ಟೆ ಬೇಗ ಅದು ಕೈ ಬಿಟ್ಟು ಹೋರ ಹೋಗಲು ಶುರಮಾಡತ್ತೆ... ಈಗ ಅರ್ಥವಾಯಿತ.. "
" ಅಂದ್ರೆ ನನ್ನ ಮಾತುಗಳು ನಿನಗೆ ಇಷ್ಟವಾಗಲ್ಲ ಅಂತ "
" ಹಾಗಲ್ಲ.. ನೀ ಯಾವಗಲು ಅದು ಮಾಡ ಬೇಡ, ಇದು ಮಾಡ ಬೇಡ ಅಂತ ಹೇಳುವುದನ್ನ ನಿಲ್ಲಿಸುತ್ತಿಯ, ಆಗ ನಿನ್ನ ಮೇಲೆ ಎಲ್ಲರಿಗು ಪ್ರೀತಿ ಹೆಚ್ಚಾಗಬಹುದು.. ಅಂದ್ರೆ ನಿನ್ನ ಪ್ರೀತಿಗೆ ಸ್ವತಂತ್ರ ಕೊಡು "
" ನಾನು ಇದ್ದದನ್ನ ನೇರವಾಗಿ ಹೇಳುತ್ತೆನೆ ಇದು ನನ್ನ ತಪ್ಪ "
" ಹಾಗಲ್ಲ ಸಾಗರ್... ನೀನು ಯಾರನ್ನ ಪ್ರೀತಿಸುತ್ತಿಯ ಅವರನ್ನ ಸ್ವತಂತ್ರವಾಗಿ ಇರಲು ಬಿಡು "
" ಅದರ ಅರ್ಥ ನಿಜವಾದ ಸಂತೊಷ ಸ್ವತಂತ್ರ ದಲ್ಲಿದೆ ಅಂತ ತಾನೆ "
" ಅಬ್ಬ.. ಇವಾಗವಾದರು ಅರ್ಥವಾಯಿತಲ್ಲ... ಇನಾದರು ನಿನ್ನ ಗುರುವಿನ ಮನಸ್ಸಿಗೆ ತ್ರಿಪ್ತಿಯಾಗ ಬಹುದು... "
" ಈಗ ನನ್ನ ಗುರುವಿನ ಮಾತಾಯಿತು.. ಈಗ ನಿನ್ನ ಗುರು ಹೇಳಿದ ಒಂದು ಮಾತು ನೆನಪುಂಟ "
" ಯಾವ ಮಾತು "
" ನಿಮ್ಮ ಶತ್ರುಗಳನ್ನ ನೀವು ಪ್ರೀತಿಸಿ ಅಂತ... "
" ಅದು ನನ್ನ ಗುರು ಹೇಳಿದ ಎಕೈಕ ಗುರು ಮಾಂತ್ರ ಅದು "
" ಹಾಗದರೆ ನೀನು ನನ್ನನು ಶತ್ರು ಅಂತ ತಿಳಿದು ಪ್ರೀತಿಸುಬಹುದಲ್ಲ "
" ಇದಂತು ಮಾತ್ರ ನಿಜವಾಗಿಯ ಓಳ್ಳೆ ಐಡಿಯ.. ಅದಕಿಂತ ನಾ ನಿನ್ನ ಓಳ್ಳೆ ಗೇಳೆಯನಾಗೆ ಪ್ರೀತಿಸುತ್ತೆನೆ.. "
ಎಕೋ ಇವತ್ತು ಅವಳು ಮಾತಾಡುವಾಗ ಅವಳ ಮಾತು ನನ್ನ ಕಿವಿಗೆ ಬಿಳದೆ ನೇರವಾಗಿ ನನ್ನ ಎದೆ ಮೇಲೆ ಬೀಳುವಾಗೆ ಅಯಿತು.. ಮನಸ್ಸು ಬೇರೆ ತುಂಬನೆ ಭಾರವಾಗ ಶುರುವಾಯಿತು.. ಇಂತ ಸಮಯದಲ್ಲಿ ಎನು ಮಾತಾಡುವುದು ಅಂತ ನನಗೆ ತೋಚಲಿಲ್ಲ ಅದ್ರು ಮನಸ್ಸಿನಲ್ಲಿದ್ದ ಮಾತು ಅವಳ ಮುಂದೆ ಹೇಳ ಬೇಕಂತ ಅವಳ ಮುಂದೆ ಎದ್ದು ನಿಂತೆ.. ಅವಳ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವಷ್ಟು ಧೈರ ನನ್ನಲ್ಲಿ ಇರಲಿಲ್ಲ.. ಆಷ್ಟೆ ಹೋತ್ತಿಗೆ ನನ್ನ ಕಣ್ಣ ಮುಂದೆ..........
