ಜನುಮ ಜನುಮದ ಅನುಬಂದ ...

ಎಲ್ಲೊ ಕೇಳಿದ/ಓದಿದ ಒಂದು ಕಥೆ ................

ನಾನು ಕೆಲಸ ಬಿಟ್ಟು ಮನೆ ಸೇರೊ ಹೊತ್ತು ಸುಮಾರು ರಾತ್ರಿ ೧೦ ಗಂಟೆಯಾಗಿತ್ತು. ಮನೆ ಮುಟ್ಟಿದಂತೆ ನನ್ನ ಹೆಂಡತಿ ಶ್ವೇತ ಉಟ ಬಡಿಸಿದಳು, ನಾ ಅವಳ ಕೈ ಹಿಡಿದು ಹೇಳಿದೆ, ನಿನ್ನ ಹತ್ತಿರ ಒಂದು ವಿಷಯ ಹೇಳಲು ಉಂಟು. ನಾ ಹೇಳುವ ವಿಷಯ ಅವಳಿಗೆ ಮೊದಲೆ ಗೊತ್ತಿತ್ತೊ ಎನೊ ಅವಳು ಮ್ವಾನವಾಗಿದ್ದಳು ಆದರೆ ಅವಳ ಕಣ್ಣುಗಳಲ್ಲಿ ನೂರಾರು ಪ್ರಶ್ನೆಗಳಿದ್ದವು.. ಆ ಪ್ರಶ್ನೆಗಳೆಗೆ ನನ್ನಲ್ಲಿ ಉತ್ತರ ಇರಲಿಲ್ಲ. ನಾ ಹೇಳುವ ವಿಷಯ ನನಗೆ ಮಾತ್ರ ಮುಕ್ಯವಾಗಿತ್ತು ಎಕೆಂದರೆ ನನಗೆ ಬೇಕ್ಕಿದ್ದದು ವಿಚ್ಚೇದನೆ.. ನನ್ನ ಮಾತನ್ನ ಅವಳ ಮ್ವಾನದಲ್ಲಿಯೇ ಮುಂದುವರಿಸಿದೆ, ನನ್ನ ಮಾತಿಗೆ ಅವಳು ಕೊಪಗೊಳ್ಳದೆ, ಅವಳಿಂದ ಬಂದ ಉತ್ತರ "ಎಕೆ???" ಎಂಬ ಪ್ರಶ್ನೆ.. ಅವಳಲ್ಲಿ ಮಾಯಳ ಬಗ್ಗೆ ಹೇಳುವ ಅಗತ್ಯ ನಾನಗಿಲ್ಲ ಅಂದು ಕೊಂಡೆ.. ನನ್ನ ಮ್ವಾನ ಅವಳ ಕೋಪಕ್ಕೆ ಕಾರಣವಾಯಿತು.. ಅವಳು ಕೈಯಲ್ಲಿದ್ದ ಉಟದ ತಟ್ಟೆಯನ್ನ ಬಿಸಾಡಿ ನೀ ಮನುಷ್ಯನೆ ಅಲ್ಲವೆಂದು ಬೈದಳು. ಅ ದಿನ ರಾತ್ರಿ ಇಬ್ಬರು ಮ್ವಾನದಲ್ಲಿಯೆ ಕಳೆದೆವು.. ಅದರೆ ಅವಳ ಕೂಗು ರಾತ್ರಿ ಇಡೀ ನನ್ನ ಮಲಗಲು ಬಿಡಲಿಲ್ಲ. ಅವಳ ಕೂಗು ನನಗೆ ಮಾಯಳ ನಗುವಿನ ಮುಂದೆ ಕೇಳಳೆ ಇಲ್ಲವಾದರು ಜೀವನವಿಡಿ ನನ್ನೊಂದಿಗೆ ಇರುವ ಅವಳ ಕನಸ್ಸು ಹತ್ತೆ ವರ್ಷದ ದಾಂಪತ್ಯ ಜೀವನದಲ್ಲಿ ಮುಗಿದು ಹೋಗಿತ್ತು. ನಾನೇನು ಅವಳಿಗೆ ಮೋಸ ಮಾಡಿಲ್ಲ ಎಂದು ನನ್ನ ನಂಬಿಕೆ ಎಕೆಂದರೆ ಅವಳಿಗೆ ಜೀವನಕ್ಕೆ ಬೇಕಾದ ಎಲ್ಲವನ್ನ ನಾನು ಪೂರೈಸುತ್ತೆನೆ ಎಂದು ನಾನು ವಿಚ್ಚೇದನೆ ಕಾಗದಲ್ಲಿ ಬರೆದಿದ್ದೆ...

ಕೊನೆಗು ಶ್ವೇತ ನನ್ನೆದುರು ಕೂಗಿ ನಿಮ್ಮ ಸಂತೋಷಗೊಸ್ಕರ ನಾ ಯಾವುದಕ್ಕೊ ಸಿದ್ದ ಎಂದಳು.. ಇದೆ ಬೇಕಿತ್ತು ನನಗೆ, ಅಂತು ಇಂತು ಅವಳನ್ನ ಬಿಟ್ಟು ನಾನು ಮಯಾಳನ್ನು ಮದುವೆ ಯಾಗುವ ಕನಸ್ಸು ನಿಜವಾಗತ್ತೆವೆಂಬ ನಂಬಿಕೆ.. ಮರುದಿನ ರಾತ್ರಿ ಕೆಲಸದಿಂದ ಬರುವಾಗ ಸ್ವಲ್ಪ ಲೇಟಾಗಿತ್ತು ಎಕೆಂದರೆ ಮಾಯನನ್ನು ಮನೆಗೆ ಬಿಟ್ಟು ಬಂದಿದೆ. ಶ್ವೇತ ಬಾಗಿಲಲ್ಲೆ ನಾನಗಾಗಿಯೆ ಕಾದಿದ್ದಳು. ನನಗೆ ಉಟ ಬಡಿಸಿ ಅವಳು ಮಲಗಿದಳು. ಆದರೆ ಟೇಬಲ್ ಮೇಲೆ ಇದ್ದ ಕಾಗದದಲ್ಲಿ ಅವಳು ಬರೆದ ವಿಚ್ಚೇದನೆಯ ಕೆಲವು ಕಂಡಿಶನ್ ಗಳಿದ್ದವು.. ಈ ಕಂಡಿಶನ್ ಗಳು ನನಗೆ ವಿಚಿತ್ರವಾಗಿತ್ತು ಎಕೆಂದರೆ ಅದರಲ್ಲಿ ಬರೆದಿದ್ದದು, ನನ್ನಿಂದ ಅವಳಿಗೇನು ಬೇಡ, ಆದರೆ ವಿಚ್ಚೇದನೆಯ ಒಂದು ತಿಂಗಳ ಮೊದಲೆ ನೋಟಿಸು ಕೊಡಬೇಕು, ಅ ಒಂದು ತಿಂಗಳು ನಾವು ಸಹಜವಾದ ಜೀವನ ನಡೆಸುವುದು ಎಕೆಂದರೆ ಇದ್ಯಾವುದು ಮಗನ ಮೇಲೆ ಯಾವ ಪರಿಣಾಮ ಬಿಳದಿರಲು. ಇದಕ್ಕೆ ನನ್ನ ಒಪ್ಪಿಗೆ ಸಹ ಇತ್ತು. ಆದರೆ ಅವಳ ವಿಚಿತ್ರ ಕಂಡಿಶನ್ ಅಂದರೆ ನಮ್ಮ ಮದುವೆ ದಿನ ರಾತ್ರಿ ನಾ ಅವಳನ್ನ ಎತ್ತಿಕೊಂಡು ಮನೆಯಬಾಗಿಲಿನಿಂದ ನಮ್ಮ ಬೆಡ್ ರೂಮ್ ತನಕ ಹೊಗಿದ್ದೆ. ಹಾಗೆಯೆ ಈ ಒಂದು ತಿಂಗಳು ಅವಳನ್ನ ಪ್ರತಿದಿನ ಮದುವೆ ದಿನ ರಾತ್ರಿಯಂತೆ ಮನೆಯಬಾಗಿಲಿನಿಂದ ನಮ್ಮ ಬೆಡ್ ರೂಮ್ ತನಕ ಎತ್ತಿಕೊಂಡು ಹೋಗುವುದು. ನನಗೆ ಅನಿಸಿತ್ತು ಅವಳು ಹುಚ್ಚಿಯಾಗಿದ್ದಳೆ ಎಂದು, ಆದರೆ ಈ ಕಂಡಿಶನ್ನ ನಾ ಮಾಯನಲ್ಲಿ ಕೇಳಿ ಒಪ್ಪಿಕೊಂಡೆ ಆದರೆ ಈ ವಿಚಿತ್ರ ಕಂಡಿಶನ್ ಬಗ್ಗೆ ಹೇಳಿದಗ ಮಾಯಳಿಗೆ ಸಹ ನಗೆ ಬಂದಿತ್ತು. ನನ್ನ ಮತ್ತು ಅವಳನ್ನು ಯಾವ ಕಂಡಿಶನ್ ದೂರ ಮಾಡಲ್ಲ ಅಂತ ಮಾಯಳ ನಂಬಿಕೆ.

ನಾನು ಮೊದಲ ದಿನ ಅವಳನ್ನ ನನ್ನ ಕೈಯಲ್ಲಿ ಎತ್ತಿಕೊಂಡಗ ನನಗೆ ನನ್ನ ಮದುವೆಯ ಮೊದಲ ದಿನ ನೆನಪಾಯಿತು. ನಾವಿಬ್ಬರು ಆಗ ಅಪರಿಚಿತರು, ಆಗ ಒಟ್ಟಿಗೆ ಬಾಳೊ ಕನಸ್ಸು ಈಗ ದೂರ ಹಾಗುವ ಆಸೆ. ನನ್ನ ಹಿಂದೆ ಮಗ ಚಪ್ಪಾಳೆ ತಟ್ಟುತಿದ್ದ, ಅಪ್ಪ ಅಮ್ಮನನ್ನ ಎತ್ತಿದ್ದರು ಅಂತ, ಆ ಚಪ್ಪಾಳೆಯ ಸದ್ದು ನನ್ನ ಎದೆ ತಟ್ಟುವಂತಿತ್ತು. ಅವನ ಮುಖದಲ್ಲಿ ಇಂತಹ ಖುಷಿ ನಾ ಹಿಂದೆಂದು ನೋಡಿರಲಿಲ್ಲ. ಅವಳು ಕಣ್ಣು ಮುಚ್ಚ್ಚಿಕೊಂಡಿದ್ದಳು. ನಾನು ಅವಳನ್ನ ಬೆಡ್ ರೂಮಿನ ಬಾಗಿಲಲ್ಲಿ ಬಿಟ್ಟು ನಾ ಮನೆ ಮಹಡಿ ಮೇಲೆ ಹೊಗಿ ಕೂಳಿತೆ.. ಎರಡನೇ ದಿನ ನಾ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಅವಳು ನನ್ನ ಗಟ್ಟಿಯಾಗಿ ಹಿಡಿದು ಕೊಂಡಿದ್ದಳು ಆಗ ಅವಳ ಮುಚ್ಚಿದ ಕಣ್ಣು ನನ್ನನೆ ನೊಡುವಾಗಿತ್ತು. ನಾನು ಇತ್ತಿಚೆಗೆ ಅವಳನ್ನ ಸರಿಯಾಗಿ ನೊಡಲಿಲ್ಲ ಎಂಬ ಬಾವನೆ ನನ್ನಲ್ಲಿ ಉಂಟಾಯಿತು ಎಕೆಂದರೆ ಅವಳು ಮತ್ತಷ್ಟು ಹಗುರವಾಗಿದ್ದಳು, ನಾ ತೆಗೆದು ಕೊಟ್ಟ ಸೀರೆ ರವಕೆಯ ಕೈ ಅವಳಿಗೆ ದೋಡ್ಡದಗಿತ್ತು, ಮುಖದಲ್ಲಿ ನರೆ ಬಂದಿರುವ ಚರ್ಮ, ಕಿವಿಯತ್ತಿರುವ ಹೊಳೆಯುತ್ತಿರು ಬಿಳಿ ಕೂದಲು. ನಾಲ್ಕನೇ ದಿನ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಅವಳು ಮತ್ತಷ್ಟು ಹತ್ತಿರವಾಗಿದ್ದಳು. ಆಗ ನಾನೇನು ತಪ್ಪು ಮಾಡುತ್ತಿರುವಂತೆ ಅನಿಸಿತ್ತು. ಅವಳು ನಾನೊಗೊಸ್ಕರ ಕಳೆದ ಹತ್ತು ವರ್ಷಗಳು ನಾನು ಮತ್ತೆ ಈ ಜನ್ಮದಲ್ಲೆ ಹಿಂದಿರಿಗಿಸಲು ಅಸಾದ್ಯವೆಂಬ ಅನುಭವ. ನನ್ನ ಸುಖಕ್ಕೊ, ಕಷ್ಟಕ್ಕೊ ಸಮವಾಗಿ ಬಾಗಿಯಾದವಳು, ಈಗ ವಯಸ್ಸದಂತೆ ನಾ ಅವಳನ್ನ ಮರೆತೆ ಎಂಬ ಅನುಭವ. ಆರನೇ ದಿನ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಮತ್ತೆ ಹಳೆಯವಾನಾಗುವ ಕನಸ್ಸು. ಈ ಕನಸ್ಸನ್ನ ನಾ ಮಾಯಳಲ್ಲಿ ಹೇಳಿಲಿಲ್ಲ. ನನ್ನ ಶ್ವೇತ ದಿನದಿಂದ ದಿನಕ್ಕೆ ನಾನಗೆ ಹತ್ತಿರವಾಗ ತೊಡಗಿದಳು. ಹೀಗೆ ಎರಡು ವಾರ ಕಳೆದವು ನನ್ನವಳು ದಿನದಿಂದ ದಿನಕ್ಕೆ ತುಂಬ ಕರಗಿ ಹೊಗಿದ್ದಳು. ಆಗ ಅವಳ ನಗು ಮುಖದಲ್ಲಿರು ದುಃಖ ನನಗೆ ಅರ್ಥವಾಗಿತ್ತು. ಮತೊಂದು ವಾರ ನಾ ಹೆಚ್ಚಿನ ಸಮಯ ನನ್ನ ಮಗನೊದ್ದಿಗೆ ಕಳೆದೆ. ಮಗನ ಮಾತಿನಿಂದ ಗೊತ್ತಾಯಿತು ನಾ ಶ್ವೇತಳನ್ನ ಕೈಯಲ್ಲಿ ಎತ್ತಿಕೊಂಡು ಹೊಗುವದು ಅವನ ಜೀವನದ ಅಮುಲ್ಯವಾದ ಕ್ಷಣಗಳಲ್ಲಿ ಒಂದು ಅಂತ. ಈ ಮಾತನ್ನ ಕೇಳಿ ಅವಳು ಮಗನನ್ನ ಗಟ್ಟಿಯಾಗಿ ಹಿಡಿದುಕೊಂಡು ಅತ್ತಳು. ಅ ಕ್ಷಣ ಅವಳನ್ನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡು ನನ್ನ ತಪ್ಪನ್ನ ಒಪ್ಪಿ ಅವಳನ್ನ ಸಮಾದನ ಮಾಡಬೆಕೇಂದು ಅನಿಸಿತು ಆದರೆ ಆಗ ಅಷ್ಟು ಶಕ್ತಿ ನನ್ನಲ್ಲಿ ಇರಲಿಲ್ಲ, ನನ್ನ ಮನಸ್ಸು ಬದಲಾಗುವ ಮುಂಚೆ, ಅ ಕ್ಷಣವೇ ನಾ ಎದ್ದು ಮಾಯಳ ಮನೇಗೆ ಹೋದೆ.. ಬಾಗಿಲಲ್ಲೆ ನಿಂತು ಮಾಯಳಲ್ಲಿ ಹೇಳಿದೆ ಶ್ವೇತನಿಗೆ ವಿಚ್ಚೇದನೆ ಕೊಡುವುದು ಅಸಾದ್ಯ, ಕಾರಣ ಕೇಳಿದಳು. ಎಲ್ಲದಕ್ಕೆ ಕಾರಣ ನಾನೆ, ನಮ್ಮ ದಾಂಪತ್ಯ ಜೀವನದಲ್ಲಿ ನಾ ಎಂದು ಹೆಚ್ಚಿನ ಗಮನ ಕೊಡಲಿಲ್ಲ, ನಾ ನನ್ನ ಕೇಲಸದಲ್ಲಿಯೆ ಮಗ್ನೆ ನಾಗಿದ್ದೆ. ಪ್ರೀತಿ ಇಬ್ಬರಲ್ಲಿತ್ತು ಅದರೆ ಯಾವಾಗಲು ಅದನ್ನ ಹಂಚಿ ಕೊಂಡಿರಲಿಲ್ಲ. ಅವಳು ಅನ್ನುವಷ್ಟರಲ್ಲಿ ಮಾಯ ನನ್ನ ಕಪಾಳಕ್ಕೆ ಬಾರಿಸಿದಳು. ಅವಳಿಗೆ ಎಲ್ಲದಕ್ಕೆ ಉತ್ತರ ಸಿಕ್ಕಿದಂತಿತ್ತು.

ಮಾಯನ ಮನೆಯಿಂದ ಹಿಂದಿರುವಾಗ ಹೂ ಮಾರ್ಕೆಟು ಹೋದೆ, ನನ್ನವಳಿಗೆ ಮಲ್ಲಿಗೆಯಂದರೆ ಇಷ್ಟ, ಹೂ ಮಾರುವವಳಿಂದ ಒಂದು ಬುಟ್ಟಿ ಹೂವ ತೆಗೆದುಕೊಂಡೆ. ಹೂ ಮಾರುವವಳು ಕೇಳಿದಳು "ಎನ್ ಸಾರ್ ಒಂದು ಬುಟ್ಟಿ ಹೂವ wife ಗೆಯ" ನಾ ಅಂದೆ "ಅಲ್ಲ ನನ್ನ Life ಗೆ "...

No comments:

Post a Comment