ನನ್ನವಳು....

ನೀವು ನನ್ನ ಎಷ್ಟು ಪ್ರೀತಿಸುತ್ತೀರ ???

ಎಂಬ ಶ್ವೇತಳ ಮಾತಿಗೆ ನನ್ನಲ್ಲಿ ಉತ್ತರ ವಿರಲಿಲ್ಲ ಎಕೆಂದರೆ ಮಾದುವೆಯಾದ ೩ ವರ್ಷದ ನಂತರ ಒಮ್ಮೆಲೇ ದಿಡೀರ್ ಅಂತ ಹೆಂಡತಿ ಕೇಳಿದ ಪ್ರಶ್ನೆಗೆ ಯಾವ ಗಂಡನಲ್ಲಿ ಸಹ ಉತ್ತರ ಇರುವುದು ತುಂಬ ಕಷ್ಟ.. ನಿನ್ನೆ ಮನೆಗೆ ಅವಳ ಗೆಳತಿ ಬಂದಿದ್ದಳು. ಇದೆಲ್ಲ ಅದರ ಪರಿಣಾಮವೆ ಇರಬೇಕು. ಮತ್ತೆ ನನ್ನ ಹೆಂಡ್ತಿ ಮಗು ತರ, ಅವಳಿಗೆ ಯಾವುದು ಸರಿ ಯಾವುದು ತಪ್ಪು ಅಂತ ಗೊತ್ತೆ ಇಲ್ಲ, ಯಾರು ಎನು ಹೇಳಿದರೊ ಸತ್ಯನೇ, ಕೆಲವೊಂದು ಸಲ ಅವಳು ಎನು ಮಾತಾಡುತ್ತಾಳೆಂದು ಅವಳಿಗೆಯೆ ಗೋತ್ತಿರುವುದಿಲ್ಲ. ಅದಕ್ಕೆ ಸುಮ್ನೆ ನಾನಂದೆ ಯಾವತ್ತೊ ಮಾಡಿದ ತಪ್ಪನ್ನ ಹೀಗೆ ಒಂದೆ ಸಲ ನನ್ನಲ್ಲಿ ಕೇಳಿದರೆ ನಾ ಹೇಗೆ ಅಂತ ಉತ್ತರಿಸುವುದು !!.
ಅದಕ್ಕೆ ಅವಳೆಂದಳು " ಅದರ ಅರ್ಥ ನೀವು ನನ್ನ ಪ್ರೀತಿಸಲ್ಲ?????? "
ನಾನಂದೆ "ಇಲ್ಲ"
"ನಿಜವಾಗಿಯು ಇಲ್ಲ !!!"
"ನಿಜವಾಗಿಯು ಇಲ್ಲ, ಬೇಕಾದರೆ ನಿನ್ನ ಅಪ್ಪನ ಮೇಲೆ ಅಣೆ" ಇದು ಇನ್ ಡೈರೆಕ್ಟಾಗಿ ಅವಳ ಅಪ್ಪನನ್ನು (ಜನ ಸರಿಯಿಲ್ಲ ಅದಕ್ಕೆ) ಮರ್ಡರ್ ಮಾಡೊ ಮಾಸ್ಟರ್ ಪ್ಲಾನ್ ಅಷ್ಟೆ...
"ನೀವು ಇಲ್ಲ ಅಂದ್ರೆ ನಾ ನಿಜವಾಗಿಯು ಬದುಕಿರಲ್ಲ" ಅಂದ್ಳು ಶ್ವೇತ..
ವಿಷಯ ಸ್ವಲ್ಪ ಗಂಭೀರವಾದಗೆ ಇತ್ತು ಎಕೆಂದರೆ ಅವಳ ಕಣ್ಣಿಂದ ಮುಂಗಾರು ಮಳೆಯೆ ಬಂದಿತ್ತು. ಈ ಇಂದೆ ಶ್ವೇತ ಎಂದು ಕೂಗಿದವಳಲ್ಲ.. ಎನೇ ಬೇಕಿದ್ದರು ನೇರವಾಗಿ ಕೇಳುವಾವಳು.. ಇವತ್ತು ಅವಳ ಹೊಸ ಅವತಾರ ನೋಡಿ ನಿಜವಾಗಿಯ ಆಶ್ಚರ್ಯವಾಯಿತು ನನಗೆ. ಅದ್ರು ನಗುತ್ತ ನಾನಂದೆ " ಇಗಂತು ನೀ ಲಕ್ಷ್ಮೀ ತರ ಕಾಣ್ತಿ " ಇನ್ನೊಂದು ವಿಷಯ ಎನೆಂದರೆ ನನ್ನವಳಿಗೆ ಸಿನಿಮ ತಾರೆ ಲಕ್ಷ್ಮೀ ಅಂದ್ರೆ ತುಂಬನೆ ಇಷ್ಟ.

" ನೀವು ನನ್ನ ಎಷ್ಟು ಪ್ರೀತಿಸುತ್ತೀರ ??? " ಮತ್ತೆ ಆದೆ ಮಾತು ಅವಳಿಂದ, ನನಗೆ ಅನಿಸಿತು ಈ ಹುಡಿಗಿಯರಿಗಂತು ನಮ್ಮ ಗೊಲ್ಡನ್ ಸ್ಟಾರ್ ಗಣೇಶ್ ತರ ಬರಿ ಡೈಲಾಗ್ ಹೇಳುವವರೆ ಬೇಕು. ನಮ್ಮಂತ ಪಾಪದವರ ಪ್ರೀತಿ ಅವರಿಗೆಲ್ಲಿ ಅರ್ಥವಾಗ ಬೇಕು. ನಾನಂದೆ " ನಿನ್ನ ಎಷ್ಟು ಬೇಕಾದರು ಪ್ರೀತಿಸುವ ಆದರೆ ಈಗ ನನ್ನಲ್ಲಿ ಟೈಮ್ ಇಲ್ಲ, ಮೊದಲೆ ಲೇಟು ಅಗುತ್ತ ಉಂಟು, ಮತ್ತೆ ನಾ ಇವತ್ತು ಲೇಟ್ ಗಿ ಹೋದರೆ ನಮ್ಮ್ ಬಾಸ್ ಕೈಲಿ ಉಗಿಸಿಕೊಳ್ಳುಬೇಗಾತ್ತೆ.." ಇಷ್ಟು ಅನ್ನುವಷ್ಟರಲ್ಲಿ ಮತ್ತೆ ಜೋರಾಗಿ ಅಳಲು ಷುರು ಮಾಡಿದ್ದಳು...

ಅವಳು ಅಳುದನ್ನ ನೋಡಿ ನನ್ನ ಕಣ್ಣು ಸಹ ಒದ್ದೆ ಹಾಗೊ ಶುರುವಾಯಿತು ನೋಡಿ, ಇದು ನನ್ನ ವೀಕ್ ಪಾಯಿಂಟ ಅಲ್ಲ ಮತ್ತೆ ಅವಳ ಮೇಲೆ ಇರುವಾ ಪ್ರೀತಿನ ಅಂತ ಗೊತ್ತಾಗಿರಲ್ಲಿಲ್ಲ, ಎಕೆಂದರೆ ಶ್ವೇತ ಯಾವಗ ಅಳುತ್ತಾಳೊ ಹಾಗ ನನ್ನ ಕಣ್ಣು ಸಹ ಒದ್ದೆಯಾಗುತಿತ್ತು. ಮದುವೆ ಯಾದ ಹೊಸತ್ತಲ್ಲಿ ಗಂಡ ಹೇಳುವುದು ಹೆಂಡ್ತಿ ಕೇಳುವುದು, ಸ್ವಲ್ಪ ಹಳೇದಾದ ಮೇಲೆ ಹೆಂಡ್ತಿ ಹೇಳುವುದು ಗಂಡ ಕೇಳುವುದು, ಮಕ್ಕಳದ ಮೇಲೆ ಇಬ್ಬರು ಹೇಳುವುದು ಉರವರು ಕೇಳುವುದು ಅಂತ ಕೇಳಿದ್ದೆ ಆದರೆ ನಮ್ಮ ಮನೆಯಲ್ಲಿ ಹಾಗಲ್ಲ ನೋಡಿ ಹೆಂಡ್ತಿ ಮಾತ್ರ ಹೇಳುವುದು ಕೇಳಿಕ್ಕೆ ಇರುವುದು ನಾನೊಬ್ಬ ಪ್ರಾಣಿ ಮಾತ್ರ..
ನಾನಂದೆ " ಎನಾಯಿತು ಈಗ ನೀ ಇಷ್ಟು ಅಳಲು, ಕಾರಣಾವಾದರು ಹೇಳುತ್ತಿಯ, ಇಲ್ಲ ನಾ ಕೂಡ ನಿನ್ನೊಂದಿಗೆ ಅಳಲು ಷುರುಮಾಡ್ ಬೇಕಾ..."

" ಹಾಗಲ್ಲ.. ನನ್ನ ಗೇಳತಿಯ ಗಂಡ ಬಿಟ್ಟು ಹೋದ್ರು, ಅವರು ನಿಮ್ಮ ತರನೆ ಯಾವಗಲು ಬ್ಯುಸಿ, ಬೆಳಿಗ್ಗೆ ಮನೆಯಿಂದ ಹೋದರೆ ತಿರುಗಿ ಮನೆ ಮುಟ್ಟೊ ಹೊತ್ತು ರಾತ್ರಿಯಾಗುತಿತ್ತು "ನಂಗೆ ಅವಳ ಮಾತು ಕೇಳಿ ನಗೊದೊ ಅಳೊದೊ ಗೊತ್ತಗಿಲ್ಲ, ಎಕೆಂದರೆ ಯಾರೊ ಯಾರನ್ನ ಬಿಟ್ಟು ಹೊದಕ್ಕೆ ನನ್ನ ಹೆಂಡ್ತಿ ಅಳುತ್ತ ಇದ್ದಳೆ.. ಇಂಥ ಹೆಂಡ್ತಿ ಇದ್ದರೆ ಉಡುಪಿ ಶ್ರೀ ಕೃ‍ಷ್ಣನೆ ಕಾಪಾಡ ಬೇಕು ಅಂತ ನಾ ಮನಸ್ಸಲ್ಲಿಯೆ ಅಂದುಕೊಂಡೆ..

ಈಗ ಇವಳನ್ನ ಒಬ್ಬಳೆ ಬಿಟ್ಟು ಹೋದರೆ ಇವಳು ಇನ್ನು ಎನೊ ಯೋಚಿಸಿ ತಲೆ ಹಾಳ್ ಮಾಡುತ್ತಾಳೆ ಎಂಬ ಭಯದಿಂದ ನಾ ಕಾಲೇಜು ದಿನಗಳಲ್ಲಿ ಓದಿದ ಪ್ರೇಮಾಯಣ ಪುಸ್ತಕದ ಒಂದೆರಡು ಡೈಲಾಗ್ ಬಿಟ್ಟೆ.. " ಶ್ವೇತ.... ಇ ಪ್ರೀತಿ, ಪ್ರೇಮಕ್ಕೆ ವಿಶಾಲದ ಅರ್ಥ ಉಂಟು.. ಇದನ್ನ ಅರ್ಥ ಮಾಡಿಕೊಂಡ್ಡವರಿಗಷ್ಟೆ ಗೊತ್ತು.. ಮತ್ತೆ ಇ ಪ್ರೀತಿಯನ್ನ ಅಷ್ಟೊ, ಇಷ್ಟೊ ಅಂತ ಹೇಳಕ್ಕೆ ಹಾಗಲ್ಲ ಎಕೆಂದರೆ ಇದು ನಮ್ಮ ಮನೆ ಎದುರುಗದೆ ಇರುವ ಕಂಜುಸ್ ಶಾಮಣ್ಣನ ಅಂಗಡಿಯಲ್ಲಿಟ್ಟಿರುವ ದಿನಸಿ ವಸ್ತು ಅಲ್ಲ, ಬೇಕಾದಗ ತೂಕ ಮಾಡಿ ಅಷ್ಟೊ, ಇಷ್ಟೊ ಹೇಳಕ್ಕೆ.. ಪ್ರೀತಿಯೆಂದರೆ ಅನುಭವ, ಒಂದು ಮಧುರ ಅನುಭವ, ಅ ಮಧುರ ಅನುಭವ ನಿನಗೆ ಆಗದಿದ್ದರೆ ಅದು ಸಹ ಪ್ರೀತಿ ಯಲ್ಲ, ಆಗ ಅದು ನನ್ನ ಆಸೆಗೆ ನಾ ಕೊಟ್ಟ ಹೆಸರು ಅಷ್ಟೆ.. ಶ್ವೇತ ಈ ಪ್ರೀತಿ ಅಂದರೆ ಅದು ನಿನ್ನ ......."

" ನೀವು ಗಂಡಸರ ಹಣೆಬರಹನೇ ಇಷ್ಟು, ಪ್ರೀತಿಸುತ್ತಿರ ಅಂಥ ಕೇಳಿದರೆ ಗೊತ್ತಿಲ್ಲ ಅಂತಿರ... ಮತ್ತೆ ಯಾರದರು ಸಿಕ್ಕಿದರೆ ಅವಳ ಹಿಂದೆನೆ ಹೊಗುತ್ತಿರ ನನ್ನ ಗೆಳತಿ ಗಂಡನ ಹಾಗೆ... ನಮ್ಮನ್ನ ದೇವರ ಹಾಗೆ ತಲೆ ಮೇಲೆ ಇಟ್ಟು ತಿರುಗಿಸುತ್ತಿರ ಮತ್ತೆ ಒಂದು ದಿನ ಗಣಪತಿ ಬಪ್ಪ ಮೊರಿಯ ಅಂತ ಹೇಳಿ ಕೆರೆಗೋ, ಬಾವಿಗೋ ಹಾಕುತ್ತಿರ..."

ನಾ ಮನಸ್ಸಲ್ಲೆ ಅಂದು ಕೊಂಡೆ ನಿನ್ನ ಗೇಳತಿ ತರ ಹುಡಿಗಿನ ತಲೆ ಮೇಲೆ ಇಟ್ಟು ತಿರುಗಿಸಿದರೆ ಅವಳ ಕಾಲು ನಮ್ಮ ಎದೆ ಮೇಲೆ ಇರತ್ತೆ ಮತ್ತೆ ಅವಳು ಮೆಟ್ಟುವುದು ನಮ್ಮ ಹೃದಯವನ್ನ, ನನ್ನಂತ ಗಂಡದ್ದಿರು ಆದನ್ನು ಸಹಿಸಿಕೊಳ್ಳುತ್ತಾರೆ ಆದರೆ ಇನ್ನು ಕೆಲವರು ಬಾವಿಗೋ, ಕೆರೆಗೋ ಹಾಕುತ್ತಾರೆ...

" ನನಗೆ ಅನಿಸುತ್ತದೆ ಶ್ವೇತ, ನಿನ್ನ ಗೆಳತಿನೆ ಸರಿ ಇಲ್ಲ ಅಂತ, ಅವಳ ಮಾತು ಕೇಳಿ ನೀನೆ ಇಷ್ಟು ಬದಾಲಾಗಿದಿ, ಇನ್ನೊ ಅವಳ ಗಂಡನ ಗತಿ ದೇವರೆ ಬಲ್ಲ.."

ನನ್ನವಳಿಗೆ ಕೋಪ ಸ್ವಲ್ಪ ಜಾಸ್ತಿ ಬಂದಾಗೆ ಇತ್ತು... ಇನಂತ್ತು ಪ್ರೀತಿನ ಸ್ವಲ್ಪ ಬಿಡಿಸಿ ಹೇಳ್ ಬೇಕಾಗತ್ತೆ ಇಲ್ಲಾದಿದ್ದರೆ ಅಂತು ಇವಳಿಗೆ ಅರ್ಥವಾಗಕ್ಕೆ ಇಲ್ಲ ಅಂಥ ಶುರು ಮಾಡಿದೆ ನೊಡಿ..

" ಶ್ವೇತ ನಿನ್ನ ನಾ ಎಷ್ಟು ಪ್ರೀತಿಸುತೆನಂತ ನಿಜವಾಗಿಯು ನನಗೆ ಗೊತ್ತಿಲ್ಲ ಆದರೆ ನಾ ಸಾಯುವವರೆಗು ನಿನ್ನೊಟ್ಟಿಗೆನೆ ಇರುಬೇಕೆಂಬ ಆಸೆ. ನಿನ್ನ ದೇವರ ಆಗೆ ನನ್ನ ತಲೆ ಮೇಲೆ ಇಟ್ಟಿಲ್ಲ ನಾ, ಆದಕ್ಕೂ ಹೆಚ್ಚಾಗಿ ನಿ ಅಂತ ಬಾವಿಸಿ ನಿನ್ನ ನನ್ನ ಹೃದಯದಲ್ಲಿ ಇಟ್ಟಿದ್ದೆನೆ. ಈ ಗಂಡ ಹೆಂಡ್ತಿರ ಸಂಬಂಧ ಜನುಮ ಜನುಮದ ಅನುಬಂದ ಅಂತರೆ, ಅದ್ರೆ ನಂಗೆ ಎಲ್ಲ ಜನುಮದ ಪ್ರೀತಿ ಈ ಒಂದೆ ಜನ್ಮದಲ್ಲಿ ಕೊಡೊ ಆಸೆ. ಈಗ ನಾನು ಹಗಲು ರಾತ್ರಿ ದುಡಿಯುವುದು ನಿನೊಗೊಸ್ಕರ, ನಿನ್ನ ಕನಸ್ಸ ನನಸ್ಸು ಮಾಡಲು ಮಾತ್ರ, ಸ್ವಂತ ಮನೆ ಆಸೆ ನನಗಿಲ್ಲ ಆದರೆ ನಿ ಕಂಡ ಆ ಕನಸ್ಸಿನ ಮನೆಯಲ್ಲಿ ನಿನ್ನ ರಾಣಿಯಾಗೆ ನೋಡಬೇಕೆಂಬ ಆಸೆ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರು ಸಹ ಹೆಚ್ಚಾಗಿ ಪ್ರೀತಿಸುವುದು ತನ್ನನ್ನ ತಾನು ಮಾತ್ರ, ನಾನು ಕೂಡ ಅಷ್ಟೆ... ಅದ್ರೆ ನನ್ನ ಆ "ನಾನು" ಎಂಬ ಪದದಲ್ಲಿ ನೀನು ಕೂಡ ನನ್ನೊಂದಿಗೆ ಇದ್ದಿಯ .."

ಅಷ್ಟೆ ಹೊತ್ತಿಗೆ ಸರಿಯಾಗಿ ಮನೆ ಪೋನ್ ರಿಂಗ್ ಹಾಗೊ ಷುರು ಮಾಡಿತ್ತು, ಪೋನ್ ಎತ್ತಿದೆ ಮತ್ತೆ ಆ ಕಡೆ ಯಿಂದ ಶ್ವೇತ ಇದ್ದಾಳ ಎಂಬ ಧ್ವನಿ, ಆ ಕರ್ಕಶ ಧ್ವನಿ ಕೇಳಿದ ಕೊಡಲೆ ಗೊತ್ತಾಯಿತು ಇದು ಅವಳ ಗೆಳತಿಯದ್ದು ಅಂತ, ಪೋನ್ ಶ್ವೇತಳ ಕೈಗೆ ಕೋಟ್ಟು ನಾ ಆಫೀಸ್ ಗೆ ಹೋರಟೆ ...

ಆದರೆ ನನ್ನವಳಿಗೆ ಈಗ ಸ್ವಲ್ಪ ಸಮಾದನ ಅದಂತೆ ಇತ್ತು..