" ಎಯ್ ಶಾಂತಿ ನಿನ್ನ ಇಂದೆ ನೋಡು... "
" ನನ್ನಿಂದೆ ಎನಾಗಿದೆ "
" ಅಲ್ಲಿ ನೋಡು.. "
" ಅವರು ಲವರ್ಸ್ ಕಾಣೊ, ಪಾಪ ಮನೆಯವರ ಉಪದ್ರಕ್ಕೆ ಪಾರ್ಕ್ ಗೆ ಬಂದಿದ್ದಾರೆ ಅಂತ ಕಾಣತ್ತೆ. ದಯವಿಟ್ಟು ಅವರನ್ನ ಅವರಷ್ಟಕ್ಕೆ ಬೀಟ್ಟು ಬಿಡೊ ಸುಮ್ಮನೆ.. "
" ಅವರಲ್ಲ ಕಾಣೆ... ಅವರ ಸ್ವಲ್ಪ ಆಚೆಗಾಡೆ ಕೋಳಿ ಮತ್ತು ಮರಿ ಕೋಳಿ ಕಾಣತ್ತ ಅದು "
" ಆದ.. ತಾಯಿ ಕೋಳಿ ತನ್ನ ಮಕ್ಕಳಿಗೆ ಕಾವು ಕೊಡುತ್ತ ಉಂಟು "
" ಆದೆ.. ಆ ತಾಯಿಮಕ್ಕಳನ್ನ ಗಟ್ಟಿ ಅಪ್ಪಿಕೊಂಡತ್ತೆ ಉಂಟು "
" ಹೌದು ಕಾಣೊ... "
" ಒಂದು ನಿಮಿಷ... "
" ಎಯ್, ಸಾಗರ್ ಅದಕ್ಕೆ ಕಲ್ಲು ಎಕೆ ಬಿಸಾಕುತ್ತಿದ್ದಿಯ ..."
" ಆ ಮರಿ ಕೋಳಿ ಮರಿಗೆ ಬಂದನದಿಂದ ಸ್ವತಂತ್ರ ಕೊಡಲು.. ಈಗ ನೋಡಿದ್ದಿಯ ಮರಿಕೋಳಿ ಬಂದನದಿಂದ ಮುಕ್ತಾವಾಯಿತು "
" ನಿಂಗೆ ಎನೊ ಹುಚ್ಚು ಶುರುವಾಗಿದೆಯ "
" ನೋಡಲ್ಲಿ ಮರಿ ಕೋಳಿಗೆ ಸ್ವತಂತ್ರ ಸಿಕ್ಕಿತ್ತು ಆದ್ರೆ ಪ್ರೀತಿಗೆ ಮಾತ್ರ ಅಲ್ಲಿಲ್ಲಿ ಹುಡುಗಾಡುತ್ತ ಉಂಟು "
" ಪ್ರೀತಿ ಸ್ವತಂತ್ರದಲ್ಲಿ ಮಾತ್ರ ಅಲ್ಲ ಕೆಲವೊಂದು ಸಲ ಬಂದನದಲ್ಲಿ ಸಹ ಇರತ್ತೆ... ಅರ್ಥವಾಯಿತ......."
" ನೀನು ಎನು ಹೇಳುತ್ತಿ ಅಂತ ಗೊತ್ತಾಗಿಲ್ಲ ... ನಿಂಗೆ ಪ್ರೀತಿ ಹುಚ್ಚು ಶುರುವಾಗಿದೆ ಅಂತ ಕಾಣತ್ತೆ. "
ಅವಳು ಅಷ್ಟು ಹೇಳುವಷ್ಟರಲ್ಲಿ ನನ್ನ ಕಣ್ಣಿಂದ ಎರಡು ಹನಿ ಕಣ್ಣಿರು ಬಿತ್ತು..
" ಸಾಗರ್..... ಸಾಗರ್ ಎಕೆ ಅಳುತ್ತಿದ್ದಿಯ "
" ಎನಿಲ್ಲ ಬಿಡು... ಎಷ್ಟೊ ಜನರಿಗೆ ತಂದೆ ತಾಯಿ ಪ್ರೀತಿನೆ ಅರ್ಥವಾಗಿಲ್ಲ, ಮತ್ತೆ ನಿನಗೆಲ್ಲಿ ನನ್ನ ಪ್ರೀತಿ ಅರ್ಥವಾದಿತು "
" ಸಾಗರ್, ಅಳ ಬೇಡ... ನಿನಗೆ ನನ್ನಗಿಂತ ಒಳ್ಳೆ ಹುಡುಗಿ ಸಿಕ್ಕುತ್ತಾಳೆ... ಪ್ಲೀಸ್ ಅಳ ಬೇಡ.... "
ಇಷ್ಟು ಅನ್ನುವಷ್ಟರಲ್ಲಿ ಅವಳ ಕಣ್ಣಿಂದ ಸಹ ಎರಡು ಹನಿ ಪ್ರೀತಿ ಬಿತ್ತು...
ಪ್ರತಿಸಲ ಅವಳ ಕಾಲೆಳೆದು ಕುಶಿ ಪಟ್ಟಿದ್ದೆ ಅದ್ರೆ ಇವತ್ತೆನೊ ಅವಳನ್ನ ನಗಿಸುವ ಜೋಕರ್ ಹಾಗುವ ಮನಸಾಯಿತು..
ಅವಳಲ್ಲಿ ನಾನಂದೆ " ನನ್ನ ಕಣ್ಣಿಂದ ನೀರು ಬಂದಂದು ನಾನಗೇನು ಓಳ್ಳೆ ಹುಡುಗಿ ಸಿಗಲ್ಲ ಅಂತ ಅಲ್ಲ, ಆದ್ರೆ ನಿನಗೆ ನನಗಿಂತ ಒಳ್ಳೆ ಹುಡುಗ ಸಿಗಲ್ಲ ಅಂತ "
" ನೀನು ಯಾರು ಎನೇ ಹೇಳಿದ್ರು ಸರಿಯಾಗಲ್ಲ ಕಾಣೊ.. ಪಾಪ ಅಳುತ್ತಿದ್ದಿಯ ಅಂತ ಸಮಾದನ ಮಾಡಿದ್ರೆ ಈಗ ನನ್ನ ನೋಡಿ ನಗುತ್ತಿದ್ದಿಯ... ಪಾಪಿ... ಸತ್ಯವಾಗಿಯು ಹೇಳ್ತೆನೆ ನೀನಂತು ..........."

1 comment: