ಭಗವದ್ಗೀತೆ...

ಭಗವದ್ಗೀತೆಯ ಬಗ್ಗೆ ಎಲ್ಲೊ ಕೇಳಿದ ಒಂದು ಕಥೆ ................

ದಿನ ಭಗವದ್ಗೀತೆ ಓದೋ ತನ್ನ ತಾತನಲ್ಲಿ ಒಂದು ದಿನ ಮೊಮ್ಮಗ ಕೇಳಿದ "ನಾನು ನಿನ್ನ ಹಾಗೆ ಭಗವದ್ಗೀತೆ ಓದಿದೆ.. ಆದರೆ ಏನೊ ಅರ್ಥವಾಗಲಿಲ್ಲ.. ಏನೆಲ್ಲ ಅರ್ಥವಾಯಿತು ಅದು ಪುಸ್ತಕ ಮುಚ್ಚಿದ ಮೇಲೆ ಮರೆತುಬಿಟ್ಟೆ.. ಈ ಭಗವದ್ಗೀತೆ ಓದೋದರಿಂದ ಏನಾದರೂ ಪ್ರಯೋಜನ ಉಂಟ ತಾತ "

ಮಕ್ಕಳ ಪ್ರಶ್ನೆ ಯಾವಾಗಲು ಉತ್ತರಿಸುವದು ಕಷ್ಟ.. ಎಕೆಂದರೆ ಮಕ್ಕಳಿಗೆ ಅರ್ಥವಾಗದಿದ್ದಲ್ಲಿ ಅದಕ್ಕೆ ಮಕ್ಕಳು ಬೇರೆ ಅರ್ಥ ಕೊಡುತ್ತಾರೆ ಎಂದು ತಿಳಿದ ತಾತ ತನ್ನ ಹತ್ತಿರನೇ ಇದ್ದ ಇದ್ದಿಲು ತುಂಬಿಸುವ ಬುಟ್ಟಿಯನ್ನ ಮೊಮ್ಮಗನಲ್ಲಿ ಕೊಟ್ಟು, ಮನೆಯ ಎದುರುಗಡೆ ಇರುವ ನದಿಯಿಲ್ಲಿ ಬುಟ್ಟಿಯನ್ನ ಮುಳುಗಿಸಿ ನೀರು ತುಂಬಿಸಿ ಕೊಂಡು ತರಲು ಹೇಳಿದ...

ಮೊಮ್ಮಗ ಹಾಗೆಯೇ ಮಾಡಿದ, ಆದರೆ ಮನೆ ಮುಟ್ಟುವಷ್ಟರಲ್ಲಿ ಬುಟ್ಟಿಯಲ್ಲಿದ್ದ ನೀರು ಖಾಲಿಯಾಗಿತ್ತು.. ತಾತ "ಸ್ವಲ್ಪ ವೇಗದಿಂದ ನೀ ಬಂದಿದ್ದರೆ.." ತಾತನ ಮಾತು ಕೇಳಿ ಮೊಮ್ಮಗ ಭಗಿರಥ ಪ್ರಯತ್ನ ಮಾಡಿದ... ಏಷ್ಟು ವೇಗ ಹೆಚ್ಚಿಸಿದರೂ ನದಿಯಲ್ಲಿ ಬುಟ್ಟಿಯನ್ನ ಮುಳುಗಿಸಿ ನೀರು ತುಂಬಿಸಿ ಮನೆ ಮುಟ್ಟುವಷ್ಟರಲ್ಲಿ ಬುಟ್ಟಿಯಲ್ಲಿದ್ದ ನೀರು ಖಾಲಿಯಾಗಿರುತಿತ್ತು... ಮೊಮ್ಮಗನಿಗೆ ಬುಟ್ಟಿಯಲ್ಲಿ ನೀರು ತುಂಬಿಸಲು ಅಸಾದ್ಯ ಎಂದು ಗೊತ್ತಿತ್ತು ಅದರೆ ತಾತನಿಗೆ ತಾನು ಏಷ್ಟು ವೇಗ ಹೆಚ್ಚಿಸಿದರು ಇದು ತನ್ನಿಂದ ಅಸಾದ್ಯ ಎಂದು ತೋರಿಸಲು ಮತ್ತಷ್ಟು ಪ್ರಯತ್ನಿಸಿದ. ಕೊನೆಗೆ ಸಾಕಾದಾಗ ಮೊಮ್ಮಗ " ತಾತ ಇದರಿಂದ ಏನೂ ಪ್ರಯೋಜನವಿಲ್ಲ."

"ನಿನ್ನ ಪ್ರಕಾರ ಏನು ಪ್ರಯೋಜನ ಇಲ್ವ??? " ತಾತ ಮೊಮ್ಮಗನಲ್ಲಿ " ಒಮ್ಮೆ ಬುಟ್ಟಿ ನೋಡಿಕೊ "

ಮೊಮ್ಮಗ ಬುಟ್ಟಿ ನೋಡುತ್ತಿದ್ದಂತೆ ತನ್ನ ಕೈಯಲ್ಲಿರುವ ಬುಟ್ಟಿ ಬೇರೆಯಾಗಿತ್ತು ಅಂದರೆ ಇದ್ದಿಲು ತುಂಬಿಸುತಿದ್ದ ಕೊಳಕು ಬುಟ್ಟಿ ಒಳಗು ಮತ್ತು ಹೊರಗು ಶುಚಿಯಾಗಿತ್ತು....

" ಚಿನ್ನ (ಮೊಮ್ಮಗ) ಭಗವದ್ಗೀತೆ ಓದುವದರಿಂದ ಹಾಗುವುದು ಇಷ್ಟೆ... ನಾವು ಅದನ್ನ ಸಂಪೂರ್ಣ ಅರ್ಥ ಮಾಡಿಕೊಳ್ಳುವುದು ಅಥವಾ ಸಂಪೂರ್ಣ ನೆನಪಿನಲ್ಲಿಟ್ಟು ಕೊಳ್ಳುವುದು ತುಂಬ ಕಷ್ಟ ಅದರೆ ಅದನ್ನು ಓದುವದರಿಂದ ನಮ್ಮ ಒಳಗು ಮತ್ತು ಹೊರಗು ಹಲವಾರು ಬದಲಾವಣೆಗಳು ಆಗುವುದು ಮಾತ್ರ ಖಂಡಿತ. ಇದುವೆ ಶ್ರೀ ಕೃಷ್ಣನ ಲೀಲೆ."

No comments:

Post a Comment