ನಾ ಆಫೀಸ್ ಮುಟ್ಟುವಾಗ ತುಂಬ ಲೇಟಾಗಿತ್ತು, ಅದ್ರೂ ಇವತ್ತೆನೊ ಬಚಾವ್ ಆಗಿದ್ದೆ ಎಕೆಂದರೆ ಬಾಸ್ ಬಂದಿರಲಿಲ್ಲ. ನಾನೊಬ್ಬ ಬ್ಯಾಂಕ್ ಉದ್ಯಾಮಿ ದಿನ ಬೆಳಿಗ್ಗೆ ಕೆಲಸ ಸ್ವಲ್ಪ ಕಮ್ಮಿ.. ನಮ್ಮ ಬ್ಯಾಂಕ್ ಲ್ಲಿ ಕೆಲಸ ಶೂರುವಾಗುವಾಗ ಸುಮಾರು ೧೧ ಗಂಟೆಯಗತ್ತೆ. ಸುಮಾರು ೧೧.೩೦ ಹೊತ್ತಿಗೆ ನನ್ನ ಮೊಬೈಲ್ ಪೋನ್ ರಿಂಗ್ ಹಾಗೊ ಷುರುವಾಯಿತು, ಕ್ಯಾಶ್ ಲ್ಲಿ ತುಂಬ ಜನ ಇದ್ದರಿಂದ ನಾ ಪೋನ್ ಎತ್ತಲಿಲ್ಲ, ಅರ್ಧ ಗಂಟೆ ನಂತರ ಪೋನ್ ಮತ್ತೆ ರಿಂಗ್ ಹಾಗೊ ಶುರುವಾಯಿತು, ನೋಡಿದೆ ಶ್ವೇತನ ಕರೆ " ನೀವು ೧೦ ನಿಮಿಷದ ಒಳಗೆ ಮನೆಯಲ್ಲಿ ಇರಬೇಕು ಇಲ್ಲದಿದ್ದರೆ ನನ್ನ ಹೆಣ ನೋಡ ಬೇಕಾದಿತು " ಅಲ್ಲಿಗೆ ಪೋನ್ ಕಟ್ಟು, ಮತ್ತೆ ಮನೆಗೆ ರಿಂಗ್ ಮಾಡಿದೆ ಮನೆಯಲ್ಲಿ ಯಾರೊ ಎತ್ತಲಿಲ್ಲ.. ನನಗಂತು ನಿಜವಾಗಿಯು ಭಯವಾಗಿತ್ತು. ಶ್ವೇತ ಮೊದಲೆ ತುಂಬ ಬೇಜಾರಲ್ಲಿ ಇದ್ದ್ಳು , ನಾನಂತು ಸರಿಯಾಗಿ ಅವಳನ್ನ ಮಾತಾಡಿಸಿಲ್ಲ ಬೇರೆ, ನನ್ನ ಕ್ಯಾಶ್ ನ ಕೀ ನನ್ನ ಗೇಳಯ ಹರಿ ನ ಕೈಲಿ ಕೊಟ್ಟು ಮನೆಗೆ ಹೊರಟೆ..

ಆಫೀಸ್ ನಿಂದ ಹೊರಟು ನನ್ನ ಬೈಕಿನಲ್ಲಿ ಕುಳಿತ ನೆನಪು ಮಾತ್ರ ಉಂಟು ನನಗೆ ಮತ್ತೆ ಎನಾಗಿದೆ ಅಂತ ಗೊತ್ತಿಲ್ಲ..

ಇಡೀ ಜಗತ್ತೆ ಕತ್ತಲಾದಗೆ, ನನ್ನ ಸುತ್ತ ಯಾರಿಲ್ಲದ ಅನುಭವ, ನನ್ನ ಕೈ ಮತ್ತು ಕಾಲು ಅಲುಗಾಡಿಸಲು ಅಗಲಿಲ್ಲ, ನನ್ನ ಕಣ್ಣು ಯಾರೊ ಮುಚ್ಚಿದ ಹಾಗೆ, ಶ್ವೇತ ಕೂಗೊ ದ್ವನಿ ಮಾತ್ರ ಕೇಳಿಸುತ್ತ ಉಂಟು.. ಅದರೆ ನನ್ನ ತಲೆಯಲ್ಲಿ ಇರುದು ಒಂದೇ ವಿಷಯ ಹೇಗದರು ಮಾಡಿ ಮನೆ ಮುಟ್ಟು ಬೇಕಂತ, ಒಮ್ಮೆ ಶ್ವೇತನ ನೋಡೊ ಬೇಕಂತ, ಮೆಲ್ಲ ಕಣ್ಣು ಬೀಡಿಸಿದೆ ನನ್ನ ಕೈಗೆ ಸುಜಿ ಚುಚಿದ್ದರೆ, ಮುಗಿನ ಮೇಲೆ ಕ್ರತಕ ಉಸಿರಾಟದ ಮಸ್ಕ್ ಇಟ್ಟಿದ್ದಾರೆ, ಹತ್ತಿರ ಬಿಳಿ ಬಟ್ಟೆ ಹಾಕಿದ ಯೊರೊ ಹುಡುಗಿ ನಿಂತಿದ್ದಾಳೆ, ಕಾಲತ್ತಿರ ಶ್ವೇತ ಅಳುತ್ತ ಇದ್ದಾಳೆ, ನಾ ಕಣ್ಣು ಬಿಟ್ಟದನ್ನ ನೋಡಿ ಶ್ವೇತ " ತಪ್ಪಾಯಿತು ಕಾಣ್ರಿ, ನಾ ನನ್ನ ಗೇಳತಿ ಮಾತು ಕೇಳಿ ನಿಮ್ಗೆ ಪೋನ್ ಮಾಡಿದೆ, ಅವಳೆ ಹೇಳಿದ್ದು, ನಿಮಗೆ ನನ್ನ ಮೇಲೆ ಪ್ರೀತಿ ಇದ್ದರೆ ನೀವು ಹತ್ತೆ ನಿಮಿಷದಲ್ಲಿ ಮನೆ ಮುಟ್ಟಿತ್ತಿರ ಅಂತ.. ಮತ್ತೆ ಹರಿ ಹೇಳಿದಗ ಗೊತ್ತಾಯಿತು ಮನೆ ಮುಟ್ಟೊ ಅವಸದಲ್ಲಿ ನಿಮ್ಮ ಬೈಕ್ ಯಾವೊದೊ ಕಾರ್ ಗೆ ತಾಗಿತ್ತು." ನನಗೆ ಶ್ವೇತ ಹೇಳಿದ ಒಂದು ಮಾತು ಅರ್ಥವಾಗಿಲಲ್ಲಿ, ಆದರೆ ಅರ್ದ ಬಿಡಿಸಿದ ನನ್ನ ಕಣ್ಣುಗಳಲ್ಲಿ ಅವಳ ಮುಖ ಮಾತ್ರ ಇತ್ತು, ನನ್ನ ಕೈಯನ್ನ ಅವಳು ಗಟ್ಟಿಯಾಗಿ ಹಿಡೊಕೊಂಡಿದ್ದಳು, ನನ್ನ ಮನಸ್ಸಿಗೆ ಎನೊ ಖುಶಿಯಾಯಿತು ಎಕೆಂದರೆ ನನ್ನವಳನ್ನು ಯಾವ ಕಾರಣಕ್ಕೊ ಬಿಟ್ಟು ಕೊಡಲಿಲ್ಲ ಅಂತ, ಅವಳು ಫೊನ್ ಲ್ಲಿ ಹೇಳಿದ್ದಳು ನೀವು ಹತ್ತು ನಿಮಿಷದಲ್ಲಿ ಮನೆ ಬರದಿದ್ದರೆ ನಾ ಪ್ರಪಂಚವೆ ಬಿಟ್ಟು ಹೊಗುತ್ತೆನೆ ಅಂತ ಆದರೆ ನನಗೆ ಅವಳ ಮೇಲೆ ಇದ್ದ ಪ್ರೀತಿ ಅವಳನ್ನ ನನಿಂದ ದೊರ ಮಾಡಿಲ್ಲ ಅಂತ. ನನ್ನವಳು ಅಳುವಾಗ ಅಂತು ನಿಜವಾಗಿಯು ಲಕ್ಷ್ಮೀ ತರನೆ ಕಾಣುತಿದ್ದಳು, ನಮ್ಮ ಮನೆಯ ಮಹಾ ಲಕ್ಷ್ಮೀ ತರ.. ಆ ಲಕ್ಷ್ಮೀ ಮುಖ ನನ್ನ ಕಣ್ಣಲ್ಲೆ ಊಳಿಯಿತು ಆದರೆ ಉಸಿರು ಮಾತ್ರ ಅಲ್ಲೆ ಮೆಲ್ಲನೇ ನಿಂತು ಹೋಯಿತು........

No comments:

Post a Comment